ರೀಲ್ಸ್ ಇದೊಂದು ಮಾಯಾಬಜಾರ್

Upayuktha
0

 

     AI ಚಿತ್ರ


ನಾನೊಬ್ಬಳು ಈಗಿನ ಕಾಲದ , ಎ ಐ ಯುಗದ ವಿದ್ಯಾರ್ಥಿನಿ., ಯಾಕೆ ಹೀಗೆ ಅಂದೆ ಅಂದ್ರೆ ಒಂದು 10 ವರ್ಷದ ಹಿಂದೆ ನಮ್ಮದೇ ವಯಸಲ್ಲಿದ್ದ ಅನೇಕ ಯುವಕ ಯುವತಿಯರಿಗೆ ಸಮಯವನ್ನು ಕಳೆಯಲು ಅನೇಕ ದಾರಿಗಳಿತ್ತು. ಪುಸ್ತಕಗಳನ್ನು ಓದುವುದು , ಛಾಯಾಚಿತ್ರಗಳನ್ನ ತೆಗೆಯುವುದು , ಅಡುಗೆ , ಕರಕುಶಲತೆ , ಪರಿಸರ ಸ್ನೇಹಿ ಚಟುವಟಿಕೆಗಳು, ಹೀಗೆ ಒಂದಲ್ಲ ಒಂದು ಕೆಲಸ ಇದ್ದೇ ಇರುತ್ತಿತ್ತು.
ಅದೇ ಈಗಿನ ನಾವುಗಳು ನಮ್ಮ ಯವ್ವನದಲ್ಲಿ ಅನೇಕ ಕೆಲಸಗಳಿದ್ದರೂ ಮಾಡುತ್ತಿರುವುದು ಮಾತ್ರ ಒಂದೇ ಕೆಲಸ ಅದೇನಂದರೆ  ಒಂದೇ  ಬೆರಳಿನ ಸಹಾಯದಿಂದ  ಇಡೀ ಲೋಕವನ್ನೇ ಬಿಟ್ಟ ಕಣ್ಣುಗಳಿಂದ ನೋಡುವುದು.


ಹೌದು,, ನಾನು ಹೇಳುತ್ತಿರುವುದು ರೀಲ್ಸ್ ಎಂಬ ಮಾಯಾಲೋಕದ ಬಗ್ಗೆ..
ಇನ್ಸ್ಟಾಗ್ರಾಮ್  ಎಂಬ  ಬೃಹದ್ ಜಾಲದಲ್ಲಿ ನಮ್ಮನ್ನೆಲ್ಲ ಸಿಲುಕಿಸಿರುವ ಒಂದು ಮಾಯೆ ಎಂದರೆ ಅದು ರೀಲ್ಸ್ , ಇದರ ಮೋಹಕ್ಕೆ ಒಳಗಾಗದವರು ಈ ಯುಗದಲ್ಲಿ ಕಡಿಮೆ ಎಂದು ನನಗನಿಸುತ್ತೆ.. ಯಾಕಂದ್ರೆ ಹಲ್ಲುಬಾರದ ಮಗುವಿನಿಂದ ಹಿಡಿದು ಹಲ್ಲು ಉದುರುತ್ತಿರುವ ಮುದುಕನವರೆಗೂ ಎಲ್ಲರಿಗೂ ಇದು ಒಂದು ಮಾಯಾಲೋಕದಂತೆ ಭಾಸವಾಗುತ್ತಿದೆ ಎಂದು ನನಗನಿಸುತ್ತೆ.


ರೀಲ್ಸ್ ಎಂದರೆ  ಅದು ಕೇವಲ ಮನರಂಜಕಾತ್ಮಕವಾದುದು ಮಾತ್ರವಲ್ಲ.. ಬದಲಾಗಿ ರಿಲ್ಸ್ ನಲ್ಲಿ ಧನಾತ್ಮಕವಾದುದು, ಋಣಾತ್ಮಕವಾದದ್ದು ಎರಡು ಇರುವುದರಿಂದ ಯಾವುದನ್ನು ಆರಿಸಬೇಕು ಎಂಬುದು ನಮ್ಮ ನಮ್ಮ ಮನಸ್ಥಿತಿಗೆ ಬಿಟ್ಟದ್ದು.


