ಸರಕಾರಿ ಕಾಲೇಜು, ತೆಂಕನಿಡಿಯೂರು: ಹೆಚ್ಐವಿ/ ಏಡ್ಸ್ ಜಾಗೃತಿ ಕಾರ್ಯಕ್ರಮ

Upayuktha
0

 


 

ತೆಂಕನಿಡಿಯೂರು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ,  ರೆಡ್ ರಿಬ್ಬನ್ ಕ್ಲಬ್ ಹಾಗೂ ಮುನಿಯಾಲು ಆಯುರ್ವೇದ ವೈದ್ಯಕೀಯ ವಿಜ್ಞಾನ ಕಾಲೇಜು, ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

ಮುನಿಯಾಲು ಆಯುರ್ವೇದ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಆಶಿತಾ. ಆರ್ ಮಾತನಾಡಿ ಎಚ್ಚರಿಕೆಯ ಜೀವನವೇ ಏಡ್ಸ್ ನಂತಹ ಮಾರಕ ರೋಗವನ್ನು ನಿಯಂತ್ರಿಸಲು ಸಾಧ್ಯ, ಯುವ ಜನತೆ ಹೆಚ್ಚು ಜಾಗೃತರಾಗಬೇಕು ಎಂಬ ಸಂದೇಶದೊಂದಿಗೆ, ಏಡ್ಸ್ ಎಂದರೇನು  ಕಾರಣಗಳೇನು ಮತ್ತು  ಪರಿಹಾರಗಳ ಕುರಿತಾದ ಸಮಗ್ರ ವಿವರಣೆ ನೀಡಿದರು. 

ಅಧ್ಯಕ್ಷತೆ ವಹಿಸಿದ  ಪ್ರಾಂಶುಪಾಲ ನಿತ್ಯಾನಂದ ವಿ ಗಾಂವ್ಕರ್ ಪರಿಶುದ್ಧ ಜೀವನ ನಡೆಸಿದ್ದಲ್ಲಿ, ಯಾವ ರೋಗ ರುಜಿನಗಳ ಬಗ್ಗೆ ಚಿಂತಿಸಬೇಕಾಗಿಲ್ಲ, ನೀತಿಯುತ ಬದುಕು ಸಾಮಾಜಿಕ ಸ್ವಾಸ್ಥ್ಯವನ್ನು  ಸುಧಾರಿಸುತ್ತದೆ ಎಂದರು. 

ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ ರಘು ನಾಯ್ಕ, ರೆಡ್ ಕ್ರಾಸ್ ಘಟಕ ಸಂಚಾಲಕ ಪ್ರಶಾಂತ್ ನೀಲಾವರ, ಮುನಿಯಾಲು ಆಯುರ್ವೇದ ಕಾಲೇಜಿನ ಎನ್ಎಸ್ಎಸ್ ಯೋಜನಾಧಿಕಾರಿಗಳಾದ ಡಾ ನವನೀತ್, ಡಾ ನಿಧಿ, ಡಾ. ರಿತಿಕ, ಹಾಗೂ ತೆಂಕನಡಿಯೂರು ಕಾಲೇಜಿನ ಬೋಧಕ ಬೋಧಕೇತರ ವೃಂದದವರು  ಉಪಸ್ಥಿತರಿದ್ದರು. 

ಎನ್ ಎಸ್ ಎಸ್  ಘಟಕ ಎರಡರ ಯೋಜನಾಧಿಕಾರಿ ಡಾ. ಜಯಮಂಗಳ ವಂದಿಸಿ, ಘಟಕ ಒಂದರ ಯೋಜನಾಧಿಕಾರಿ  ಬಾಲರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ 200 ವಿದ್ಯಾರ್ಥಿಗಳು  ಕಾರ್ಯಕ್ರಮದ ಸದುಪಯೋಗ ಪಡೆದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top