ಕೇಂದ್ರ ನೀತಿ ಆಯೋಗದಿಂದ ಮಹಿಳಾ ಉದ್ಯಮಕ್ಕೆ ಹೆಚ್ಚಿನ ಆದ್ಯತೆ: ಮೋಹನ್ ಪಾಲೇಶ

Upayuktha
0

 



ಕಲಬುರಗಿ : ಭಾರತದ ಮಹಿಳೆಯರು ಉದ್ಯಮ ರಂಗದಲ್ಲಿ ಗಣನೀಯ ಸಾಧನೆ ಮಾಡಿ ಭಾರತವು ವಿಶ್ವ  ನಾಯಕತ್ವ ವಹಿಸಲು ಸಾಧ್ಯವಾಗಿದೆ ಮತ್ತು ನೀತಿ ಆಯೋಗವು ಮಹಿಳಾ ಉದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಪುಣೆಯ ರೋಟರಿ ಜಿಲ್ಲಾ ಮಾಜಿ ಗವರ್ನರ್ ಮೋಹನ್ ಪಾಲೇಶ   ಹೇಳಿದರು.

    

ಕಲಬುರಗಿಯ ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಜುಲೈ  8ರಂದು  ಡಾ ಪಿ ಎಸ್ ಶಂಕರ್ ಪ್ರತಿಷ್ಠಾನ ಹಾಗೂ ಲಾಹೋಟಿ ಮೋಟರ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ರಮೇಶ್ಚಂದ್ರ ಲಾಹೋಟಿ ಸ್ಮಾರಕ ನಾಲ್ಕನೆಯ ಉಪನ್ಯಾಸ ಮಾಲಿಕೆಯಲ್ಲಿ "ಮಹಿಳಾ ಉದ್ಯಮಿಗಳ ಉತ್ತೇಜನ ಮತ್ತು ಜೀವನ ಕಲೆ " ಬಗ್ಗೆ ಮಾತನಾಡಿ ದೇಶದಲ್ಲಿ ಶೇ. 22 ರಷ್ಟು ಮಹಿಳಾ ಉದ್ಯಮಿಗಳಿದ್ದು ಎಂಎಸ್ಎಂಇ ರಂಗದಲ್ಲಿ 25 ದಶಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗಿದೆ.


ಕಿರಣ್ ಮಜುಂದಾರ್, ವಿನುತಾ ಸಿಂಗ್,ಎಂ ಅನಘಾ ಮುಂತಾದ  ಪ್ರತಿಷ್ಠಿತ ಮಹಿಳಾ ಸಾಧಕಿಯರ ಉದ್ಯಮ ಕ್ಷೇತ್ರದ ಸಾಧನೆಯಿಂದ ದೇಶ ಮುಂಚೂಣಿಗೆ ಹೆಜ್ಜೆ ಹಾಕುತ್ತಿದೆ. ಗ್ರಾಹಕ ವಸ್ತು, ಸೌಂದರ್ಯ ಪ್ರಸಾಧನ, ಕೌಶಲ್ಯ ಅಭಿವೃದ್ಧಿ, ಆಹಾರ ಸಂಸ್ಕರಣೆ, ಕೃಷಿ ಸಂಸ್ಕರಣೆ, ಶಿಕ್ಷಣ ಹೀಗೆ ನಾನಾ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಮಹಿಳಾ ಉದ್ಯಮಿಗಳ ಆಕರ್ಷಣೆಗಾಗಿ ಸ್ಟಾರ್ಟ್ ಅಪ್, ಮುದ್ರಾ ಯೋಜನೆ  ಸೇರಿದಂತೆ ಹಲವು ಉದ್ಯಮಕ್ಕಾಗಿ ಮಹಿಳೆಯರ ಮನೆಬಾಗಿಲಿಗೆ ಹಣಕಾಸು ನೆರವು ಹರಿದು ಬರುತ್ತಿದೆ. ಯೋಜನೆಗಳನ್ನು ಸದ್ಬಳಕೆ ಮಾಡಿ ಅಭಿವೃದ್ಧಿ ಹೊಂದಬೇಕಾಗಿದೆ ಎಂದರು.


