ಮಂಗಳೂರು: ವಳಚ್ಚಿಲ್‌ನಲ್ಲಿರುವ ಶ್ರೀನಿವಾಸ ಫಾರ್ಮಸಿ ಕಾಲೇಜ್‌ನಲ್ಲಿ ಇತ್ತೀಚೆಗೆ “ಇಂಡಸ್ಟ್ರಿ ಇನ್ಸ್ಸ್ಟಿಟ್ಯೂಷನ್ ಇಂಟರಾಕ್ಷನ್” ಎಂಬ ವಿಷಯದಲ್ಲಿ ವಿಚಾರಸಂಕಿರಣವು ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್, ದ.ಕ ಸ್ಥಳೀಯ ಶಾಖೆ, ಮಂಗಳೂರು ಇದರ ಸಹಯೋಗದೊಂದಿಗೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಪೂರ್ವ ವಿದ್ಯಾರ್ಥಿಯಾದ ಶ್ರೀ ರಾಮಚಂದ್ರ ಗಾಣಿಗ, ಅಸಿಸ್ಟೆಂಟ್ ಮ್ಯಾನೇಜರ್, ಕ್ವಾಲಿಟಿ ಅಶ್ಯುರೆನ್ಸ್ - ಕರ್ನಾಟಕ ಆಂಟಿಬಯಾಟಿಕ್ಸ್ ಅಂಡ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಇವರು ಎಮ್ ಗುಡ್ ಮಾನ್ಯುಪಾಕ್ಚರಿಂಗ್ ಪ್ರಾಕ್ಟೀಸಸ್ ಮಾರ್ಗಸೂಚಿಗಳ ಕುರಿತು ಮಾಹಿತಿ ನೀಡಿದರು. ಔಷಧೀಯ ಕೈಗಾರಿಕೆಗಳು ಎದುರಿಸುತ್ತಿರುವ ಸವಾಲುಗಳು, ಗುಣಮಟ್ಟದ ಭರವಸೆ ಅಗತ್ಯತೆಗಳು, ದಸ್ತಾವೇಜೀಕರಣ ಅಭ್ಯಾಸಗಳು, ಅಪಾಯ ನಿರ್ವಹಣೆ, ಮೂಲಸೌಕರ್ಯ ನವೀಕರಣಗಳು, ಸಿಬ್ಬಂದಿ ತರಬೇತಿ, ಮೌಲ್ಯೀಕರಣ ಪ್ರಕ್ರಿಯೆಗಳು ಮತ್ತು ಜಾಗತಿಕ ಗುಣಮಟ್ಟದ ಮಾನದಂಡಗಳನ್ನು ಕಾಯ್ದುಕೊಳ್ಳುವ ಪ್ರಾಮುಖ್ಯತೆಯ ಕುರಿತು ಅವರು ವಿವರಿಸಿದರು. ನಿಯಂತ್ರಕ ಅನುಸರಣೆ ಸುರಕ್ಷಿತ, ಪರಿಣಾಮಕಾರಿ ಮತ್ತು ಉತ್ತಮ-ಗುಣಮಟ್ಟದ ಔಷಧೀಯ ಉತ್ಪನ್ನಗಳನ್ನು ಉತ್ಪಾದಿಸಲು ಹೇಗೆ ಕೊಡುಗೆ ನೀಡುತ್ತದೆ ಎಂಬುದನ್ನು ಚರ್ಚಿಸಿದರು.
ಡಾ.ಎ.ಆರ್.ಶಬರಾಯ, ಪ್ರಾಂಶುಪಾಲರು ಶ್ರೀನಿವಾಸ ಫಾರ್ಮಸಿ ಕಾಲೇಜ್ ವಳಚ್ಚಿಲ್, ಮಂಗಳೂರು ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕೈಗಾರಿಕೆ- ಶೈಕ್ಷಣಿಕ ಸಹಯೋಗವನ್ನು ಬಲಪಡಿಸುವ ಮಹತ್ವವನ್ನು ಒತ್ತಿ ಹೇಳಿದರು ಮತ್ತು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕಲಿಕೆಗೆ ಪೂರಕವಾದ ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಳ್ಳಲು ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಮಂಗಳೂರಿನ ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮಸಿಯ ಸಿಪಿಪಿಎ ಸಂಯೋಜಕರಾದ ಪ್ರೊ. ಪ್ರಕಾಶ್ ವಿ. ಮಲ್ಯ ಹಾಗೂ ಡಾ.ಕುಮಾರ ಪ್ರಸಾದ್, ಎಸ್.ಎ, ಪ್ರೊಫೆಸರ್ ಮತ್ತು ಉಪಾಧ್ಯಕ್ಷರು, ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್, ದ.ಕ ಸ್ಥಳೀಯ ಶಾಖೆ, ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ.ಪದ್ಮಾವತಿ ಪಿ ಪ್ರಭು ಅತಿಥಿಗಳನ್ನು ಸ್ವಾಗತಿಸಿ, ಅಪೇಕ್ಷಾ ಮತ್ತು ಅಮೃತಾ ನಿರ್ವಹಿಸಿದರು. ಡಾ. ಕೃಷ್ಣಾನಂದ ಕಾಮತ್ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


