ಭೂಮಿ, ಸಮಸ್ತ ಜೀವಿಗಳ ವಾಸಸ್ಥಾನ. ಆದ್ದರಿಂದ ಭೂಮಿಯನ್ನು "ವಸುಂಧರೆ" ಎಂದು ಕರೆಯಲಾಗುತ್ತದೆ. ಭೂಮಿ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಅದು ಸಮಸ್ತ ಜೀವರಾಶಿಗಳನ್ನು ತನ್ನ ಒಡಲಿನಲ್ಲಿ ಇಟ್ಟು ಕಾಪಾಡುತ್ತದೆ. ಸಮಸ್ತ ಜೀವರಾಶಿಗಳ ಅಸ್ಥಿತ್ವವನ್ನು ಪರಿಚಯಿಸಿ ಕೊಡಲು ಪ್ರತಿ ವರ್ಷ ಮೇ 22ರಂದು "ವಿಶ್ವ ಭೂ ವೈವಿದ್ಯತೆ ದಿನ"ವನ್ನಾಗಿ ಆಚರಿಸಲಾಗುತ್ತಿದೆ.
ಪ್ರಾಣಿಗಳು ಮತ್ತು ಮಾನವರಿಗೆ ಹೋಲಿಸಿದರೆ ಮನುಷ್ಯ ವಿಚಾರ ಮಾಡುವ ಶಕ್ತಿ ಹೊಂದಿದ್ದಾನೆ. ಆದರೆ ಅದಕ್ಕೂ ಮೀರಿ ಮನುಷ್ಯ ಆಶ್ರಯ ಕೊಟ್ಟ ನಿಸರ್ಗದ ಬಗ್ಗೆ ಶೋಷಣೆಯ ಮನೋಭಾವ ಹೊಂದಿದ್ದಾನೆ.
ನಾಲಿಗೆ ರುಚಿ, ಆಶೆ ಬುರುಕ ಸ್ವಭಾವ ಮನುಷ್ಯನನ್ನು ನಿಸರ್ಗ, ಪ್ರಾಣಿ ಪಕ್ಷಿಗಳನ್ನು ನಾಶ ಮಾಡುವಂತೆ ಉತ್ತೇಜಿಸುತ್ತದೆ.
ಇದರಿಂದಲೇ ಭೂಮಿಯ ಮೇಲಿನ ಎಷ್ಟೋ ಪ್ರಾಣಿ, ಪಕ್ಷಿಗಳು ತಮ್ಮ ಅಸ್ತಿತ್ವ ಕಳೆದುಕೊಂಡು ವಿನಾಶದ ಅಂಚಿನಲ್ಲಿವೆ. ಆದ್ದರಿಂದಲೇ ಗಾಂಧೀಜಿಯವರು ನಿಸರ್ಗ ಮನುಷ್ಯನ ಅವಶ್ಯಕತೆಗಳನ್ನು ಪೂರೈಸಬಲ್ಲದು, ಅವನ ಆಸೆಬುರುಕತನವನ್ನಲ್ಲ ಎಂದು ಹೇಳಿದ್ದಾರೆ.
ಅಮೆಜಾನ್ ಕಾಡು ಕೂಡ ಮನುಷ್ಯನ ಆಸೆಬುರುಕ ಸ್ವಭಾವಕ್ಕೆ ಸಿಕ್ಕು ಎಷ್ಟೋ ಹಾಳಾಗಿದೆ. ಹಿಮಾಲಯ ಪರ್ವತದ 40% ಹಿಮ ಕರಗಿ ಹೋಗಿದೆ ಎಂದು ಹೇಳುತ್ತಾರೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಎಷ್ಟೋ ಕಾಡುಗಳು ಹಾಳಾಗಿವೆ. ಆದರೂ ಇನ್ನೂ ಬುದ್ಧಿ ಬಂದಿಲ್ಲ ಎಂದು ಕಾಣುತ್ತದೆ. ವೀರಪ್ಪನ್ ಇನ್ನು ಇಪ್ಪತ್ತು ವರ್ಷ ಬದುಕಿದ್ದರೆ ಆನೆಗಳನ್ನು ಕೇವಲ ಸಿನಿಮಾದಲ್ಲಿ ನೋಡಬೇಕಾಗಿತ್ತು ಎಂದು ಹೇಳುತ್ತಿದ್ದರು. ಅಷ್ಟರ ಮಟ್ಟಿಗೆ ಮನುಷ್ಯ ಜೀವರಾಶಿಗಳನ್ನು ಶೋಷಿಸುತ್ತಾನೆ.
ಈ ಭೂಮಿ ಕೇವಲ ಮನುಷ್ಯನಿಗೆ ಮಾತ್ರ ಸೀಮಿತವಾಗಿಲ್ಲ, ಪ್ರಾಣಿ, ಪಕ್ಷಿ, ಸಸ್ಯ ಸಂಕುಲಗಳು ಕೂಡ ನಿಸರ್ಗದ ಅವಿಭಾಜ್ಯ ಅಂಗ ಎಂದು ಅರಿತುಕೊಂಡರೆ ಮಾತ್ರ ಮನುಷ್ಯನಾಗಿ ಹುಟ್ಟಿದ್ದು ಸಾರ್ಥಕ ಎಂದು ಹೇಳಬಹುದು.
ಪ್ರತಿ ಪ್ರಾಣಿ, ಪಕ್ಷಿಗಳು ನಿಸರ್ಗಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತವೆ, ಆದರೆ ಮನುಷ್ಯ ಮಾತ್ರ ತನ್ನ ದರ್ಪದ ಸ್ವಭಾವ ಬಿಟ್ಟಿಲ್ಲ.
ಅಳಿಲುಗಳು, ತಾವು ತಿಂದ ಹಣ್ಣಿನ ಬೀಜಗಳನ್ನು ನೆಲದಲ್ಲಿ ಹೂತಿಟ್ಟು. ಎಷ್ಟೋ ಸಸ್ಯಗಳ ಸೃಷ್ಟಿಗೆ ಕಾರಣವಾಗಿವೆ. ಎರೆಹುಳು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಪಕ್ಷಿಗಳು ಪರಾಗ ಸ್ಪರ್ಶದ ಮೂಲಕ ತಮ್ಮದೇ ಆದ ಕೊಡುಗೆಯನ್ನು ನೀಡುತ್ತವೆ. ಆಮೆ ಮತ್ತು ಮೀನು ನೀರನ್ನು ಸ್ವಚ್ಛವಾಗಿ ಇಟ್ಟರೆ, ಮರಗಳು ವಾತಾವರಣದಲ್ಲಿ ಆಮ್ಲ ಜನಕ ಬಿಟ್ಟು ಕಾರ್ಬನ್ ಡೈ ಆಕ್ಸೈಡ್ ಹೀರಿಕೊಂಡು ತಮ್ಮದೇ ಕೊಡುಗೆ ನೀಡುತ್ತವೆ. ಆದರೆ ಮನುಷ್ಯ?
ಬನ್ನಿ, ನಾವು ಕೂಡ ನಿಸರ್ಗದ ಒಂದು ಭಾಗವಾಗಿ ಭೂ ವೈವಿಧ್ಯತೆಯನ್ನು ಕಾಪಾಡೋಣ, ಮತ್ತು ಅದರ ಮೂಲಕ ನಾವು. ಕೂಡ ನಮ್ಮ ಅಳಿಲು ಸೇವೆ ಸಲ್ಲಿಸೋಣ. ಏನಂತೀರಾ?
-ಗಾಯತ್ರಿ ಸುಂಕದ, ಬದಾಮಿ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


