ಈ ತಿಂಗಳು ದೇಶಾದ್ಯಂತ ಹಬ್ಬುವ ಈ ವಿದ್ಯಮಾನಕ್ಕೆ 'ಆದಾಯ ಕರ ಜ್ವರ' ಎಂದು ಹೇಳಲಾಗುತ್ತದೆ.
ಕರದ ಪೂರ್ವಾಪರ: ಕರ ನಿರಾಕರಣೆ ಚಳುವಳಿ ನಮ್ಮ ಸ್ವಾತಂತ್ರ್ಯ ಹೋರಾಟದ ಒಂದು ಭಾಗವೇ ಆಗಿದ್ದಿತು. ಚರಿತ್ರೆಯ ಪುಟಗಳಲ್ಲೂ ಒಳ್ಳೆಯ ರಾಜರು ಸಾಲು ಮರಗಳನ್ನು ನಡೆಸುತ್ತಿದ್ದರು, ಅರವಟ್ಟಿಗೆ ಗಳನ್ನು, ಕೆರೆ, ದೇವಸ್ಥಾನಗಳನ್ನು ನಿರ್ಮಿಸುತ್ತಿದ್ದರು. ಅದೇ ರೀತಿ ಕೆಟ್ಟ ದೊರೆಗಳು ಪ್ರಜಾ ಪೀಡಕರೂ, ವಿಲಾಸಿಗಳೂ, ಹೆಚ್ಚು ತೆರಿಗೆ ವಿಧಿಸುವವರೂ ಆಗಿರುತ್ತಿದ್ದರು ಎಂದು ಓದಿದ್ದೇವೆ!
ಚಾಣಕ್ಯನ ಅರ್ಥ ಶಾಸ್ತ್ರದಲ್ಲಿ ಸಹ ತೆರಿಗೆ ಕುರಿತು ಉಲ್ಲೇಖ ಮಾಡಲಾಗಿದೆ. ಮರಣ ಮತ್ತು ತೆರಿಗೆ- ಇವೆರಡೇ ಜೀವನದ ಶಾಶ್ವತ ಸತ್ಯಗಳು ಎಂದವರು ಅಮೆರಿಕೆಯ ವಿಖ್ಯಾತ ಮುತ್ಸದ್ದಿ ಬೆಂಜಮಿನ್ ಫ್ರಾಂಕ್ಲಿನ್ (1706-1790) ತೆರಿಗೆ ಪಾವತಿಯನ್ನು ಮುಂದೂಡಬಹುದೇ ಹೊರತು ತಪ್ಪಿಸಿಕೊಳ್ಳಲು ಆಗದು ಅನ್ನುವ ಮಾತಿದೆ.
ಆಧುನಿಕ ತೆರಿಗೆ ಕಾನೂನುಗಳನ್ನು 1860 ರಲ್ಲಿ ರೂಪಿಸಿದವನು ಜೇಮ್ಸ್ ವಿಲ್ಸನ್. ಕೃಷಿ, ವೃತ್ತಿ, ವೇತನ ಭತ್ಯೆ, ಬಡ್ಡಿ ಲಾಭಾಂಶ- ಇವೇ ಈ ಉದ್ದೇಶಕ್ಕೆ ಆದಾಯದ ಮೂಲ ಎಂದು ಪರಿಗಣಿಸಲಾಗಿತ್ತು.
ಲುಂಬಿಣಿಯ ಅಶೋಕನ ಶಾಸನ ಒಂದರಲ್ಲಿ ಬರ ಬಂದಾಗ ತೆರಿಗೆ ದರವನ್ನು ಆದಾಯದ 1/6 ರಿಂದ 1/8ಕ್ಕೆ ಇಳಿಸಿದ ಉಲ್ಲೇಖವಿದೆ.
ಕಾಳಿದಾಸನ ರಘುವಂಶ ಕಾವ್ಯದಲ್ಲಿ 'ಸೂರ್ಯ ಭೂಮಿಯಿಂದ ತೇವಾಂಶವನ್ನು ಹೇರಿ, ಅದನ್ನು ಸಹಸ್ರಗೊಳಿಸಿ ಭೂಮಿಗೆ ಮರಳಿಸುತ್ತಾನೋ ಹಾಗೆಯೇ ರಾಜನು ಪ್ರಜೆಗಳಿಂದ ಕರ ಸಂಗ್ರಹಿಸುತ್ತಾನೆ' ಎಂದು ಹೇಳುತ್ತಾನೆ.
