ಈ ಹೊಸ ಕೇಂದ್ರವು ಕರ್ನಾಟಕದ ಪ್ರಮುಖ ಕರಾವಳಿ ಹೆದ್ದಾರಿಯನ್ನು ಬಳಸುವ ವಾಣಿಜ್ಯ ವಾಹನಗಳಿಗೆ, ಉದ್ಯಮಿಗಳಿಗೆ ಹಾಗೂ ಪ್ರವಾಸಿಗರಿಗೆ ಅತಿವೇಗದ ಚಾರ್ಜಿಂಗ್ ಸೌಲಭ್ಯವನ್ನು ಮತ್ತಷ್ಟು ಸುಲಭವಾಗಿ ಸಿಗುವಂತೆ ಮಾಡುತ್ತದೆ. ನೂತನವಾಗಿ ಕಾರ್ಯಾಚರಣೆಗೆ ಬಂದಿರುವ ಈ 60 ಕಿಲೋ ವ್ಯಾಟ್ ಡ್ಯುಯಲ್ ಗನ್ ಸಿ.ಸಿ.ಎಸ್.2 ಚಾರ್ಜರ್, ಎಲೆಕ್ಟ್ರಿಕ್ ವಾಹನ ಬಳಕೆದಾರರಿಗೆ ವೇಗದ, ನಂಬಿಕಸ್ಥ ಮತ್ತು ಅನುಕೂಲಕರ ಚಾಜಿರ್ಂಗ್ ಸೌಲಭ್ಯವನ್ನು ಒದಗಿಸುತ್ತದೆ ಎಂದು ಪ್ರಕಟಣೆ ಹೇಳಿದೆ.
60 ಕಿಲೋ ವ್ಯಾಟ್ ಡಿಸಿ ಡ್ಯುಯಲ್ ಗನ್ ಚಾರ್ಜರ್ ಹೊಂದಿರುವ ಈ ಕೇಂದ್ರವು, ಸೂಕ್ತವಾದ ಎಲೆಕ್ಟ್ರಿಕ್ ವಾಹನಗಳನ್ನು ಕೇವಲ 30 ನಿಮಿಷಗಳಲ್ಲಿ ಶೇಕಡಾ 20 ರಿಂದ ಶೇಕಡಾ 80 ರಷ್ಟು ವಿದ್ಯುತ್ ಪೂರಣ ಮಾಡುವ ಸಾಮರ್ಥ್ಯ ಹೊಂದಿದೆ. ಇದು ಕಾಯುವ ಸಮಯವನ್ನು ಕಡಿಮೆ ಮಾಡಿ, ದಕ್ಷ ಪ್ರಯಾಣಕ್ಕೆ ಸಹಕರಿಸುತ್ತದೆ.
ಕರಾವಳಿ ವಾತಾವರಣಕ್ಕೆ ಸೂಕ್ತವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.
ಕೋಸ್ಟಲ್ ಪ್ಯಾರಡೈಸ್ ಬಳಿ ಈ ಕೇಂದ್ರವಿರುವುದರಿಂದ, ವಾಹನಗಳು ಮರುಪೂರಣಗೊಳ್ಳುವ ಸಮಯದಲ್ಲಿ ಎಲೆಕ್ಟ್ರಿಕ್ ವಾಹನ ಸವಾರರು ಆರಾಮದಾಯಕ ವಿರಾಮವನ್ನು ಆನಂದಿಸಬಹುದು. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದುವರಿಸುವ ಮುನ್ನ ಇಲ್ಲಿ ಉಪಹಾರ, ಸ್ಥಳೀಯ ಖಾದ್ಯಗಳು ಮತ್ತು ಇತರ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.