ಈಗಿನ ಎಷ್ಟೋ ಹೆತ್ತವರಿಗೆ ತಮ್ಮ ಮಕ್ಕಳು ರೀಲ್ಸ್ ನೋಡುವುದರಿಂದ ಹಾಳಾಗುತ್ತಿದ್ದಾರೆ ಎಂಬ ಭಾವನೆ ಇದೆ, ಇದು ತಪ್ಪು ಎಂದು ನಾನು ಹೇಳಲಾರೆ ಯಾಕೆಂದರೆ ಇದು ಹೆತ್ತವರ ಕಾಳಜಿಯ ಮೂಲವಾಗಿರಬಹುದು ಆದರೆ ಯಾವುದನ್ನು ಎಷ್ಟು ನೋಡಬೇಕು ಎಂಬುದು ನಮಗಿರಬೇಕಾದ ಸ್ವಂತ ಬುದ್ಧಿ.


ರೀಲ್ಸ್ ನೋಡುವುದು ಸಂಪೂರ್ಣವಾಗಿ ಕೆಟ್ಟದು ಎಂದು ನಾನು ಹೇಳುವುದಿಲ್ಲ,, ಯಾಕೆಂದರೆ ಅದೆಷ್ಟೋ ಬಾರಿ ನಾವು ಬೇಸರದಲ್ಲಿದ್ದಾಗ ಸಣ್ಣ ವಿಡಿಯೋ ತುಣುಕು ನಮ್ಮ ಬೇಸರವನ್ನು ಕಳೆಯಲು ನಮಗೆ ಸಾತ್ ನೀಡುತ್ತದೆ,, ಇದು ನನ್ನ ವೈಯಕ್ತಿಕ ಅಭಿಪ್ರಾಯ.


ರೀಲ್ಸ್ ಎಂಬ ಮಾಯಾಲೋಕದಲ್ಲಿ ಮುಳುಗುವ ಮುನ್ನ ಸ್ವಲ್ಪ ಯೋಚಿಸಬೇಕು ರೀಲ್ಸ್  ನಮ್ಮ ಸಂತೋಷಕ್ಕೆ ಅದರಂತೆ ದುಃಖಕ್ಕೂ ಕಾರಣವಾಗಬಹುದು .
ಸಂತೋಷಕ್ಕೆ ಕಾರಣವಾದರೆ ಅದನ್ನು ಸ್ವೀಕರಿಸೋಣ ಆದರೆ ಅತಿಯಾದರೆ ಅಮೃತವು ವಿಷ ಎಂಬ ಮಾತಿದೆ ಹಾಗೆ ಸ್ವಲ್ಪ ಸಮಯವನ್ನು ರೀಲ್ ನೋಡುವುದಕ್ಕೆ ಮೀಸಲಿರುವುದು ತಪ್ಪಲ್ಲ ಆದರೆ ಅದೇ ಚಟವಾಗಿ ಬಿಡಬಾರದು .


ನಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿದ ನಂತರ ನಮ್ಮ ಬಿಡುವಿನ ಸಮಯದಲ್ಲಿ  ಆದರೂ ನಮ್ಮ ಮೈಂಡ್ ಫ್ರೆಶ್ ಗಾಗಿ ಮಾತ್ರ ನಾವು ಇದಕ್ಕೆ ಸಮಯ ಕೊಡಬೇಕು ಅದನ್ನು ಹೊರತುಪಡಿಸಿ ರಿಲ್ಸ್ ನೋಡುವುದೇ ಒಂದು ಕೆಲಸವಾಗಿ ಬಿಟ್ಟರೆ ಅದರಷ್ಟು ಕೆಟ್ಟ ಚಟ ಮತ್ತೊಂದಿಲ್ಲದಂತಾಗುತ್ತದೆ.


- ಹರ್ಷಿತ ಶಿಶಿಲ 
ದ್ವಿತೀಯ ಪತ್ರಿಕೋದ್ಯಮ ವಿಭಾಗ 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top