ಸ್ಯಾಂಡಲ್ ವುಡ್ ಸಲಗ ಮತ್ತು ರಚಿತಾ ರಾಮ್ ನಟಿಸಿರುವ 'ಲ್ಯಾಂಡ್ ಲಾರ್ಡ್' ನಾಳೆ ಜೀ ಕನ್ನಡದಲ್ಲಿ

Upayuktha
0

 


 

ಬೆಂಗಳೂರು: ಜೀ಼ ಕನ್ನಡ ವಾಹಿನಿ ತನ್ನ ವಿಶಿಷ್ಟವಾದ ಕಾರ್ಯಕ್ರಮಗಳೊಂದಿಗೆ ವೀಕ್ಷಕರನ್ನು ಮನರಂಜಿಸುತ್ತಾ ಬಂದಿದೆ. ಆಕರ್ಷಕ ಧಾರಾವಾಹಿಗಳು, ರೋಚಕ ರಿಯಾಲಿಟಿ ಶೋಗಳು ಮತ್ತು ಬ್ಲಾಕ್ಬಸ್ಟರ್ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ಗಳ ಮೂಲಕ ಜೀ಼ ಕನ್ನಡ ವಾಹಿನಿ ನಿರಂತರವಾಗಿ ಮೊದಲ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜೀ಼ ಕನ್ನಡ ವಾಹಿನಿ ಮತ್ತೊಮ್ಮೆ ತನ್ನ ಪ್ರೇಕ್ಷಕರಿಗೆ ಅದ್ಬುತ ಅನುಭವ ನೀಡಲು ಸಜ್ಜಾಗಿದ್ದು, ಇದೇ ಶನಿವಾರ ಸಂಜೆ 4 ಗಂಟೆಗೆ ದುನಿಯಾ ವಿಜಯ್, ರಚಿತಾ ರಾಮ್ ಅಭಿನಯದಲ್ಯಾಂಡ್ ಲಾರ್ಡ್ಸಿನೆಮಾವನ್ನು ನಿಮಗಾಗಿ ಹೊತ್ತುತರುತ್ತಿದೆ.

 

1980 ದಶಕದ ಹಳ್ಳಿಯೊಂದರಲ್ಲಿ ನಡೆಯುವ ಶಕ್ತಿಯುತ ಸಾಮಾಜಿಕ ಕಥಾಹಂದರದ ಸಿನಿಮಾವೇ 'ಲ್ಯಾಂಡ್ ಲಾರ್ಡ್'. ಸಿನೆಮಾವು ಆತ್ಮಗೌರವ, ದಬ್ಬಾಳಿಕೆ, ನ್ಯಾಯ, ಪ್ರತಿರೋಧದ ಹಾಗು ಮತ್ತಿತರ ಅಂಶಗಳಿಗೆ ಮಹತ್ತರವಾದ ಒತ್ತು ನೀಡಿದೆ. ಸಮಾಜದಲ್ಲಿನ ಜಾತಿ ತಾರತಮ್ಯ, ಅಸಮಾನತೆ ಮತ್ತು ಬಡವರ ಮೇಲಿನ ಸಿರಿವಂತರ ದಬ್ಬಾಳಿಕೆಯನ್ನು ಚಿತ್ರ ಕಣ್ಣಿಗೆ ಕಟ್ಟುವಂತೆ ತೋರಿಸುತ್ತದೆ. ಸಾಮಾನ್ಯ ಜನರು ಅನ್ಯಾಯದ ವಿರುದ್ಧ ಒಟ್ಟಾಗಿ ಹೋರಾಟ ಮಾಡಿದಾಗ ಏನಾಗುತ್ತದೆ ಎಂಬುದೇ ಚಿತ್ರದ ಜೀವಾಳವಾಗಿದ್ದು, ಇಡೀ ಕುಟುಂಬ ಒಟ್ಟಿಗೆ ಕುಳಿತು ನೋಡಲೇಬೇಕಾದ ಅತ್ಯುತ್ತಮ ಸಿನಿಮಾ ಇದಾಗಿದೆ.