ಭಾರತದಲ್ಲಿ ಬದುಕುವ ಕಲೆಗೆ  ಸಂಸ್ಕೃತಿ, ಪರಂಪರೆ ದೊಡ್ಡ ಕೊಡುಗೆಯನ್ನು ನೀಡಿದ್ದು ಜೀವನದಲ್ಲಿ ಆಸೆಗೆ  ಕಡಿವಾಣ ಹಾಕಿದರೆ ಮಾತ್ರ  ಬದುಕು ಸುಂದರವಾಗುತ್ತದೆ.  ಸೇವೆ ಮತ್ತು ತ್ಯಾಗದ ಮೂಲಕ ಎಲ್ಲರ ಮುಖದಲ್ಲಿ ನಗು ಅರಳಿಸುವಂತಾದರೆ ಬದುಕು ಸಾರ್ಥಕ ವಾಗುತ್ತದೆ ಎಂದು ಅಭಿಪ್ರಾಯಪಟ್ಟರು 


ಸಿಎ ಮಣಿಲಾಲ್ ಶಹಾ ಮಾತನಾಡಿ ರಮೇಶ್ ಚಂದ್ರ ಲಾಹೋಟಿಯವರ ಬದುಕು, ಸಾಧನೆ ಮತ್ತು ಅವರು ಉದ್ಯಮ, ಶಿಕ್ಷಣ ಹಾಗೂ ಸಾಮಾಜಿಕ ಕಾರ್ಯಗಳಿಗೆ ನೀಡಿದ ಕೊಡುಗೆಯನ್ನು ತಿಳಿಸಿದರು. ಲಾಹೋಟಿ ಮನೆತನದ ಪರಂಪರೆಯನ್ನು ಮುಂದುವರಿಸಿದ ಉದ್ಯಮಿ ಶ್ರೀಕಾಂತ್ ಲಾಹೋಟಿಯವರ ಕಾರ್ಯವು ಶ್ಲಾಘನೀಯ ಎಂದರು.

  

ಸಿಎ ಉತ್ತಮ್ ಬಜಾಜ್ ಮೋಹನ್ ಪಾಲೇಶ ಅವರ ಪರಿಚಯ ಮಾಡಿದರು. ಕೆ ಕೆ ಸಿ ಸಿ ಐ ಅಧ್ಯಕ್ಷ ಶರಣಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ. ಪಿ ಎಸ್ ಶಂಕರ್ ಪ್ರತಿಷ್ಠಾನದ ಗೌರವ  ಅಧ್ಯಕ್ಷರಾದ ಡಾ. ವೀರಭದ್ರಪ್ಪ ಸ್ವಾಗತಿಸಿ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಬಡಶೇಷಿ ನಿರೂಪಿಸಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಅಂಬಿಕಾ ಶಂಕರ್, ಶ್ರೀಕಾಂತ ಲಾಹೋಟಿ, ಉಷಾ ಲಾಹೋಟಿ, ಅನುಶ್ರೀ ಲಾಹೋಟಿ, ಡಾ. ಪಿ.ಎಸ್ ಶಂಕರ್, ಡಾ. ಸಂಗ್ರಾಮ್ ಬಿರಾದಾರ್ ಉದಯ ಹೊನಗುಂಟಿಕರ್, ಅಮರನಾಥ ಪಾಟೀಲ್, ಮಂಜುನಾಥ ಜೇವರ್ಗಿ, ಡಾ. ಸದಾನಂದ ಪೆರ್ಲ, ರವಿ ಮುಕ್ಕ ಮತ್ತಿತರರು ಉಪಸ್ಥಿತರಿದ್ದರು.

(ವರದಿ : ಡಾ.ಸದಾನಂದ ಪೆರ್ಲ)


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top