ಫಿಫಾ ವಿಶ್ವಕಪ್ 2026: ಸೆಮಿಫೈನಲ್ ಕದನಕ್ಕೆ ವೇದಿಕೆ ಸಜ್ಜು!

Upayuktha
0

 


ಫಿಫಾ ವಿಶ್ವಕಪ್ 2026 ಇದೀಗ ರೋಚಕ ಸೆಮಿಫೈನಲ್ ಹಂತವನ್ನು ತಲುಪಿದ್ದು, ಪ್ರಶಸ್ತಿ ಜಯಿಸುವ ತಂಡ ಯಾವುದು ಎಂಬ ಕುತೂಹಲ ಫುಟ್‌ಬಾಲ್ ಅಭಿಮಾನಿಗಳಲ್ಲಿ ಮನೆಮಾಡಿದೆ. ಜರ್ಮನಿಯ ದಿಗ್ಗಜ ಗೋಲ್‌ಕೀಪರ್ ಮತ್ತು ‘Zee 5’ನ ತಜ್ಞರಾಗಿರುವ ಆಲಿವರ್ ಕಾನ್, ಅಂತಿಮ ನಾಲ್ಕರ ಘಟ್ಟದ ಪೈಪೋಟಿಯ ಬಗ್ಗೆ ತಮ್ಮ ವಿಶ್ಲೇಷಣೆ ಹಂಚಿಕೊಂಡಿದ್ದಾರೆ. 


ಸೆಮಿಫೈನಲ್ ಪ್ರವೇಶಿಸುವ ತಂಡಗಳ ಕುರಿತು ಮಾತನಾಡಿದ ಆಲಿವರ್ ಕಾನ್, "ಈ ಹಂತದಲ್ಲಿ ತಾಂತ್ರಿಕ ಶಿಸ್ತು, ಮಾನಸಿಕ ದೃಢತೆ ಮತ್ತು ಆಟದ ಸೂಕ್ಷ್ಮ ವ್ಯತ್ಯಾಸಗಳೇ ನಿರ್ಣಾಯಕ ಪಾತ್ರ ವಹಿಸುತ್ತವೆ. ಕೇವಲ ಬಲಪ್ರದರ್ಶನಕ್ಕಿಂತ ಹೆಚ್ಚಾಗಿ, ಬುದ್ಧಿವಂತಿಕೆಯಿಂದ ಆಡುವ ತಂಡವೇ ಜಯಶೀಲರಾಗಲಿದ್ದಾರೆ," ಎಂದರು. 


ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಸೆಮಿಫೈನಲ್ ಪಂದ್ಯವನ್ನು ಟೂರ್ನಿಯ ‘ಅತ್ಯಂತ ಆಕರ್ಷಕ ತಾಂತ್ರಿಕ ಕದನ’ ಎಂದು ಬಣ್ಣಿಸಿದ ಕಾನ್, "ಸ್ಪೇನ್‌ನ ಚೆಂಡಿನ ನಿಯಂತ್ರಣದ (Possession-based) ಶೈಲಿಗೆ, ಫ್ರಾನ್ಸ್‌ನ ಮಾರಕ ಪ್ರತಿ-ದಾಳಿ (Counter-attacking) ಎದುರಾಗಲಿದೆ. ಮಿಡ್‌ಫೀಲ್ಡ್ ನಿಯಂತ್ರಣವೇ ಈ ಪಂದ್ಯದ ತಿರುವು," ಎಂದರು.


ಫ್ರಾನ್ಸ್‌ನ ಬಲಿಷ್ಠ ರಕ್ಷಣಾಪಡೆಯನ್ನು ಭೇದಿಸಲು ಸ್ಪೇನ್ ತಂಡವು ತಾಳ್ಮೆಯಿಂದ ಆಡಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದ ಅವರು, "ಚೆಂಡನ್ನು ವೇಗವಾಗಿ ಚಲಿಸುವುದು, ಮೈದಾನದಲ್ಲಿ ‘ಓವರ್‌ಲೋಡ್‌’ ಸೃಷ್ಟಿಸುವುದು ಮತ್ತು ರಕ್ಷಣಾತ್ಮಕ ಸಮತೋಲನ ಕಾಯ್ದುಕೊಳ್ಳುವುದು ಸ್ಪೇನ್ ಪಾಲಿಗೆ ಅನಿವಾರ್ಯ" ಎಂದು ಎಚ್ಚರಿಸಿದರು. 


ಆಧುನಿಕ ಫುಟ್‌ಬಾಲ್‌ನಲ್ಲಿ ಗೋಲ್‌ಕೀಪರ್‌ಗಳ ಪಾತ್ರದ ಬಗ್ಗೆ ಮಾತನಾಡಿದ ಕಾನ್, "ಇಂದಿನ ಗೋಲ್‌ಕೀಪರ್‌ಗಳು ಕೇವಲ ಕೊನೆಯ ರಕ್ಷಕರಲ್ಲ, ಅವರು ಆಕ್ರಮಣದ ಮೊದಲ ರೂವಾರಿಗಳು. ಅವರ ಒಂದು ಸಣ್ಣ ನಿರ್ಧಾರ ಅಥವಾ ತಪ್ಪು ಪಂದ್ಯದ ದಿಕ್ಕನ್ನೇ ಬದಲಿಸಬಲ್ಲದು," ಎಂದು ತಮ್ಮ ಅನುಭವ ಹಂಚಿಕೊಂಡರು. 


ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕಾನ್, ಫ್ರಾನ್ಸ್ ತಂಡಕ್ಕೆ ಅಲ್ಪ ಮುನ್ನಡೆ ನೀಡಿದರು. "ತಂಡದ ಸಮತೋಲನ, ಆಟಗಾರರ ಆಳ ಮತ್ತು ಯಾವುದೇ ಸನ್ನಿವೇಶದಲ್ಲೂ ಪಂದ್ಯ ಗೆಲ್ಲುವ ಸಾಮರ್ಥ್ಯದ ದೃಷ್ಟಿಯಿಂದ ಫ್ರಾನ್ಸ್ ಹೆಚ್ಚು ಪರಿಪೂರ್ಣವಾಗಿ ಕಾಣುತ್ತಿದೆ. ಆದಾಗ್ಯೂ, ಸೆಮಿಫೈನಲ್ ಹಂತದಲ್ಲಿರುವ ಯಾವುದೇ ತಂಡಕ್ಕೂ ವಿಶ್ವಕಪ್ ಗೆಲ್ಲುವ ಸಾಮರ್ಥ್ಯವಿದೆ," ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 


ಫಿಫಾ ವಿಶ್ವಕಪ್ 2026 ಅನ್ನು ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ ಝೀ5 (Zee5) ನಲ್ಲಿ ನೇರವಾಗಿ ವೀಕ್ಷಿಸಿ.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top