 

ಶಾಂತ ಜೀವನ ಬಯಸುವ ರಾಚಯ್ಯ(ದುನಿಯಾ ವಿಜಯ್) ತನ್ನ ಮಡದಿ ನಿಂಗವ್ವ (ರಚಿತಾರಾಮ್) ಮತ್ತು ಮಗಳು ಭಾಗ್ಯಾಳೊಂದಿಗೆ, ತಾನು ಹೆಮ್ಮೆಯಿಂದ ತನ್ನದೇ ಎಂದು ಕರೆಯಬಹುದಾದ ಒಂದು ಸಣ್ಣ ಜಮೀನನ್ನು ಹೊಂದುವ ಕನಸಿನೊಂದಿಗೆ ಬದುಕುತ್ತಿರುವವನಾಗಿದ್ದಾನೆ. ಆದರೆ, ಅವನ ಗ್ರಾಮವನ್ನು ಪ್ರಭಾವಶಾಲಿ ಜಮೀನುದಾರ ಸಣ್ಣ ಧಣಿ (ರಾಜ್ ಬಿ. ಶೆಟ್ಟಿ) ಆಳುತ್ತಿದ್ದು, ಅವನ ಪ್ರಭಾವ ಜಮೀನು ಮಾಲೀಕತ್ವ, ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯವರೆಗೂ ವಾಪಿಸಿರುತ್ತದೆ. ರಾಚಯ್ಯ ಕಾನೂನಿನ ಮೇಲೆ ಬಹಳ ನಂಬಿಕೆ ಇಟ್ಟು, ನ್ಯಾಯವು ಸಾಮಾನ್ಯ ಜನರನ್ನು ಕಾಪಾಡುತ್ತದೆ ಎಂದು ನಂಬಿದ್ದರೂ, ಧಣಿಯ ಆಡಳಿತದಡಿಯಲ್ಲಿ ಗ್ರಾಮಸ್ಥರು ಅನುಭವಿಸುವ ಶೋಷಣೆ, ಭಯ ಮತ್ತು ಹಿಂಸೆ ಆತನ ಗಮನಕ್ಕೆ ಬರುತ್ತದೆ. ಯಾವಾಗ ಒಂದು ಮುಗ್ಧ ಕುಟುಂಬ ಅನ್ಯಾಯವಾಗಿ ಸಾವನ್ನಪ್ಪುತ್ತದೆಯೋ, ಆಗ ಗ್ರಾಮಸ್ಥರ ಆಕ್ರೋಶ ಸ್ಫೋಟಗೊಳ್ಳುತ್ತದೆ. ಶಾಂತ ಸ್ವಭಾವದ ರಾಚಯ್ಯ ಧಣಿಯ ಶೋಷಣೆ ನೋಡಲಾರದೆ ನಿಧಾನವಾಗಿ ಬದಲಾಗಿ ಇವೆಲ್ಲದರ ವಿರುದ್ಧ ಧ್ವನಿ ಎತ್ತುವ ನಾಯಕನಾಗಿ ಬದಲಾಗುತ್ತಾನೆ. ಚಿತ್ರದಲ್ಲಿ ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಅವರ ನಟನೆ ಅದ್ಭುತವಾಗಿದ್ದು, ಕಥೆಗೆ ಜೀವ ತುಂಬಿದ್ದಾರೆ. ಇನ್ನು ಜಮೀನ್ದಾರ್ ಸಣ್ಣ ಧಣಿಯ ಪಾತ್ರದಲ್ಲಿ ಮಿಂಚಿದ ರಾಜ್ ಬಿ. ಶೆಟ್ಟಿ ತನ್ನ ನಟನೆಯ ಮೂಲಕ ಪ್ರೇಕ್ಷಕರನ್ನು ಬೆರಗುಗೊಳಿಸುತ್ತಾರೆ.

 

ರಾಚಯ್ಯ ಮತ್ತು ಗ್ರಾಮಸ್ಥರು ಸಣ್ಣಧಣಿಯ ದಬ್ಬಾಳಿಕೆಯ ವಿರುದ್ಧ ಹೋರಾಡುವಲ್ಲಿ ಯಶಸ್ವಿಯಾಗುತ್ತಾರೆಯೇ? ವೀಕ್ಷಿಸಿ 'ಲ್ಯಾಂಡ್ಲಾರ್ಡ್' ಇದೇ ಶನಿವಾರ ಮಧ್ಯಾಹ್ನ 4 ಗಂಟೆಗೆ ಕೇವಲ ಜೀ ಕನ್ನಡದಲ್ಲಿ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top