ಚಿತ್ರಾ ಕೆ ಪಿ ಹಾಗೂ ಶಾರ್ವರಿ ಆರ್ ಎಸ್ : 591 ಅಂಕಗಳೊಂದಿಗೆ 99.3283 ಪರ್ಸಂಟೈಲ್
ಪುತ್ತೂರು: ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ ನೀಟ್‌ನ ಫಲಿತಾಂಶ ಪ್ರಕಟವಾಗಿದ್ದು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿರುತ್ತಾರೆ.
ಪುತ್ತೂರು ಸಾಮೆತ್ತಡ್ಕದ ಪ್ರಶಾಂತ್ ಕೆ ಜಿ ಮತ್ತು ಪೂರ್ಣ ಚಂದ್ರಿಕಾ ದಂಪತಿಯ ಪುತ್ರಿ ಚಿತ್ರಾ ಕೆ ಪಿ (591), ಬೆಳ್ಳಾರೆ ಇಂದಿರಾನಗರದ ರವೀಂದ್ರನಾಥ್ ಮತ್ತು ಸುಗುಣ ಎ ದಂಪತಿಯ ಪುತ್ರಿ ಶಾರ್ವರಿ ಆರ್ ಎಸ್ (591), ಪುತ್ತೂರು ಸಾಮೆತ್ತಡ್ಕದ ಪ್ರಶಾಂತ್ ಕೆ ಜಿ ಮತ್ತು ಪೂರ್ಣ ಚಂದ್ರಿಕಾ ದಂಪತಿಯ ಪುತ್ರಿ ಚೈತ್ರಾ ಕೆ ಪಿ (542), ಗದಗ ಜಿಲ್ಲೆಯ ಬೂದಿಹಾಳದ ಶಿವರುದ್ರಯ್ಯ ಪಟದಯ್ಯ ಹಿರೇಮಠ ಮತ್ತು ಶೈಲಾ ಶಿವರುದ್ರಯ್ಯ ಹಿರೇಮಠ ದಂಪತಿಯ ಪುತ್ರ ಪ್ರತೀಕ ಶಿವರುದ್ರಯ್ಯ ಹಿರೇಮಠ (540), ಪುತ್ತೂರು ಹಾರಾಡಿಯ ದಾಮೋದರ ಎನ್ ಮತ್ತು ನವೀನ ಕುಮಾರಿ ಕೆ ಎಸ್ ದಂಪತಿಯ ಪುತ್ರ ತ್ರಿಶೂಲ್ ಎನ್ ಡಿ (534), ಬಂಟ್ವಾಳ ಅಡ್ಯನಡ್ಕದ ಶ್ರೀಕೃಷ್ಣ ಭಟ್ ಎಸ್ ಮತ್ತು ಜಯಶ್ರೀ ಕೆ. ಆರ್ ದಂಪತಿಯ ಪುತ್ರಿ ಹರ್ಷ ಎಸ್ (515), ಪುತ್ತೂರು ಭಕ್ತಕೋಡಿ ಪಿಲಿಗುಂಡಿಯ ಕೃಷ್ಣಪ್ಪ ಮತ್ತು ಪುಷ್ಪ ದಂಪತಿಯ ಪುತ್ರ ಪಿ ಕೆ ರಕ್ಷಿತ್ (513), ಸುಳ್ಯ ಬೆಳ್ಳಾರೆಯ ಬಿ.ಆರ್ ಲಕ್ಷೀನಾರಾಯಣ ಮತ್ತು ಶ್ರೀದೇವಿ ದಂಪತಿಯ ಪುತ್ರಿ ಅಲಂಕೃತಾ ಎಲ್ (509), ಪುತ್ತೂರು ದರ್ಬೆಯ ದಿನೇಶ್ ಕುಮಾರ್ ಪಿ ಮತ್ತು ಪೂರ್ಣಿಮಾ ಬಿ ದಂಪತಿಯ ಪುತ್ರಿ ಖುಷಿ ಪಿ ಡಿ (502), ಪುತ್ತೂರು ಪೆರ್ಲಂಪಾಡಿಯ ದಾಮೋದರ ಗೌಡ ಕೆ ಮತ್ತು ಹರಿಣಾಕ್ಷಿ ಕೆ ದಂಪತಿಯ ಪುತ್ರಿ ವಿದ್ಯಾ ಕೆ (501), ವಿಟ್ಲ ಬಸವನಗುಡಿಯ ಡಾ. ಗಿರಿಧರ ಎನ್ ಮತ್ತು ಶ್ರೀದೇವಿ ಪಿ ಜಿ ದಂಪತಿಯ ಪುತ್ರಿ ಎನ್ ತನ್ವಿ ಗೌರಿ (479), ಕೊಡಗು ಚೆನ್ನಯನಕೋಟೆಯ ಚಿ.ಟಿ ಪೊನ್ನಪ್ಪ ಮತ್ತು ವೀಣಾ ಪೊನ್ನಪ್ಪ ಸಿ.ಪಿ ರಿಷಿ ಪೊನ್ನಮ್ಮ (476), ಮೈಸೂರು ಎಚ್.ಡಿ. ಕೋಟೆಯ ಮುರುಗೇಶ್ ಎಸ್ ಮತ್ತು ಕನಕೇಶ್ವರಿ ವಿ ದಂಪತಿಯ ಪುತ್ರ ಎಂ ಶ್ರೀಶೈಲ್ (460), ಪುತ್ತೂರು ಆರ್ಯಾಪಿನ ಸೀತಾರಾಮ ಶೆಟ್ಟಿ ಮತ್ತು ಪ್ರಮೀಳಾ ದಂಪತಿಯ ಪುತ್ರಿ ಹಿತಾ ಶೆಟ್ಟಿ (452), ಬೆಂಗಳೂರಿನ ಸುರೇಶ್ ಕೆ.