ಮಂಗಳೂರಿನಲ್ಲಿ ‘ಪಾಲೇಮಾರ್ ಕನ್ವೆನ್ಷನ್ ಸೆಂಟರ್’ ಭವ್ಯ ಉದ್ಘಾಟನೆ; ಸಮಾಜಸೇವೆಗೆ ಆದ್ಯತೆ ಘೋಷಣೆ

Upayuktha
0

  


ಮಂಗಳೂರು: ನಗರದ ಮೇರಿಹಿಲ್ನಲ್ಲಿರುವ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸಲಾದಪಾಲೇಮಾರ್ ಕನ್ವೆನ್ಷನ್ ಸೆಂಟರ್ಇಂದು (ಮೇ 23) ಭವ್ಯವಾಗಿ ಉದ್ಘಾಟನೆಗೊಂಡಿದ್ದು, ಸಮಾಜಮುಖಿ ಉದ್ದೇಶಗಳನ್ನು ಒಳಗೊಂಡ ಮಹತ್ವದ ಯೋಜನೆಯಾಗಿ ಗಮನ ಸೆಳೆದಿದೆ.

 

ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಉದ್ಘಾಟನೆ ನೆರವೇರಿಸಿದರು. ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ, ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರು ಡಾ. ವೈ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಎಂಎಲ್ಸಿ ಐವನ್ ಡಿಸೋಜ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಎಲ್ಲ ಗಣ್ಯರನ್ನು ಸನ್ಮಾನಿಸಲಾಯಿತು.

 


ಮಂಗಳೂರು ನಗರದಲ್ಲಿನ ನಾಲ್ಕು ಪ್ರಮುಖ ಕೇಂದ್ರಗಳಾದ ಮೇರಿಹಿಲ್ ಪಾಲೇಮಾರ್ ಕನ್ವೆನ್ಷನ್ ಸೆಂಟರ್, ನೇತ್ರಾವತಿ ನದಿ ತೀರ ಪ್ರದೇಶದಲ್ಲಿರುವನೇತ್ರಾವತಿ ಸಭಾಭವನ’, ನಗರ ಹೊರವಲಯದಲ್ಲಿರುವಪಾಲೇಮಾರ್ ಗಾರ್ಡನ್ಹಾಗೂಪಾಲೇಮಾರ್ ಫಾರ್ಮ್ಸ್ಗಳ ಒಳಾಂಗಣ ಮತ್ತು ಹೊರಾಂಗಣ ಸೌಲಭ್ಯಗಳನ್ನು ಪರಿಚಯಿಸುವ ಆಕರ್ಷಕ ವಿಡಿಯೋ ಪ್ರದರ್ಶನ ಮಾಡಲಾಯಿತು. ವೇಳೆ ಗಣ್ಯರು ವರ್ಚುವಲ್ ಮೂಲಕಪಾಲೇಮಾರ್ ಗಾರ್ಡನ್’, ‘ನೇತ್ರಾವತಿ ಸಭಾಭವನಮತ್ತುಪಾಲೇಮಾರ್ ಫಾರ್ಮ್ಸ್ಗಳನ್ನು ಉದ್ಘಾಟಿಸಿದರು.

 


ಕೃಷ್ಣ ಜೆ. ಪಾಲೇಮಾರ್ ಅವರ ರಾಜಕೀಯ ಜೀವನಯಾನ, ಲ್ಯಾಂಡ್ ಲಿಂಕ್ಸ್ ಟೌನ್ಶಿಪ್ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅವರ ಸಾಧನೆ, ವಿಕಾಸ್ ಕಾಲೇಜ್ ಸ್ಥಾಪನೆ ಮೂಲಕ ಅನೇಕ ವಿದ್ಯಾರ್ಥಿಗಳ ಶಿಕ್ಷಣ ಕನಸುಗಳನ್ನು ಸಾಕಾರಗೊಳಿಸಿದ ವಿಚಾರಗಳನ್ನು ಒಳಗೊಂಡ ವಿಶೇಷ ವಿಡಿಯೋವನ್ನು ಪ್ರದರ್ಶಿಸಲಾಯಿತು. ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಜಸ್ಟಿಸ್ ಅಬ್ದುಲ್ ನಜೀರ್ ಅವರು ಕೃಷ್ಣ ಜೆ. ಪಾಲೇಮಾರ್ ಅವರನ್ನು ಸನ್ಮಾನಿಸಿದರು.

 

ಕಾರ್ಯಕ್ರಮದ ಭಾವುಕ ಕ್ಷಣವಾಗಿಸಾನಿಧ್ಯ ವಿಶೇಷ ಶಾಲೆ' ಮಕ್ಕಳು ವೇದಿಕೆಗೆ ಆಗಮಿಸಿ ತಮ್ಮ ಕೈಚಳಕದಲ್ಲಿ ತಯಾರಿಸಿದ ಸ್ಮರಣಿಕೆಗಳನ್ನು ಮುಖ್ಯ ಅತಿಥಿ ಜಸ್ಟಿಸ್ ಅಬ್ದುಲ್ ನಜೀರ್ ಅವರಿಗೆ ನೀಡಿ ಗೌರವಿಸಿದರು.

