ನೆಟ್‌ಬಾಲ್ ಚಾಂಪಿಯನ್‌ಶಿಪ್‌: ಉಜಿರೆಯ ಎಸ್.ಡಿ.ಎಂ ವಿದ್ಯಾರ್ಥಿಗಳಿಗೆ ಅವಳಿ ಚಾಂಪಿಯನ್ಸ್ ಪ್ರಶಸ್ತಿ

Upayuktha
0

 7ನೇ ರಾಜ್ಯ ಮಟ್ಟದ ಪುರುಷರ ಹಾಗೂ ಮಹಿಳೆಯರ ನೆಟ್‌ಬಾಲ್ ಚಾಂಪಿಯನ್‌ಶಿಪ್‌ 



ಉಜಿರೆ: ಬೆಂಗಳೂರು ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಕರ್ನಾಟಕ ಅಮೆಚೂರ್ ನೆಟ್‌ಬಾಲ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ 2026–27ನೇ ಸಾಲಿನ 7ನೇ ರಾಷ್ಟ್ರೀಯ ಮಟ್ಟದ ಹಿರಿಯ ಪುರುಷರ ಹಾಗೂ ಮಹಿಳೆಯರ ರಾಜ್ಯ ಮಟ್ಟದ ನೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಿದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಹಾಗೂ ಉಜಿರೆಯ ಎಸ್.ಡಿ.ಎಂ ಕ್ರೀಡಾ ಸಂಘದ ಪುರುಷ ಹಾಗೂ ಮಹಿಳಾ ವಿದ್ಯಾರ್ಥಿಗಳು ಅವಳಿ ಚಾಂಪಿಯನ್ಸ್ ಪ್ರಶಸ್ತಿ ಪಡೆಯುವುದರ ಮೂಲಕ ವಿಶೇಷ ಸಾಧನೆ ಗೈದಿದ್ದಾರೆ.


ಸೆಮಿಫೈನಲ್ ಹಂತದ ಮಹಿಳೆಯರ ನೆಟ್ ಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಹಾಸನ ಜಿಲ್ಲಾ ಮಹಿಳೆಯರ ತಂಡವನ್ನು ಮಣಿಸಿ ಫೈನಲ್ ಹಂತವನ್ನು ತಲುಪಿತು. ಫೈನಲ್ ಪಂದ್ಯದಲ್ಲಿ ಬೆಂಗಳೂರು ಸಿಟಿ ತಂಡವನ್ನು ಎದುರಿಸಿ 26 -15 ಅಂಕಗಳಿಂದ ಮಣಿಸುವ ಮೂಲಕ ಪ್ರಥಮ ಸ್ಥಾನವನ್ನು ಪಡೆಯಿತು. ಜಿಲ್ಲೆಯನ್ನು ಪ್ರತಿನಿಧಿಸಿದ ಮಹಿಳಾ ತಂಡದಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜಿನ 10 ಜನ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ಪ್ರಶಸ್ತಿ ವಿಜೇತ ತಂಡದಲ್ಲಿ ವಿದ್ಯಾರ್ಥಿಗಳಾದ ರಶ್ಮಿ ಎಸ್‌.(ನಾಯಕಿ), ಮನೀಷಾ (ದ್ವಿತೀಯ ಎಂ.ಕಾಂ), ಸುರಕ್ಷಾ ಆಚಾರ್ಯ (ಪ್ರಥಮ ಎಂ.ಕಾಂ), ಸಹನಾ (ತೃತೀಯ ಬಿ.ಕಾಂ), ಸಿಂಚನಾ ವಿ (ದ್ವಿತೀಯ ಬಿ.ಕಾಂ), ಪೂಜಾಶ್ರೀ (ದ್ವಿತೀಯ ಬಿಬಿಎ), ಸುಪ್ರಿಯಾ ಎಚ್.ಎಸ್. (ಪ್ರಥಮ ಬಿ.ಎ) ಹಾಗೂ ದೀಪ್ತಿ ಎಚ್.ಎಸ್. (ಎಂ.ಕಾಂ) ಭಾಗವಹಿಸಿದ್ದರು.


ಪುರುಷ ವಿಭಾಗದ ಫೈನಲ್ ಪಂದ್ಯಾಟಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಐದು ಜನ ವಿದ್ಯಾರ್ಥಿಗಳನ್ನು ಹೊಂದ್ದಿದ್ದ ದಕ್ಷಿಣ ಕನ್ನಡ ಜಿಲ್ಲೆಯು ಚಾಮರಾಜನಗರ ಪುರುಷರ ತಂಡವನ್ನು ಸೋಲಿಸಿ ಪೈನಲ್ ಪ್ರವೇಶ ಪಡೆಯಿತು. ಬಳಿಕ ಫೈನಲ್ ಪಂದ್ಯದಲ್ಲಿ ಮೈಸೂರು ಜಿಲ್ಲಾ ಪುರುಷರ ತಂಡದೊಂದಿಗೆ ಸೆಣಸಾಡಿ ಪ್ರಥಮ ಸ್ಥಾನವನ್ನು ಪಡೆಯಿತು. ತಂಡದಲ್ಲಿ ಎಸ್.ಡಿ.ಎಂ ಕಾಲೇಜಿನ ದ್ವಿತೀಯ ವರ್ಷದ ಎಂಸಡಬ್ಲ್ಯೂ ವಿದ್ಯಾರ್ಥಿಗಳಾದ  ಚಿಂತನ ಬಿ ಸಿ (ನಾಯಕ), ಪುನೀತ್ ಕುಮಾರ್ (ದ್ವಿತೀಯ ಎಂಎಸ್‌ಡಬ್ಲ್ಯೂ), ಕೀರ್ತನ್ ಆರ್. (ಪ್ರಥಮ ಎಂಎಸ್‌ಡಬ್ಲ್ಯೂ), ಪ್ರವೀಣ್ (ತೃತೀಯ ಬಿ.ಕಾಂ) ಹಾಗೂ ಮನೋಜ್ (ತೃತೀಯ ಬಿ.ಕಾಂ) ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದರು.


ಪ್ರಶಸ್ತಿ ವಿಜೇತ ಮಹಿಳಾ ಹಾಗು ಪುರುಷರ‌ ನೆಟ್ ಬಾಲ್ ತಂಡಕ್ಕೆ ಎಸ್.ಡಿ.ಎಂ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸುದೀನ್ ಪೂಜಾರಿ ತರಬೇತಿಯನ್ನು ನೀಡಿರುತ್ತಾರೆ. ಪ್ರಶಸ್ತಿ ವಿಜೇತ ತಂಡದೊಂದಿಗೆ ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ಅಂತರಾಷ್ಟ್ರೀಯ ನೆಟ್ ಬಾಲ್ ಕ್ರೀಡಾಪಟು ನಿತಿನ್ ಪುಜಾರಿ ಮತ್ತು ರಾಷ್ಟ್ರೀಯ ನೆಟ್ ಬಾಲ್ ಆಟಗಾರರಾದ  ತುಷಾರ್, ಚಂದ್ರಶೇಖರ್, ವಿಶೃತ್, ಸುಘನ್ ಉಪಸ್ಥಿತರಿದ್ದು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದರು.


ವಿಜೇತ ತಂಡಕ್ಕೆ ಎಸ್.ಡಿ.ಎಂ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ, ಕಾಲೇಜಿನ ಪ್ರಾಂಶುಪಾಲ ಪ್ರೋ.ವಿಶ್ವನಾಥ್ ಪಿ, ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್, ಉಪನ್ಯಾಸಕರು ಸೇರಿದಂತೆ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top