ಆರ್ ಮತ್ತು ಶುಭಶ್ರೀ ದಂಪತಿಯ ಪುತ್ರಿ ಶ್ರೀಲಕ್ಷ್ಮಿ ಸುರೇಶ್ (439) , ಹಾಸನ ಬೇಲೂರಿನ ವೀರೇಂದ್ರ ಎನ್ ಎಚ್ ಮತ್ತು ಆಶಾ ಬಿ ಎಸ್ ದಂಪತಿಯ ಪುತ್ರಿ ಪುಣ್ಯ ಎನ್ ವಿ (428), ಬಂಟ್ವಾಳ ಶಂಭೂರಿನ ಕೆ ರತ್ನಾಕರ ಮತ್ತು ಕಿಶೋರಿ ಕೆ ದಂಪತಿಯ ಪುತ್ರಿ ಮೋಕ್ಷ (423), ಸುಳ್ಯ ಬೆಳ್ಳಾರೆಯ ರಾಜೇಶ ಜಿ ಮತ್ತು ವಿನಯಶ್ರೀ ಕೆ ದಂಪತಿಯ ಪುತ್ರ ಆದಿತ್ಯ ನಾರಾಯಣ ಜಿ (423), ಪುತ್ತೂರು ಸಂಪ್ಯದ ಶೇಖರ ರೈ ಕೆ ಮತ್ತು ಸೌಮ್ಯ ದಂಪತಿಯ ಪುತ್ರಿ ವೃದ್ಧಿ ರೈ (423), ಚಿಕ್ಕಮಗಳೂರು ಕಡೂರಿನ ರಾಜಪ್ಪ ಹೆಚ್ ಜಿ ಮತ್ತು ಭಾಗ್ಯ ಹೆಚ್ ವೈ ದಂಪತಿಯ ಪುತ್ರಿ ಪ್ರಾರ್ಥನಾ ಹೆಚ್ ಜಿ (420), ಪುತ್ತೂರು ಹಾರಾಡಿಯ ಲಕ್ಷ್ಮಿಕಾಂತ್ ಬಿ ಆಚಾರ್ಯ ಮತ್ತು ವೇದಾ ದಂಪತಿಯ ಪುತ್ರಿ ಅರುಂಧತಿ ಎಲ್ ಆಚಾರ್ಯ (410), ಏತಡ್ಕ ಕಾಸರಗೋಡು ಜಿಲ್ಲೆಯ ಕೃಷ್ಣಕುಮಾರ್.ಪಿ.ಕೆ ಮತ್ತು ಶುಭ.ಎಮ್ ದಂಪತಿಯ ಪುತ್ರ ತೇಜಸ್ವಿ ಕೆ (409), ಪುತ್ತೂರು ಕೊಡಿಪ್ಪಾಡಿಯ ಹರಿಶ್ಚಂದ್ರ ಕೆ ಮತ್ತು ತೇಜಾಕ್ಷಿ ದಂಪತಿಯ ಪುತ್ರಿ ಯಶಸ್ವಿ ಎಚ್ ಸುವರ್ಣ (406), ಬಂಟ್ವಾಳ ಮಾಣಿಯ ಅಶೋಕ ಬಿ ಕೊಂಡೆ ಮತ್ತು ಮಧುರಾ ಪಿ ದಂಪತಿಯ ಪುತ್ರಿ ವೃದ್ಧಿ ಎ ಕೊಂಡೆ (405) ಅಂಕದೊಂದಿಗೆ, ವೈದ್ಯಕೀಯ ಕೋರ್ಸಿಗೆ ಅರ್ಹರಾಗಿ ಕಾಲೇಜ್ ಗೆ ಕೀರ್ತಿ ತಂದಿರುತ್ತಾರೆ. ಕೆಲವು ವರ್ಷಗಳಿಂದ ನೀಟ್ ಮತ್ತು ಜೆಇಇ ಪರೀಕ್ಷೆಗಳಲ್ಲಿ ಅದ್ಭುತ ಸಾಧನೆ ಮಾಡುತ್ತಿದ್ದು ಈ ವರ್ಷವೂ ನೀಟ್ ಪರೀಕ್ಷೆಯಲ್ಲಿ ಅಂಬಿಕಾದ ಸಾಧನೆ ಅಪಾರ.
ನೀಟ್ ರಿಪೀಟರ್ಸ್ ಬ್ಯಾಚ್ : ನೀಟ್ ರಿಪೀಟರ್ಸ್ ಬ್ಯಾಚ್‌ನ ವಿದ್ಯಾರ್ಥಿಗಳಲ್ಲಿ ಶೇ.65 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ 500ಕ್ಕಿಂತ ಹೆಚ್ಚು ಅಂಕಗಳು ಲಭಿಸಿರುವುದು ಗಮನಾರ್ಹವಾಗಿದೆ. ನೀಟ್ ರಿಪೀಟರ್ಸ್ ಬ್ಯಾಚ್ ದಾಖಲಾತಿ ಆರಂಭಗೊಂಡಿದ್ದು ಸೀಮಿತ ವಿದ್ಯಾರ್ಥಿಗಳಿಗೆ ಅವಕಾಶಗಳಿವೆ. ರಿಪೀಟರ್ಸ್ ಬ್ಯಾಚ್ ಸೇರಲು ಇಚ್ಛಿಸುವ ವಿದ್ಯಾರ್ಥಿಗಳು 8431285970, 9482822800, 9448835488 ಈ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಿ ವಿಚಾರಿಸಬಹುದೆಂದು ಸಂಸ್ಥೆ ಪ್ರಕಟಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



