ಮಂಗಳೂರು: ಭಾರತ್ ಕನೆಕ್ಟ್ ಉಪಕ್ರಮದಡಿ 60 ಕೋಟಿ ರೂಪಾಯಿ ಮೌಲ್ಯದ 10 ಲಕ್ಷಕ್ಕೂ ಹೆಚ್ಚು ಇ-ಚಲನ್ ವಹಿವಾಟು ನಡೆಸಲಾಗಿದೆ ಎಂದು ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್‍ಪಿಸಿಐ)ದ ಅಂಗಸಂಸ್ಥೆಯಾಗಿರುವ ಎನ್‍ಪಿಸಿಐ ಭಾರತ್ ಬಿಲ್‍ಪೇ ಲಿಮಿಟೆಡ್ (ಎನ್‍ಬಿಬಿಎಲ್) ಪ್ರಕಟಿಸಿದೆ.
ಹಲವು ರಾಜ್ಯಗಳಲ್ಲಿ ಈ ಉಪಕ್ರಮ ಜಾರಿಗೊಳಿಸಲಾಗಿದ್ದು, ನಾಗರಿಕರು ಟ್ರಾಫಿಕ್ ಚಲನ್‍ಗಳನ್ನು ಸುಲಲಿತವಾಗಿ ಮತ್ತು ಸುರಕ್ಷಿತವಾಗಿ ವೀಕ್ಷಿಸಲು ಮತ್ತು ಪಾವತಿಸಲು ಇದು ನೆರವಾಗುತ್ತದೆ. ನಾಗರಿಕ ಸೌಲಭ್ಯಗಳ ಡಿಜಿಟಲ್ ಪಾವತಿ ಸೊಲ್ಯೂಶನ್ ಅಳವಡಿಕೆಯ ಹೆಚ್ಚಳವನ್ನು ಈ ಮಹತ್ವದ ಮೈಲುಗಲ್ಲು ಸೂಚಿಸುತ್ತದೆ. ಸಂಪೂರ್ಣ ಡಿಜಿಟಲ್ ಆರ್ಥಿಕತೆಯತ್ತ ದೇಶದ ಪಯಣದಲ್ಲಿ ಮತ್ತಷ್ಟು ಮುನ್ನಡೆದಂತಾಗಿದೆ ಎಂದು ಎನ್‍ಬಿಬಿಎಲ್ ಎಂಡಿ & ಸಿಒಓ ಡಾ.ನೂಪುರ್ ಚತುರ್ವೇದಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಅತಿಹೆಚ್ಚು ಎಂದರೆ 7 ಲಕ್ಷ ವಹಿವಾಟುಗಳು ನಡೆದಿದ್ದು, ರಾಷ್ಟ್ರಮಟ್ಟದಲ್ಲಿ ಉಳಿದ ರಾಜ್ಯಗಳಲ್ಲೂ ತ್ವರಿತವಾಗಿ ಭಾರತ್ ಕನೆಕ್ಟ್ ಇ-ಚಲನ್ ಜಾಲವನ್ನು ವಿಸ್ತರಿಸಲಾಗುವುದು ಎಂದು ವಿವರಿಸಿದ್ದಾರೆ. ಇ-ಚಲನ್ ವರ್ಗದ ಯಶಸ್ಸು, ಡಿಜಿಟಲ್ ಆಡಳಿತದತ್ತ ಪ್ರಮುಖ ಹೆಜ್ಜೆಯ ಸೂಚಕವಾಗಿದ್ದು, ರಾಜ್ಯಮಟ್ಟದ ಸಂಚಾರ ನಿಮಯ ಜಾರಿಯನ್ನು ಭಾರತದ ಡಿಜಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಜತೆ ಸಮನ್ವಯಗೊಳಿಸಲು ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


