ಹೊಳೆನರಸೀಪುರ: ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ

Upayuktha
0


ಹೊಳೆನರಸೀಪುರ: ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಮತ್ತು ಜಿಲ್ಲಾ ಜಾಗೃತ ಸಮಿತಿ ಹಾಸನ ಜಿಲ್ಲೆ ವತಿಯಿಂದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭವು ಹೊಳೆನರಸೀಪುರದಲ್ಲಿ ಸ್ಥಳೀಯ ನಿವೃತ್ತ ಪತ್ರಕರ್ತ ಬಾ.ರಾ.ಸುಬ್ಬರಾಯರ ಮನೆಯಲ್ಲಿ ಇತ್ತೀಚೆಗೆ ನಡೆಯಿತು.   


ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ. ಕುಶಾಲ್ ಬರಗೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಾಜ್ಯಾದ್ಯಂತ ಒಂದು ಲಕ್ಷ ಮನೆಗಳಲ್ಲಿ ಮನೆಗೊಂದು ಗ್ರಂಥಾಲಯ ಸ್ಥಾಪಿಸುವ ಮಹತ್ವಾಕಾಂಕ್ಷೆ ಪ್ರಾಧಿಕಾರದ್ದಾಗಿದೆ. ಪುಸ್ತಕ ಸಂಸ್ಕೃತಿ, ಜ್ಞಾನದ ಸಂಪತ್ತು ಮನೆ ಮನೆಗೂ ತಲುಪಬೇಕಿದೆ. ಎಲ್ಲಾ ಜಿಲ್ಲೆಗಳಲ್ಲೂ ಜಾಗೃತಿ ಸಮಿತಿ ರಚಿಸಿ ಆ ಮುಖೇನ ಕಾರ್ಯಕ್ರಮಗಳನ್ನು ಪ್ರಾಧಿಕಾರ ಸಂಘಟಿಸುತ್ತಿದ್ದು ಉತ್ತಮ ಪ್ರತಿಕ್ರಿಯೆ ಜನತೆಯಿಂದ ವ್ಯಕ್ತವಾಗುತ್ತಿದೆ ಎಂದರು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ   ಜಿಲ್ಲಾ ಜಾಗೃತಿ ಸಮಿತಿಯ ಸಂಚಾಲಕ  ಗೊರೂರು ಅನಂತರಾಜು ಮಾತನಾಡಿ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆ ಜನಮೆಚ್ಚುಗೆಯ ವಿಚಾರ. ಹಾಸನ ಜಿಲ್ಲೆಯಲ್ಲಿ ಒಂದು ತಿಂಗಳಲ್ಲಿ ಇದು ಒಂಬತ್ತನೇ ಕಾರ್ಯಕ್ರಮವಾಗಿದೆ. ತಾಲ್ಲೂಕಿನಲ್ಲಿ ಹಲವಾರು ಸಾಹಿತಿ ಗಣ್ಯರು ಇದ್ದಾರೆ.  ಅವರೆಲ್ಲಾ ಮನೆಗಳಿಗೆ ಈ ಕಾರ್ಯಕ್ರಮ ತಲುಪಬೇಕು. ಹಲವಾರು ಓದುಗರ ಮನೆಗಳಲ್ಲಿ ಪುಸ್ತಕ ಸಂಗ್ರಹವಿದೆ. ಆ ಮಾಹಿತಿ ತಿಳಿಯಬಯಸುವುದಾಗಿ ಕೋರಿದರು.     


ಜಿಲ್ಲಾ ಜಾಗೃತ ಸಮಿತಿ ಸದಸ್ಯ ಕೆ.ಎಂ.ನಾಗರಾಜ್ ಮಾತನಾಡಿ  ಮುಂದಿನ ದಿನಗಳಲ್ಲಿ ಹೆಚ್ಚು ಗ್ರಂಥಗಳಿರುವ ಮನೆಗಳನ್ನು ಹುಡುಕಿ ಕಾರ್ಯಕ್ರಮ ರೂಪಿಸಲಾಗುವುದೆಂದರು.  


ಡಿ.ಕೆ.ಕುಮಾರಯ್ಯ  ಪ್ರಾಂಶುಪಾಲ, ಮಾಜಿ  ಕ.ಸಾ.ಪ. ತಾ. ಅಧ್ಯಕ್ಷರು ಇವರು ಬರಾಸು ಸಾಹಿತ್ಯ ಪರಿಚಯಿಸುತ್ತಾ  ಹಿರಿಯ ಪತ್ರಕರ್ತರಾಗಿ, ನಟರಾಗಿ ಪಟ್ಟಣದಲ್ಲಿ ನಾಟಕ ಚಟುವಟಿಕೆಯಲ್ಲಿ ಪಾಲ್ಗೊಂಡವರು.  ತಾಲ್ಲೂಕು ಕ.ಸಾ.ಪ.ದಲ್ಲಿ ಕ್ರಿಯಾಶೀಲರಾಗಿ ದುಡಿದವರು. ಅವರ ಅಪ್ರಕಟಿತ ಕಥೆಗಳು ಪ್ರಕಟಗೊಳ್ಳಲೆಂದು ಆಶಿಸಿದರು. 


ಬ.ರಾ.ಸು ಮತ್ತು ಅವರ ಪತ್ನಿ ಇಂದಿರಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ. ವೆಂಕಟೇಶ್, ಆಕ್ರಾಂತ್, ಎ.ಆರ್.ರವಿಕುಮಾರ್, ಎಚ್.ಕೆ.ನರಸಿಂಹ, ವಾಸುದೇವಮೂರ್ತಿ, ವೈ.ವಿ.ಚಂದ್ರಶೇಖರ್, ಸ್ವರೂಪ್, ರಂಗನಾಥಶೆಟ್ಟಿ, ಚುಸಾಪ ತಾ. ಅಧ್ಯಕ್ಷೆ ಪ್ರೇಮಾ ಮಂಜುನಾಥ್ ಭಾಗವಹಿಸಿದ್ದರು. ಕವಿ ಕುಮಾರ್ ಛಲವಾದಿ ಕಾರ್ಯಕ್ರಮ ನಿರೂಪಿಸಿದರು. 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top