ನಥಿಂಗ್ ಫೋನ್ (4ಬಿ) ಮಾರಾಟಕ್ಕೆ ಲಭ್ಯ

Upayuktha
0



ಉಡುಪಿ: ಲಂಡನ್ ಮೂಲದ ಗ್ರಾಹಕ ತಂತ್ರಜ್ಞಾನ ಬ್ರ್ಯಾಂಡ್ 'ನಥಿಂಗ್', ತನ್ನ ಹೊಸ (ಬಿ) ಸರಣಿಯ ಮೊದಲ ಸ್ಮಾರ್ಟ್‍ಫೋನ್ ಮತ್ತು 'ನಥಿಂಗ್' ವ್ಯವಸ್ಥೆಯನ್ನು ಅನುಭವಿಸಲು ಅತ್ಯಂತ ಸುಲಭವಾದ ಮಾರ್ಗವಾಗಿರುವ 'ಫೋನ್(4ಬಿ)'ನ ಮಾರಾಟವನ್ನು ಘೋಷಿಸಿದೆ.


ಶೇಕಡ 7.5 ತ್ವರಿತ ಬ್ಯಾಂಕ್ ರಿಯಾಯಿತಿ ಮತ್ತು ಎಕ್ಸ್‌ಚೇಂಜ್ ಬೋನಸ್ ಸೇರಿದಂತೆ, 8ಜಿಬಿ + 128ಜಿಬಿ ಅವತರಣಿಕೆಗೆ ರೂ. 29,999 ಮತ್ತು 8ಜಿಬಿ + 256ಜಿಬಿ ಅವತರಣಿಕೆಗೆ ರೂ. 33,699 ರ ಪರಿಣಾಮಕಾರಿ ಬೆಲೆಯಲ್ಲಿ, ಫೋನ್ (4ಜಿ) ಜುಲೈ 14, 2026 ರಿಂದ ಫ್ಲಿಪ್‍ಕಾರ್ಟ್ ಹಾಗೂ ಕ್ರೋಮಾ, ರಿಲಯನ್ಸ್ ಡಿಜಿಟಲ್ ಮತ್ತು ವಿಜಯ ಸೇಲ್ಸ್ ಮುಂತಾದ ಪ್ರಮುಖ ರಿಟೇಲ್ ಮಾರಾಟ ಮಳಿಗೆಗಳಲ್ಲಿ ಲಭ್ಯವಿರುತ್ತದೆ.


ಫೋನ್ (4ಎ) ಸರಣಿಯ ಯಶಸ್ಸಿನ ಆಧಾರದ ಮೇಲೆ ರೂಪುಗೊಂಡಿರುವ ಫೋನ್(4ಬಿ), 'ನಥಿಂಗ್'ನ ವಿಶಿಷ್ಟ ಪಾರದರ್ಶಕ ವಿನ್ಯಾಸ ಮತ್ತು 'ಗ್ಲಿಫ್ ಇಂಟರ್‍ಫೇಸ್' ಅನ್ನು ಶಕ್ತಿಯುತವಾದ ಸ್ನ್ಯಾಪ್‍ಡ್ರಾಗನ್ ಕಾರ್ಯಕ್ಷಮತೆ, ಬಹುಮುಖಿ ಕ್ಯಾಮೆರಾ ವ್ಯವಸ್ಥೆ, ಆಕರ್ಷಕ ಆಮೋಲೆಡ್ ಡಿಸ್‍ಪ್ಲೇ ಮತ್ತು 'ಅಗತ್ಯ ಎಐ' ಪರಿಕರಗಳೊಂದಿಗೆ ಸಂಪೂರ್ಣ 'ಓಎಸ್' ಅನುಭವದೊಂದಿಗೆ ಸಂಯೋಜಿಸಿದೆ ಎಂದು ಪ್ರಕಟಣೆ ಹೇಳಿದೆ.


'ನಥಿಂಗ್' ಪರಿಸರ ವ್ಯವಸ್ಥೆಗೆ ಪರಿಪೂರ್ಣ ಪ್ರವೇಶ ಬಿಂದುವಾಗಿ ವಿನ್ಯಾಸಗೊಳಿಸಲಾದ ಫೋನ್(4ಬಿ), ಸ್ನ್ಯಾಪ್‍ಡ್ರಾಗನ್ 6 ಜೆನ್ 4 ಮೊಬೈಲ್ ಪ್ಲಾಟ್‍ಫಾರ್ಮ್, 'ನಥಿಂಗ್'ನ ಇದುವರೆಗಿನ ಅತಿದೊಡ್ಡ 6,000ಎಂಎಎಚ್ ಬ್ಯಾಟರಿ, ಟ್ರೂಲೆನ್ಸ್ ಎಂಜಿನ್ 4 ನಿಂದ ಚಾಲಿತವಾದ 50 ಓಐಎಸ್ ಮುಖ್ಯ ಕ್ಯಾಮೆರಾ ಮತ್ತು 2,000 ನಿಟ್ಸ್ ವರೆಗಿನ ಗರಿಷ್ಠ ಹೊಳಪನ್ನು ಹೊಂದಿರುವ 6.77-ಇಂಚಿನ 120ಎಚ್‍ಝೆಡ್ ಸೂಪರ್ ಎಮೋಲೆಡ್ ಡಿಸ್‍ಪ್ಲೇಯನ್ನು ಒಳಗೊಂಡಿದೆ. ಈ ಸಾಧನವು ಆ್ಯಂಡ್ರಾಯ್ಡ್ 16 ಆಧಾರಿತ 'ನಥಿಂಗ್ ಓಎಸ್ 4.1' ಅನ್ನು ಪರಿಚಯಿಸುತ್ತದೆ; ಇದು ಸುಗಮ ಸಾಫ್ಟ್‍ವೇರ್ ಅನುಭವ, ಸುಧಾರಿತ ಎಐ ಪರಿಕರಗಳು ಮತ್ತು ಆರು ವರ್ಷಗಳವರೆಗಿನ ಭದ್ರತಾ ನವೀಕರಣಗಳನ್ನು ಒದಗಿಸುತ್ತದೆ.


ಫೋನ್(4ಜಿ) ಕಪ್ಪು, ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ ಹಾಗೂ 8ಜಿಬಿ + 128ಜಿಬಿ ಮತ್ತು 8ಜಿಬಿ + 256ಜಿಬಿ ಹೀಗೆ ಎರಡು ಕಾನ್ಫಿಗರೇಶನ್‍ಗಳಲ್ಲಿ ಲಭ್ಯವಿದೆ ಎಂದು ಪ್ರಕಟಣೆ ಹೇಳಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top