ಬೆಂಗಳೂರು: ಸಂಭ್ರಮ ಸಂಸ್ಥೆಯು ಪ್ರಕೃತಿ ಮಾತೆ ಚಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ ಕೆಂಗೇರಿ ಉಪನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಇತ್ತೀಚೆಗೆ ಆಯೋಜನೆ ಮಾಡಿದ "ಭಜನೆಯಿಂದ ಭಾವೈಕ್ಯತೆಗೆ" ಎಂಬ ಕಾರ್ಯಕ್ರಮದಲ್ಲಿ ಬೆಂಗಳೂರು ಭಜನ ಕ್ಲಬ್ಬಿಂಗ್ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಾಡಿನ ಸುಪ್ರಸಿದ್ಧ ಗಾಯಕಿ ವಿದುಷಿ ಗೀತಾ ಭತ್ತದವರ ತಂಡ ಬಹಳ ಅದ್ಭುತವಾಗಿ ಭಜನೆ ಗೀತೆಗಳು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.
ಪ್ರೇಕ್ಷಕರು ಕೂಡ ಭಜನೆಯನ್ನು ಹಾಡುತ್ತಾ ನಮ್ಮ ನಾಡಿನ ಸಂಸ್ಕೃತಿಯಾದ ಭಜನ ಗೀತೆಗಳಿಗೆ ನರ್ತನ ಮಾಡುತ್ತಾ ಭಕ್ತಿ ಭಾವದಲ್ಲಿ ತಲ್ಲಿನರಾಗಿ ಭಾವೈಕ್ಯತೆಗೆ ಸಾಕ್ಷಿಯಾದರು. ಈ ಕಾರ್ಯಕ್ರಮದಲ್ಲಿ ಕೆಂಗೇರಿ ಶ್ರೀ ರಾಘವೇಂದ್ರಸ್ವಾಮಿ ಮಠದ ಅಧ್ಯಕ್ಷ ಸುಧೀಂದ್ರ ಕುಮಾರ್, ಪ್ರಕೃತಿ ಮಾತಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಪರಮೇಶ್ವರ್, ಬೆಂಗಳೂರು ಭಜನ ಕ್ಲಬ್‌ನ ಧನಂಜಯ್ ರವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾದ ವಿದುಷಿ ಉಷಾ ಬಸಪ್ಪ ಭಾಗವಹಿಸಿದ್ದರು. ಖ್ಯಾತ ಜಾನಪದ ಗಾಯಕರಾದ ಡಾ. ಜೋಗಿಲ ಸಿದ್ದರಾಜುರವರು ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