1955-56 ರಲ್ಲಿ ವಿತ್ತ ಮಂತ್ರಿ ಪ್ರೊ. ಸಿ.ಡಿ. ದೇಶಮುಖ್ ಮಂಡಿಸಿದ ಕೇಂದ್ರ ಆಯ ವ್ಯಯ ಅವಿವಾಹಿತರಿಗೆ ವಾರ್ಷಿಕ 1 ಸಾವಿರ, ವಿವಾಹಿತರಿಗೆ 2 ಸಾವಿರ ಕರಮುಕ್ತ ಆದಾಯ ಮಿತಿ ವಿಧಿಸಲಾಗಿತ್ತು.
2001 ರಿಂದ 5000 ಕ್ಕೆ 9 ಕಾಸು, 7500 ಕ್ಕೆ 1 ಆಣೆ 9 ಕಾಸು 10,000 ಕ್ಕೆ 2 ಆಣೆ 3 ಕಾಸು 15,000 ಕ್ಕೆ 3 ಆಣೆ 3 ಕಾಸು, ಅದನ್ನು ಮೀರಿದ್ದಕ್ಕೆ 4 ಆಣೆ (25 ಪೈಸೆ) ನಿಗದಿಯಾಗಿತ್ತು. ಆಗ ಪ್ರಚಲಿತವಿದ್ದ ನಾಣ್ಯ ಒಂದು ರೂಪಾಯಿಗೆ 16 ಆಣೆ 1 ಆಣೆಗೆ 12 ಕಾಸು. 1957 ರಲ್ಲಿ ದಶಮಾಂಶ ಪದ್ಧತಿ ಅನ್ವಯ ಒಂದು ರೂಪಾಯಿಗೆ 100 ಪೈಸೆ. ಈ ಗಣಿತಕ್ಕೆ ಹೊಂದಿಕೊಳ್ಳಲು ನಮಗೆ ತಿಂಗಳುಗಳೇ ಬೇಕಾದವು.
1955-56ರಲ್ಲಿ ಅಂದಿನ ಬಜೆಟ್ ಗಾತ್ರ 467.9 ಕೋಟಿ. ಕೊರತೆ 5 ಕೋಟಿ. 2025-26 ರಲ್ಲಿ 70 ವರ್ಷಗಳ ನಂತರ, ಇದರ ಗಾತ್ರ 50,65,346 ಲಕ್ಷ ಕೋಟಿ..! 1974-74 ರಲ್ಲಿ ಅತ್ಯಧಿಕ ಆದಾಯ ಕರ ಶೇ.97.75.
ಆದಾಯದಲ್ಲಿನ ತಾರತಮ್ಯ ನಿವಾರಣೆ, ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಇಂದಿರಾ ಗಾಂಧಿಯವರು ಇಟ್ಟ ಈ ಹೆಜ್ಜೆ ತೀಕ್ಷ್ಣ, ವ್ಯಾಪಕ ಟೀಕೆಗೆ ಗುರಿಯಾಯಿತು. ಇದು ತೆರಿಗೆಗಳ್ಳತನ ಮತ್ತು ಕಪ್ಪು ಹಣ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯ ಪಡಲಾಯಿತು.
ಮುಂದಿನ ಸರಕಾರಗಳು ಇದನ್ನು ಕ್ರಮವಾಗಿ ಶೇ. 75, 50, 40 ಕ್ಕೆ ಇಳಿಸಿದ್ದು ಆದಾಯ ಮಿತಿ 2.50-3.00 ಲಕ್ಷ ರೂ. ಇದ್ದಿತು. ಮತ್ತು ಕರಗಳು 05-30 % ಮಿತಿಗೆ ಬಂದವು.
ಈ ಆದಾಯ ಮಿತಿ ವಿಸ್ಮಯಕಾರಿ ಆದರೆ ಸ್ವಾಗತಾರ್ಹ ದೈತ್ಯ ಹೆಜ್ಜೆ ಇರಿಸಿದ್ದು 2025- 26 ರ ಆಯ-ವ್ಯಯದಲ್ಲಿ. ವಾರ್ಷಿಕ 3 ಲಕ್ಷದಿಂದ ಪರಿಣಾಮಕಾರಿ 12.75 ಲಕ್ಷಕ್ಕೆ ಏರಿದುದರಿಂದ ದೇಶದಾದ್ಯಂತ 75% ಸರಕಾರಿ, ಅನುದಾನಿತ, ಕಾರ್ಪೊರೇಟ್ ಹಾಗೂ ಖಾಸಗಿ ವಲಯಗಳ ನೌಕರರು ಆದಾಯ ತೆರಿಗೆ ಪಾವತಿಯಿಂದ ಮುಕ್ತರಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
- ಡಾ.ಹೆಚ್. ಎಸ್.ಸುರೇಶ್.
9448027400
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


