ಕವನ: ಸ್ಕೂಲಿಗೆ ಹೊಂಟಾವು ಗುಲಾಬಿ

Upayuktha
0


ಗೊಂಬಿ ಜೊತೆ ಸ್ಕೂಲಿಗೆ ಹೊಂಟಾನ ಕುಂಬಿ

ಪ್ರಗತಿ ನಮ್ದು ಜೋರ್ದಾರ ಅದ ನೋಡಬರ್ರಿ

ಗುಂಡಣ್ಣಂದು ಸೆಕೆಂಡ್ ಸ್ಟ್ಯಾಂಡರ್ಡ್ ಅಲ್ವೇನ್ರಿ

ನಾನೂ ನರ್ಸರಿಗೆ ಸೆರ್ಕೊಂಡಿನಿ ಅಂದ ವಾಸುಕಿ!


ಚುರುಮುರಿ ಪಟಾಪಟಾ ವಗ್ಗರಣಿ ಚೋಂಯ್

ಕುರುಕುರು ಅಂತ ಅಂತದ ನಮ್ಮ ಕುಂಬಿ ಪುಟ್ಟಾ

ವಿಹಾಂಶಣ್ಣ ಅಂದಂಗೇ ಅಂತದ ಅವ್ನ ಹಿಂದಿಂದೆ 

ಸುತ್ತಿ ಸುತ್ತಿ,ಪುಟಾಣಿ ಮರಿ ನೋಡ್ರಿ ನಮ್ಮ ವಾಸುಕಿ!


ಅವ್ರ ಮಾತ ಕೇಳಿ ನಾನಂತೂ ನಕ್ಕೇ ನಕ್ಕಿನಿ ನೋಡ್ರಿ

ದೊಡ್ಡವ್ರ ಮಾತಾಡಿದಂಗ ಆಡ್ತಾನು ಕುಂಬಿ ಅಲ್ವೇನ್ರಿ?

ದೇವ್ರಗೊಂದು ಉದ್ದಕ ನಮಸ್ಕಾರ ಹಾಕಿ ಬಂದಾನು

ಅಜ್ಜಾ ನೀನು ಅಂಜಬ್ಯಾಡ ನಾನಿರ್ತಿನಿ ಅಂತಾನಿವಾ!


ಪರಮ ಪವಿತ್ರ ಪ್ರಗತಿ ಸದಾ ನಿನಗ ನಾವು ಸಂಗಾತಿ

ಅದಮ್ಯ ಚೈತನ್ಯದ ಶಕ್ತಿ ಎಲ್ಲಾ ನಮ್ಮೊಳಗೇ ಅದಲ್ರಿ

ವಿಹಾಂಶ ವಿಹಾರ ವಾಸುಕಿ ವೈಭವ ಸಂಭ್ರಮ ನೋಡ್ರಿ

ಸ್ಕೂಲ್ ಹೋಮ್ವರ್ಕ್ ಆಟಪಾಠ ಎಲ್ಲ ಮಜಾಮಜಾರಿ!


-ಶ್ರೀನಿವಾಸ ಜಾಲವಾದಿ, ಸುರಪುರ


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top