ಪುಸ್ತಕದ ಜೊತೆಗಿನ ನಮ್ಮ ಸ್ನೇಹ: ಈಗ ಎಲ್ಲೋಗಿದೆ??

Upayuktha
0

 



ಪುಸ್ತಕವೆಂದರೆ ಎಲ್ಲರಿಗೂ ಇಷ್ಟ, ಒಂದಲ್ಲ ಒಂದು ಪುಸ್ತಕವನ್ನಾದರೂ ಓದಿಯೇ ಇರುತ್ತಾರೆ. ಎಲ್ಲರ ಮನೆಯಲ್ಲಿ ಪುಸ್ತಕ ಇದ್ದೆ ಇರುತ್ತದೆ. ಏಕೆಂದರೆ ಎಲ್ಲರ ಮನೆಯಲ್ಲೂ ಕುಣಿದಾಡುವ ಮಕ್ಕಳು ಇದ್ದೆ ಇರುತ್ತಾರೆ. ಹಿಂದೆಲ್ಲಾ ಪುಸ್ತಕದೊಳಗಿನ ಮತ್ತು ನಮ್ಮ ನಡುವಿನ ನಂಟು ಒಳ್ಳೆದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಂದುದರಿಂದ ನಮ್ಮ ಮತ್ತು ಪುಸ್ತಕದ ನಡುವಿನ ನಂಟು ಎಲ್ಲೊ ಹೋಗಿ ಬಿಟ್ಟಿದೆ. ಎತ್ತ ನೋಡಿದರು ಮೊಬೈಲ್.... ಮೊಬೈಲ್.. 

ಅಂದಿನ ಕಾಲದಲ್ಲಿ ಪತ್ರವೆಲ್ಲ ಬರೆಯುತಿದ್ದರು, ಆದರೆ ಈಗ ಒಂದು ಮೆಸೇಜ್ ಕಳಿಸಿದರೆ ಎಲ್ಲಾ ವಿವರಗಳು ತಿಳಿಯುತ್ತದೆ. ಈಗ ಸಣ್ಣ ಸಣ್ಣ ಮಕ್ಕಳ ಕೈಯಲ್ಲಿ ಮೊಬೈಲ್ ಬಂದು ಬಿಟ್ಟಿದೆ. ಪುಸ್ತಕ ಹಿಡಿಯುವ ಕೈಯಲ್ಲಿ ಬರಿ ಮೊಬೈಲ್ ಕಾಣುತ್ತಿವೆ. ಅದಕ್ಕೋಸ್ಕರ ನಮ್ಮ ಮತ್ತು ಪುಸ್ತಕದ ನಡುವಿನ ನಂಟು ಕಡಿಮೆಯಾಗಿದೆ. ಪುಸ್ತಕದಿಂದ ಎಲ್ಲಾ ವಿಷಯಗಳು ತಿಳಿಯುತ್ತಿತ್ತು ಹಾಗೆಯೇ ಯಾವುದೇ ರೀತಿಯ ಒಳ್ಳೆಯ ಸಂಗತಿಗಳನ್ನು ಪುಸ್ತಕ ಓದುದರ ಮೂಲಕ ನಮಗೆ ತಿಳಿಯುತ್ತಿತ್ತು. ಪುಸ್ತಕವನ್ನು ಓದಿದರೆ ಎನೋ ಒಂಥರ ಸಮಾಧಾನ. ಏನೋ ಮನಸ್ಸಿಗೆ ಉಲ್ಲಾಸ ಆಗುತ್ತಿತ್ತು. ಆದರೆ ಈಗ ಆ ಉಲ್ಲಾಸವೆಲ್ಲ ನಮ್ಮ ಕೈಯಲ್ಲಿರುವ ಮೊಬೈಲ್ ತಂದುಕೊಡುತ್ತದೆ. ಅಷ್ಟು ಬದಲಾಗಿದೆ ಈ ಜಗತ್ತು. 

ಯಾವ ಪುಸ್ತಕವಾದರೂ ಒಮ್ಮೆ ಓದಿದರೆ ಮತ್ತೆ ಓದುವ ಎಂಬ ಕುತೂಹಲ ಬರುತ್ತಿತ್ತು. ಆದರೆ ಈಗ ಯಾವಾಗ ಈ ಪುಸ್ತಕವನ್ನು ಓಡಿ ಮುಗಿಸಿ ಮೊಬೈಲ್ ಒತ್ತುತ್ತೆವೋ ಅನ್ನೋ ಸ್ಥಿತಿ ಬಂದಿದೆ. ಈಗ ಪರೀಕ್ಷೆಗಳು ಬಂದಾಗ ಓದುವುದೇ ಕಷ್ಟದಲ್ಲಿ ಇನ್ನು ಕಾವ್ಯ, ಕಾದಂಬರಿ ಓದಲು ಸಮಯ ಸಿಗುವುದೇ ಕಷ್ಟ್. ಅದಕ್ಕೆ ನಮ್ಮ ಮತ್ತು ಪುಸ್ತಕದ ನಡುವಿನ ನಂಟು ಈಗ ನಮ್ಮ ಕೈ ಜಾರಿ ಹೋಗುತ್ತದೆ. ಎಂತ ಬೇಕಾದರೂ ಪುಸ್ತಕದಲ್ಲಿ ಹುಡುಕುವ ಜನರು ಈಗ ಮೊಬೈಲ್ ಇದ್ದರೆ ಸಾಕು ಇಡೀ ಜಾಗವೇ ನಮ್ಮ ಕೈಲ್ಲಿದೆ ಎನ್ನುವ ಹಾಗೆ ಮಾಡುತ್ತಾರೆ. ಮನೆ ಮನೆ ಹೋಗಿ ಸಮಾಚಾರವನ್ನು ವಿಚಾರಿಸಿಕೊಳ್ಳುವ ಬದಲು ಒಂದು ಫೋನ್ ಕರೆಯ ಮೂಲಕವೇ ಎಲ್ಲಾ ಮುಗಿದು ಬಿಡುತ್ತದೆ. ಪುಸ್ತಕದ ಮತ್ತು ನಮ್ಮ ನಡುವಿನ ನಂಟು ಇನ್ನಷ್ಟು ಬೆಳೆಸಿಕೊಳ್ಳಬೇಕು. ಅದರಿಂದ ತುಂಬಾ ವಿಷಯವನ್ನು ನಾವು ತಿಳಿದುಕೊಳ್ಳಬೇಕು.



- ಸಹನಾ ಪೂಜಾರಿ ಬಂದಾರು....
ಎಸ್. ಡಿ. ಎಮ್ ಕಾಲೇಜು..

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top