ಸುರತ್ಕಲ್: ನೇತ್ರದಾನದ ಮೂಲಕ ಇಬ್ಬರ ಬದುಕಿನಲ್ಲಿ ದೃಷ್ಟಿಯ ಬೆಳಕನ್ನು ಮೂಡಿಸಲು ಸಾಧ್ಯ. ಕಿರಿಯರಿಂದ ತೊಡಗಿ ಹಿರಿಯರ ತನಕ ನೇತ್ರದಾನ ಮಾಡಲು ಸಾಧ್ಯವಿದ್ದು ಮರಣ ನಂತರದಲ್ಲಿ ನಾಲ್ಕರಿಂದ ಆರು ಗಂಟೆಯೊಳಗೆ ನೇತ್ರ ಸಂಗ್ರಹಣೆ ಮಾಡಬೇಕಾಗುತ್ತದೆ. ಭಾರತ ದಲ್ಲಿ ದೃಷ್ಟಿ ಹೀನರು ಕಾರ್ನಿಯಾ ಅಳವಡಿಕೆಯ ಮೂಲಕ ದೃಷ್ಟಿ ಭಾಗ್ಯಕ್ಕೆ ಕಾಯುತ್ತಿದ್ದು ಪ್ರತಿಯೊಬ್ಬರು ನೇತ್ರದಾನದ ಮೂಲಕ ಅಂಧರ ಬಾಳಿಗೆ ಬೆಳಕಾಗ ಬೇಕು ಎಂದು ಹಾವೇರಿ ಜಿಲ್ಲಾ ನೇ ತ್ ದಾನ ಪ್ರೇರಣಾ ಸಂಘ ದ ಅಧ್ಯಕ್ಷ ರೊ.ಪಿ. ಪ್ರಭಾಕರ ರಾವ್, ಹಾವೇರಿ ಹೇಳಿದರು.
ಅವರು ಸುರತ್ಕಲ್ ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ನಸಹಯೋಗದಲ್ಲಿ ಆಯೋಜಿಸಿದ್ದ ಆಷಾಡದ ಸಡಗರ ಅಟಿದ ಕೂಟ ದಲ್ಲಿ ವಿಶೇಷ ಯೋಜನೆ 'ದಿವ್ಯದೃಷ್ಟಿ' ನೇತ್ರ ದಾನ ಸಂಕಲ್ಪ ಪತ್ರ ಬಿಡುಗಡೆ ಮತ್ತು ನೋಂದಾವಣೆ ಅಭಿಯಾನ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ರೊ. ಶ್ರೀಧರ್ ಟಿ. ಎನ್. ಮಾತನಾಡಿ ನೇತ್ರದಾನದ ಕುರಿತಾಗಿ ನೇತ್ರ ದಾನಿಗಳು ಹಾಗೂ ಅವರ ಸಂಬಂಧಿಗಳಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯಬೇಕಾಗಿದ್ದು ದಿವ್ಯ ಜ್ಯೋತಿ ಯೋಜನೆ ವಿವಿಧ ಸಮಾಜ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ದೃಷ್ಟಿ ಹೀನರ ಬದುಕಿನಲ್ಲಿ ಬೆಳಕು ಮೂಡಿಸುವಂತಾಗಬೇಕು ಎಂದರು.
ಸುರತ್ಕಲ್ ರೋಟರಿ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್, ಸುರತ್ಕಲ್ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಪರಿಮಳ ರಾವ್, ಹಿಂದು ವಿದ್ಯಾದಾಯಿನಿ ಸಂಘದ ಮಾಜಿ ಕಾರ್ಯದರ್ಶಿ ಎಂ. ವೆಂಕಟ್ರಾವ್, ಸುರತ್ಕಲ್ ರೋಟರಿ ಕ್ಲಬ್ ನಿರ್ದೇಶಕ ಡಾ. ಪ್ರಥ್ವೀರಾಜ್ ಉಪಸ್ಥಿತರಿದ್ದರು.
ಯೋಜನೆಯ ನಿರ್ದೇಶಕ ಡಾ. ಕೆ. ರಾಜಮೋಹನ ರಾವ್ ಕಾರ್ಯ ಯೋಜನೆಯ ಕುರಿತು ವಿವರಗಳನ್ನು ನೀಡಿದರು. ಕೃಷ್ಣ ಮೂರ್ತಿ. ಪಿ. ಅತಿಥಿಗಳನ್ನು ಪರಿಚಯಿಸಿ, ಕಾರ್ಯದರ್ಶಿ ಶ್ರೀನಿವಾಸ ರಾವ್ ಪಾದೆಬೆಟ್ಟು ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