 


ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಪಿಯುಸಿ ಮತ್ತು ಎಸ್ಎಸ್ಎಲ್ಸಿ ರಾಂಕ್ ವಿಜೇತರಾದ ತಬಸ್ಸುಂ, ದಿಶಾ ಪೂಜಾರಿ, ಮಹಾಲಕ್ಷ್ಮಿ ಪೈ ಮತ್ತು ಮಹಾಲಕ್ಷ್ಮಿ ಭಾರ್ಗವ ಅವರನ್ನು ಸನ್ಮಾನಿಸಲಾಯಿತು. ಎರಡು ಕೈಗಳಿಲ್ಲದಿದ್ದರೂ ಅತ್ಯುತ್ತಮ ಅಂಕಗಳನ್ನು ಗಳಿಸಿದ ಕಲಾವಿದ ಕೌಶಿಕ್ ಆಚಾರ್ಯ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.

 

ಅನಾಥ ಮಕ್ಕಳನ್ನು ಆರೈಕೆ ಮಾಡುತ್ತಿರುವಬಾಲ ಸಂರಕ್ಷಣ ಕೇಂದ್ರವನ್ನು ಗೌರವಿಸಲಾಯಿತು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕೃಷ್ಣ ಜೆ. ಪಾಲೇಮಾರ್ ಅವರ ಆತ್ಮೀಯ ಸ್ನೇಹಿತ ಜೆ. ಕೊರಗಪ್ಪ ಅವರಿಗೆ ಜಸ್ಟಿಸ್ ಅಬ್ದುಲ್ ನಜೀರ್ ಅವರಿಂದಸೇವಾ ತ್ರಿವಿಕ್ರಮಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

 



ಕನ್ವೆನ್ಷನ್ ಸೆಂಟರ್ ನಿರ್ಮಾಣ ಕಾರ್ಯವನ್ನು ಎಂಜಿನಿಯರ್ ಪ್ರವೀಣ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

 

ಇದಲ್ಲದೆ, ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯುವ ಸಮಾರಂಭಗಳಿಂದ ಲಭಿಸುವ ಆದಾಯದ 80 ಶೇಕಡಾವನ್ನುವಿಕಾಸ್ ಚಾರಿಟೇಬಲ್ ಟ್ರಸ್ಟ್ಮೂಲಕ ಸಮಾಜಸೇವಾ ಕಾರ್ಯಗಳಿಗೆ ವಿನಿಯೋಗಿಸಲಾಗುವುದು ಹಾಗೂ ಉಳಿದ 20 ಶೇಕಡಾವನ್ನು ನಿರ್ವಹಣಾ ವೆಚ್ಚಗಳಿಗೆ ಬಳಸಲಾಗುವುದು ಎಂದು ಘೋಷಿಸಲಾಯಿತು.

 

ಕಾರ್ಯಕ್ರಮದ ಸಮಾಪ್ತಿಯ ನಂತರ ಉಪಸ್ಥಿತರಿದ್ದ ಗಣ್ಯರು ಹಾಗೂ ಸಾರ್ವಜನಿಕರಿಗೆ ವಿಶೇಷ ಮಧ್ಯಾಹ್ನ ಭೋಜನವನ್ನು ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಪಟ್ಲ ಸತೀಶ್ ಶೆಟ್ಟಿ ಅವರ ತಂಡದಿಂದಶ್ರೀಕೃಷ್ಣ ಲೀಲಾಮೃತಯಕ್ಷಗಾನ ಪ್ರದರ್ಶನ ವೀಕ್ಷಕರ ಮನಸೆಳೆಯಿತು. ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸಿದ ಪ್ರದರ್ಶನದೊಂದಿಗೆ ದಿನಪೂರ್ತಿ ನಡೆದ ಕಾರ್ಯಕ್ರಮಕ್ಕೆ ಶಿಸ್ತಿನ ಹಾಗೂ ಸ್ಮರಣೀಯ ಅಂತ್ಯ ಲಭಿಸಿತು.

 

ಭವ್ಯತೆ ಮತ್ತು ಸಮಾಜಮುಖಿ ಆಶಯಗಳನ್ನು ಒಗ್ಗೂಡಿಸಿದ ಉದ್ಘಾಟನಾ ಸಮಾರಂಭ ಮಂಗಳೂರಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ವಲಯಕ್ಕೆ ಹೊಸ ದಿಕ್ಕನ್ನು ನೀಡಿದಂತಾಗಿದೆ.

 

-ಅನನ್ಯ ಭಟ್ ಕೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top