ಕಾರ್ಯನಿರತ ಮತ್ತು ನಿವೃತ್ತ ವಿಪ್ರನೌಕರರ ಸಂಘದಿಂದ ಸನ್ಮಾನ
ಸಾಗರ: ಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ವೈ. ಮೋಹನ್ ಅವರನ್ನು ಕಾರ್ಯನಿರತ ಮತ್ತು ನಿವೃತ್ತ ವಿಪ್ರನೌಕರರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಸನ ರವರು ಗಣಪತಿ ಬ್ಯಾಂಕ್‌ನ್ನು ಹಿಂದಿನ ಮಹನೀಯರು ಅಪಾರ ಪರಿಶ್ರಮದಿಂದ ಕಟ್ಟಿ ಬೆಳೆಸಿದ್ದು, ಅವರ ದೂರದೃಷ್ಟಿ ಮತ್ತು ಶ್ರಮದ ಫಲವಾಗಿ ಬ್ಯಾಂಕ್ ಇಂದು ಉನ್ನತ ಸ್ಥಾನವನ್ನು ಸಹಕಾರಿ ಕ್ಷೇತ್ರದಲ್ಲಿ ಗಳಿಸಿದೆ ಎಂದು ಹೇಳಿದರು. ಪ್ರಸ್ತುತ ಕೆಲವು ಬ್ಯಾಂಕ್‌ಗಳು ಹಾಗೂ ಸಹಕಾರ ಸಂಸ್ಥೆಗಳು ಸಾರ್ವಜನಿಕರ ವಿಶ್ವಾಸ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ, ಗಣಪತಿ ಬ್ಯಾಂಕ್‌ನ ಆಡಳಿತ ಮಂಡಳಿ ಅತ್ಯಂತ ಎಚ್ಚರಿಕೆ ಮತ್ತು ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಹಿಂದಿನವರು ಬೆಳೆಸಿದ ಸಂಸ್ಥೆಗೆ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಕಾಪಾಡುವುದು ಆಡಳಿತ ಮಂಡಳಿಯ ಪ್ರಮುಖ ಜವಾಬ್ದಾರಿಯಾಗಿದೆ. ಅಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿಯವರು ಶೇರುದಾರರ ಹಿತಾಸಕ್ತಿಗೆ ಆದ್ಯತೆ ನೀಡಿ ಬ್ಯಾಂಕ್ ರಾಜ್ಯಮಟ್ಟದಲ್ಲಿ ಇನ್ನಷ್ಟು ಉತ್ತಮ ಹೆಸರು ಗಳಿಸಲಿ ಎಂದು ಮಸನ ಮತ್ತು ಇತರರು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉಪಾಧ್ಯಕ್ಷ ವೈ. ಮೋಹನ್, "ಎಲ್ಲರ ಸಲಹೆ ಮತ್ತು ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ನನ್ನಿಂದ ಯಾವುದೇ ಲೋಪವಾಗುತ್ತಿದೆ ಎಂದು ತಿಳಿಸಿದರೆ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ತಿದ್ದಿಕೊಂಡು ಕರ್ತವ್ಯ ನಿರ್ವಹಿಸುತ್ತೇನೆ. ನನ್ನನ್ನು ಮೊದಲ ಅವಧಿಯಲ್ಲೇ ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರಿಗೆ ಹಾಗೂ ಚುನಾವಣೆಯಲ್ಲಿ ಬೆಂಬಲ ನೀಡಿ ಗೆಲುವು ತಂದುಕೊಟ್ಟ ಎಲ್ಲ ಮತದಾರರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದೆಯೂ ನಿಮ್ಮೆಲ್ಲರ ಸಲಹೆ, ಸಹಕಾರ ಮತ್ತು ಆಶೀರ್ವಾದ ಇರಲಿ" ಎಂದು ಮನವಿ ಮಾಡಿದರು.
ಒಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾರೆ ಎಂಬ ಮಾತಿನಂತೆ ಮೋಹನ್ ರವರ ಶ್ರೀಮತಿಯವರಾದ ಶ್ರೀದೇವಿ ಅವರ ಸಹಕಾರ ವನ್ನು ನಾವು ನೆನಪಿಸಿಕೊಳ್ಳಲೇಬೇಕು. ಎಲ್ಲಾ ಕೆಲಸದಲ್ಲೂ ಜೊತೆಯಾಗಿ ಕೈ ಜೋಡಿಸಿಕೊಂಡು ಸಂಸಾರ ಸಾಗಿಸುತ್ತಿರುವುದು ಪ್ರಶಂಸನೀಯ. ಮೋಹನ್ ಅವರ ಮಕ್ಕಳಾದ ಮಾಧುರಿ, ಶ್ರೀಶ ಇವರ ಸಹಕಾರವೂ ಇದೆ.
- ಮ ಸ ನಂಜುಂಡಸ್ವಾಮಿ, ಸಂಚಾಲಕರು, ಕಾರ್ಯನಿರತ ಮತ್ತು ನಿವೃತ್ತ ವಿಪ್ರನೌಕರರ ಸಂಘ
ಈ ಸಂದರ್ಭದಲ್ಲಿ ವೆಂಕಟೇಶ್ ಕಟ್ಟಿ, ಬದರಿನಾಥ್, ವಿನಾಯಕ ಜೋಯಿಸ್ , ಡಾ. ಕೆಳದಿ ವೆಂಕಟೇಶ್, ಮೋಹನ್ ಅಳಗಂ ಭಟ್, ಎಸ್ ಬಿ ಐ ಚಂದ್ರಶೇಖರ್, ಕುಂಸಿ ವಿಜಯೇಂದ್ರ, ಸತ್ಯನಾರಾಯಣ ರಾವ್, ಪ್ರಸನ್ನ ಕುಮಾರ, ಅರ್ಚಕ ಮಹಾಬಲ, ಮುಕುಂದ ಬಾಪಟ್, ಗೋಪಿ ದೀಕ್ಷಿತ್, ಶಶಿಧರ್, ಸುರೇಶ್ ಜವಳಿ, ಸಂದೇಶ್ ಚಂದ್ರಶೇಖರ್, ಸುಬ್ರಹ್ಮಣ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

