ಸುಧೀಂದ್ರನಗರ ರಾಯರ ಮಠದಲ್ಲಿ ಗುರುರಾಯರ ಆರಾಧನೆ

Upayuktha
0

 


ಬೆಂಗಳೂರು: ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ನಗರದ ಈಜುಕೊಳ ಬಡಾವಣೆಯ ಸುಧೀಂದ್ರನಗರದ 6ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 'ಕಲಿಯುಗದ ಕಾಮಧೇನು' ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವನ್ನು ಆಗಸ್ಟ್ 19 ರಿಂದ ಸೆಪ್ಟೆಂಬರ್ 1ರ ವರೆಗೆ ಆಯೋಜಿಸಲಾಗಿದೆ.


ಆಗಸ್ಟ್ 19-ಶ್ರೀಮನ್ಮಾಧವತೀರ್ಥ ಮಠಾಧೀಶರಾದ ಶ್ರೀ ವಿದ್ಯಾವಲ್ಲಭಮಾಧವತೀರ್ಥ ಶ್ರೀ ಪಾದಂಗಳವರಿಂದ ಸಮಾರಂಭದ ಉದ್ಘಾಟನೆ ಮತ್ತು ಅನುಗ್ರಹ ಸಂದೇಶ.


ಭಜನಾ ಕಾರ್ಯಕ್ರಮ : ಪ್ರತಿದಿನ ಸಂಜೆ 5-30ಕ್ಕೆ ವಿವಿಧ ಭಜನಾ ಮಂಡಲಿಗಳ ಸದಸ್ಯರಿಂದ "ಹರಿ ಭಜನೆ" ಸಾಂಸ್ಕೃತಿಕ ಕಾರ್ಯಕ್ರಮಗಳು (ಪ್ರತಿದಿನ ಸಂಜೆ 6-30ಕ್ಕೆ) ಆಗಸ್ಟ್ 20-ಕೆ.ಪಿ. ಶಿಶಿರ್ ಮತ್ತು ಸಂಗಡಿಗರಿಂದ "ಹರಿದಾಸ ವರ್ಷಿಣಿ", ಆಗಸ್ಟ್ 21-ಪ್ರಾಣೇಶ್ ಪಿ. ಭಾರಧ್ವಾಜ್ ಮತ್ತು ಸಂಗಡಿಗರಿಂದ "ಹರಿದಾಸ ವೈಭವ", ಆಗಸ್ಟ್ 22-ಡಾ|| ಮಾಲಿನಿ ರವಿಶಂಕರ್ ಶಿಷ್ಯೆಯರಾದ ಶ್ರೇಯಾ ಮತ್ತು ಮಂದಾರ ಇವರಿಂದ "ಭರತನಾಟ್ಯ ಪ್ರದರ್ಶನ", ಆಗಸ್ಟ್ 23- ಮಾನಸಾ ಕುಲಕರ್ಣಿ, ಸುಮಲತಾ ಮಂಜುನಾಥ್ ಮತ್ತು ಸಂಗಡಿಗರಿಂದ "ಹರಿದಾಸ ಮಂಜರಿ", ಆಗಸ್ಟ್ 24-ನಿರೀಕ್ಷ ಎಂ. ರಾವ್ ಮತ್ತು ಸಂಗಡಿಗರಿಂದ "ಹರಿದಾಸ ಝೇಂಕಾರ", ಆಗಸ್ಟ್ 25-ಸ್ಫೂರ್ತಿ ಗುರುಪ್ರಸಾದ್ ಮತ್ತು ಸಂಗಡಿಗರಿಂದ "ವೀಣಾ ವಾದನ), ಆಗಸ್ಟ್ 26- ಸುಶ್ರುತ್ ರಾವ್ ಮತ್ತು ಸಂಗಡಿಗರಿಂದ "ಹರಿದಾಸ ನಮನ".


ಧಾರ್ಮಿಕ ಪ್ರವಚನ ಕಾರ್ಯಕ್ರಮ : ಆಗಸ್ಟ್ 27- ವೇಣುಗೋಪಾಲಾಚಾರ್ ಅಗ್ನಿಹೋತ್ರಿ, ಆಗಸ್ಟ್ 28- ವೆಂಕಟನರಸಿಂಹಾಚಾರ್, ಆಗಸ್ಟ್ 29- ಮರುತಾಚಾರ್ , ಆಗಸ್ಟ್ 29-ಮಾಳಗಿ ಆನಂದತೀರ್ಥಾಚಾರ್, ಆಗಸ್ಟ್ 30-ದ್ವೈಪಾಯನಾಚಾರ್, ಆಗಸ್ಟ್ 31-ಕಲ್ಯಾ ಶ್ರೀಕಾಂತಾಚಾರ್ ಇವರುಗಳು ಪ್ರವಚನ ನೀಡಲಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top