ಸಿ.ಎಸ್.ಆರ್ ಯೋಜನೆ ಕಂಪೆನಿಗಳು ಸಾಮಾಜಿಕ ಜವಾಬ್ದಾರಿ ತೋರಲು ಇರುವ ಅವಕಾಶ: ಎಸ್. ಗಿರೀಶ್

Upayuktha
0

  


ಸುರತ್ಕಲ್: ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಎನ್ನುವುದು ಸಂಸ್ಥೆಗಳು ಸಮಾಜದ ಋಣವನ್ನು ತೀರಿಸಲು ಇರುವ ಒಂದು ಅವಕಾಶ. ಅದನ್ನು ನಿರ್ವಂಚನೆಯಿಂದ, ಪ್ರಾಮಾಣಿಕವಾಗಿ ನೆರವೇರಿಸಿದಾಗ ಅದು ದೂರಗಾಮಿ ಪರಿಣಾಮವನ್ನು ಬೀರುತ್ತದೆ. ಅದಕ್ಕೆ ಯೋಜನೆಗಳನ್ನು ರೂಪಿಸುವ, ಮಂಜೂರು ಮಾಡುವ, ಅನುಷ್ಠಾನಿಸುವ ಮತ್ತು ಅದರ ಫಲವನ್ನು ಅನುಭವಿಸುವವರ ಸಂಘಟಿತ ಪರಿಶ್ರಮದ ಅಗತ್ಯ ಇದೆ ಎಂದು ಪಾರಾದೀಪ್ ಫಾಸ್ಫೇಟ್ಸ್ ಸಂಸ್ಥೆಯ ಮುಖ್ಯ ಉತ್ಪಾದನಾ ಅಧಿಕಾರಿ ಎಸ್. ಗಿರೀಶ್ ನುಡಿದರು.

 

ಅವರು ಸುರತ್ಕಲ್ ನಾಗರಿಕ ಸಲಹಾ ಸಮಿತಿ ಏರ್ಪಡಿಸಿದ "ಸಿ.ಎಸ್.ಆರ್- ಒಂದು ಅವಲೋಕನ" ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿ ಯೋಜನೆಯ ರೂಪುರೇಷೆಗಳನ್ನು ನೀಡಿದರು. ಸಂಸ್ಥೆಯ ಭುವನೇಶ್ವರದ ಮುಖ್ಯ ಕಚೇರಿಗೆ ಪದೋನ್ನತಿ ಹೊಂದಿ ತೆರಳುತ್ತಿರುವ ಅವರನ್ನು ಹಾಗೂ ಅವರ ಸಹಧರ್ಮಿಣಿ ವಾಣಿಶ್ರೀ ಅವರನ್ನು ಸಂದರ್ಭದಲ್ಲಿ ಗೌರವಿಸಲಾಯಿತು.

 

ನಾಗರಿಕ ಸಲಹಾ ಸಮಿತಿಯ ಮಿಯಾವಾಕಿ ಮತ್ತಿತರ ಪರಿಸರ ಸಂಬಂಧಿತ ಯೋಜನೆಗಳಿಗೆ ಎಂ.ಸಿ.ಎಫ್. (ಈಗಿನ ಪಾರಾದೀಪ್ ಫಾಸ್ಫೇಟ್ಸ್) ಕೊಡುಗೆಯನ್ನು ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಯಿತು.

 

ಮುಖ್ಯ ಅತಿಥಿಗಳಾಗಿದ್ದ ಕುಳಾಯಿ ಇಸ್ಕಾನ್ ದೇವಸ್ಥಾನದ ಅಧ್ಯಕ್ಷರಾದ ಸ್ವಾಮಿ ನಾಮನಿಷ್ಠ ದಾಸ್ ಗಿರೀಶ್ ಅವರ ಸಂಸ್ಥೆಯಿಂದ ಕೊಡ ಮಾಡಿದ ಕೊಡುಗೆಗಳನ್ನು ನೆನೆಪಿಸಿಕೊಂಡರು. ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ. ಕೆ ರಾಜ್ ಮೋಹನ್ ರಾವ್ ಅಧ್ಯಕ್ಷತೆ ವಹಿಸಿದ್ದರು.

 

ನಾಗರಿಕ ಸಲಹಾ ಸಮಿತಿಯ ಟ್ರಸ್ಟಿಗಳಾದ ಶ್ರೀನಿವಾಸ್ ರಾವ್, ಆನಂದ ಭಂಡಾರಿ, ರಮೇಶ್ ಅಳಪೆ, ಅನಿಲ್ ರಾವ್, ರೋಟರಿ ಕ್ಲಬ್ ಸುರತ್ಕಲ್ ಅಧ್ಯಕ್ಷರಾದ ರಾಮಚಂದ್ರ ಕುಂದರ್, ಸತೀಶ್ ರಾವ್ ಇಡ್ಯಾ, ಮಾಧ್ಯಮದ ಪ್ರಕಾಶ್ ಪುತ್ತೂರು, ಜಯಶಂಕರ್, ಪಾರದೀಪ್ ಪಾಸ್ಪೇಟ್ಸ್ ಸಿ ಎಸ್ ಆರ್ ವಿಭಾಗದ ವಿವೇಕ್, ಎಂಸಿಎಫ್ ನಿವೃತ್ತ ಉದ್ಯೋಗಿಗಳು, ರೋಟರಿ ಕ್ಲಬ್ ಸುರತ್ಕಲ್, ಇನ್ನರ್ ವೀಲ್ ಕ್ಲಬ್ ಸುರತ್ಕಲ್, ಹೊಸಬೆಟ್ಟು ನಾಗರಿಕ ಹಿತ ರಕ್ಷಣಾ ಸಮಿತಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಳಾಯಿ, ಸುಭಾಷಿತ ನಗರ ವೆಲ್ಫೇರ್ ಅಸೋಸಿಯೇಷನ್ ಮುಂತಾದ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

 

ಕುಮಾರಿ ಪಲ್ಲವಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ನಾಗರಿಕ ಸಲಹಾ ಸಮಿತಿ ಕಾರ್ಯದರ್ಶಿ ಸತೀಶ್ ಸದಾನಂದ್ ಸ್ವಾಗತಿಸಿ, ಕುಮಾರಸ್ವಾಮಿ ವಂದಿಸಿದರು. ಶ್ರೀಮತಿ ಸಾವಿತ್ರಿ ರಮೇಶ ಭಟ್ ಕಾರ್ಯಕ್ರಮ ನಿರ್ವಹಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top