ಫಿಫಾ ವಿಶ್ವಕಪ್ 2026ರ ಕ್ವಾರ್ಟರ್-ಫೈನಲ್‌ನಲ್ಲಿ ಸ್ಪೇನ್ ಮತ್ತು ಬೆಲ್ಜಿಯಂ ತಂಡಗಳು ಮುಖಾಮುಖಿಯಾಗುತ್ತಿದ್ದು, ಎರಡು ಭಿನ್ನ ಫುಟ್‌ಬಾಲ್ ಶೈಲಿಗಳ ನಡುವಿನ ಈ ಕದನ ಕುತೂಹಲ ಕೆರಳಿಸಿದೆ. ಸ್ಪೇನ್ ತಂಡವು ತನ್ನ ಸಾಂಪ್ರದಾಯಿಕ 'ಪೊಸೆಷನ್' ಆಟವನ್ನು ನಂಬಿದ್ದರೆ, ಬೆಲ್ಜಿಯಂ ತಂಡವು ಮಾರಕವಾದ 'ಕೌಂಟರ್-ಅಟ್ಯಾಕ್' (ಪ್ರತಿ-ದಾಳಿ) ತಂತ್ರಕ್ಕೆ ಹೆಸರುವಾಸಿಯಾಗಿದೆ.
ಸ್ಪೇನ್ ತಂಡದ ಮಿಡ್‌ಫೀಲ್ಡ್ ಮಾಂತ್ರಿಕರಾದ ಪೆಡ್ರಿ ಮತ್ತು ರೋಡ್ರಿ, ಹಾಗೂ ಯುವ ಪ್ರತಿಭೆ ಲ್ಯಾಮಿನೆ ಯಾಮಲ್ ಬೆಲ್ಜಿಯಂನ ರಕ್ಷಣಾ ಕೋಟೆಯನ್ನು ಭೇದಿಸಲು ಸಜ್ಜಾಗಿದ್ದಾರೆ. ಆದರೆ, ಬೆಲ್ಜಿಯಂ ತಂಡವು ಕೆವಿನ್ ಡಿ ಬ್ರೂಯ್ನೆ, ಜೆರೆಮಿ ಡೊಕು ಮತ್ತು ಲಿಯಾನ್‌ಡ್ರೊ ಟ್ರೊಸಾರ್ಡ್ ಅವರಂತಹ ಚುರುಕಾದ ಆಟಗಾರರ ಮೂಲಕ ಕ್ಷಣಾರ್ಧದಲ್ಲಿ ದಾಳಿ ನಡೆಸಬಲ್ಲದು.
ಈ ಪಂದ್ಯದ ಕುರಿತು ಜೀ5 (Zee5) ತಜ್ಞ ಮತ್ತು ಮಾಜಿ ಭಾರತೀಯ ಫುಟ್‌ಬಾಲ್ ಆಟಗಾರ ರಾಬಿನ್ ಸಿಂಗ್ ಮಾತನಾಡಿ, ಸ್ಪೇನ್ ತಂಡವು ಮಿಡ್‌ಫೀಲ್ಡ್‌ನಲ್ಲಿ ಹೆಚ್ಚು ಆಕ್ರಮಣಕಾರಿಯಾಗಿ ಆಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. "ಪೆಡ್ರಿ ಅವರು ಎದುರಾಳಿಯ ರಕ್ಷಣಾ ವ್ಯೂಹದ ನಡುವೆ ಆಟವನ್ನು ಮುನ್ನಡೆಸಬೇಕು. ಲ್ಯಾಮಿನೆ ಯಾಮಲ್ ಅವರಿಗೆ ಒಬ್ಬರ ವಿರುದ್ಧ ಒಬ್ಬರು (1v1) ಆಡುವ ಅವಕಾಶಗಳನ್ನು ಸೃಷ್ಟಿಸಿಕೊಟ್ಟರೆ, ಅದು ಬೆಲ್ಜಿಯಂ ತಂಡಕ್ಕೆ ದೊಡ್ಡ ಸವಾಲಾಗಲಿದೆ.
ಮತ್ತೊಂದೆಡೆ, ಬೆಲ್ಜಿಯಂ ತಂಡವು ರಕ್ಷಣಾತ್ಮಕವಾಗಿ ಆಡುತ್ತಲೇ ಡೊಕು ಮತ್ತು ಟ್ರೊಸಾರ್ಡ್ ಅವರ ವೇಗವನ್ನು ಬಳಸಿಕೊಂಡು ಪ್ರತಿ-ದಾಳಿ ನಡೆಸಲು ಕಾಯುತ್ತದೆ. ಅವರು ಪಂದ್ಯದ ಆರಂಭದಲ್ಲಿಯೇ ಗೋಲು ಗಳಿಸಿದರೆ, ಸ್ಪೇನ್ ತಂಡ ಒತ್ತಡಕ್ಕೆ ಸಿಲುಕಿ ಡಿಫೆನ್ಸ್‌ನಲ್ಲಿ ತಪ್ಪುಗಳನ್ನು ಮಾಡುವ ಸಾಧ್ಯತೆಯಿದೆ. ಆದ್ದರಿಂದ ಸ್ಪೇನ್ ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಬೇಕು ಮತ್ತು ಬೆಲ್ಜಿಯಂಗೆ ಪ್ರತಿ-ದಾಳಿಗೆ ಅವಕಾಶ ನೀಡಬಾರದು. ರಕ್ಷಣಾ ವಿಭಾಗದಲ್ಲಿ 5-4-1 ಫಾರ್ಮೇಷನ್ ಅಳವಡಿಸಿಕೊಂಡಿರುವ ಬೆಲ್ಜಿಯಂ ತಂಡ, ಕೇವಲ ರಕ್ಷಣೆಯನ್ನೇ ನಂಬಿಕೊಂಡರೆ ಸ್ಪೇನ್‌ನಂತಹ ಬಲಿಷ್ಠ ತಂಡದ ವಿರುದ್ಧ ಸೋಲುವ ಅಪಾಯವಿದೆ," ಎಂದು ರಾಬಿನ್ ಎಚ್ಚರಿಸಿದ್ದಾರೆ.
ಲ್ಯಾಮಿನೆ ಯಾಮಲ್ vs ಬೆಲ್ಜಿಯಂ ಡಿಫೆನ್ಸ್ (Lamine Yamal vs Belgium's left flank ): ಯಾಮಲ್ ಬಹಳ ವೇಗವಾಗಿ ಚೆಂಡನ್ನು ತೆಗೆದುಕೊಂಡು ಹೋಗುತ್ತಾರೆ. ಅವರನ್ನು ಬೆಲ್ಜಿಯಂ ಆಟಗಾರರು ಹೇಗೆ ತಡೆಯುತ್ತಾರೆ ಎನ್ನುವುದರ ಮೇಲೆ ಪಂದ್ಯದ ಫಲಿತಾಂಶ ನಿಂತಿದೆ.
ಜೆರೆಮಿ ಡೊಕು vs ಪೆಡ್ರೊ ಪೊರೊ (Jeremy Doku vs Pedro Porro ) : ಸ್ಪೇನ್‌ನ ಡಿಫೆಂಡರ್ ಪೆಡ್ರೊ ಪೊರೊ ದಾಳಿಗೆ ಹೋದಾಗ, ಬೆಲ್ಜಿಯಂನ ಡೊಕು ತಮ್ಮ ವೇಗದಿಂದ ಸ್ಪೇನ್‌ಗೆ ತೊಂದರೆ ಕೊಡಬಹುದು. ಆದ್ದರಿಂದ, ಡೊಕು ಅವರ ಮೇಲೆ ನಿಗಾ ಇಡುವುದು ಸ್ಪೇನ್‌ಗೆ ಬಹಳ ಮುಖ್ಯ.
ರೋಡ್ರಿ vs ಕೆವಿನ್ ಡಿ ಬ್ರೂಯ್ನೆ (Rodri vs Kevin De ಬೃಯ್ನ್) : ಇವರಿಬ್ಬರೂ ತಮ್ಮ ತಂಡದ ಪ್ರಮುಖ ಆಟಗಾರರು. ಇವರಿಬ್ಬರಲ್ಲಿ ಯಾರು ಮಿಡ್‌ಫೀಲ್ಡ್‌ನಲ್ಲಿ ಚೆನ್ನಾಗಿ ಆಡುತ್ತಾರೋ, ಅವರ ತಂಡವೇ ಪಂದ್ಯದ ಗತಿಯನ್ನು ನಿರ್ಧರಿಸುತ್ತದೆ.
ಪೌ ಕ್ಯುಬಾರ್ಸಿ vs ರೊಮೆಲು ಲುಕಾಕು (Pau Cubarsí vs Romelu Lukaku ): ಬೆಲ್ಜಿಯಂನ ಲುಕಾಕು ಬಹಳ ಬಲಿಷ್ಠ ಆಟಗಾರ. ಅವರನ್ನು ಸ್ಪೇನ್‌ನ ಯುವ ಆಟಗಾರ ಕ್ಯುಬಾರ್ಸಿ ಹೇಗೆ ಎದುರಿಸಿ ನಿಲ್ಲುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಪೆಡ್ರಿ vs ಬೆಲ್ಜಿಯಂ ಮಿಡ್‌ಫೀಲ್ಡ್ (Pedri vs Belgium's midfield block ): ಪೆಡ್ರಿ ಅವರು ಬೆಲ್ಜಿಯಂ ಆಟಗಾರರ ನಡುವೆ ಜಾಗ ಹುಡುಕಿಕೊಂಡು ಚೆಂಡನ್ನು ಹೇಗೆ ಪಾಸ್ ಮಾಡುತ್ತಾರೆ ಎನ್ನುವುದರ ಮೇಲೆ ಸ್ಪೇನ್ ತಂಡದ ಗೆಲುವಿನ ಅವಕಾಶಗಳು ನಿಂತಿವೆ.
ಗಮನಿಸಬೇಕಾದ ಆಟಗಾರರು:
ಸ್ಪೇನ್: ರೋಡ್ರಿ, ಪೆಡ್ರಿ, ಲ್ಯಾಮಿನೆ ಯಾಮಲ್, ಮೈಕೆಲ್ ಒಯಾರ್ಜಬಾಲ್, ಪೌ ಕ್ಯುಬಾರ್ಸಿ.
ಬೆಲ್ಜಿಯಂ: ಕೆವಿನ್ ಡಿ ಬ್ರೂಯ್ನೆ, ಜೆರೆಮಿ ಡೊಕು, ಲಿಯಾನ್‌ಡ್ರೊ ಟ್ರೊಸಾರ್ಡ್, ಚಾರ್ಲ್ಸ್ ಡಿ ಕೆಟೆಲೇರೆ, ರೊಮೆಲು ಲುಕಾಕು.
ಫಿಫಾ ವಿಶ್ವಕಪ್ 2026ರ ನೇರ ಪ್ರಸಾರವನ್ನು ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ಬಾಂಗ್ಲಾ ಭಾಷೆಗಳಲ್ಲಿ ಜೀ5 (Zee5) ನಲ್ಲಿ ವೀಕ್ಷಿಸಿ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

