ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ (ನೋಂ) ಕರ್ನಾಟಕ, ಬೆಳ್ತಂಗಡಿ ತಾಲೂಕು ಸಮಿತಿ (ದ.ಕ.) ಇವರ ನೇತೃತ್ವದಲ್ಲಿ ಯುಗಾದಿ ಪ್ರಯುಕ್ತ ಏಪ್ರಿಲ್ 5 ರಂದು ಬಾಂಜಾರು ಮಲೆ ಪ್ರದೇಶದಲ್ಲಿ ‘ವಂದೇ ಪ್ರಕೃತಿ ಮಾತರಂ’ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಸಮಿತಿಯ ಅಧ್ಯಕ್ಷರಾದ ಗಣಪತಿ ಭಟ್ ಕುಳಮರ್ವ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತಲಿನ ಪರಿಸರ ವೀಕ್ಷಣೆ ನಡೆಸಿ, ಗಣಪತಿ ದೇವಳದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ. ಶ್ರೀಧರ್ ಭಟ್ ಅವರು ಪ್ರಕೃತಿಯೊಂದಿಗೆ ಮಾನವನ ಸಂಬಂಧ, ಹಸಿರು ಸಂರಕ್ಷಣೆಯ ಅಗತ್ಯತೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮವು ಗಣಪತಿ ಭಟ್ ಕುಳಮರ್ವ, ಸುಭಾಷಿಣಿ, ಶ್ರೀಧರ್ ಭಟ್, ರಮೇಶ್ ಮಯ್ಯ, ರಾಮಕೃಷ್ಣ ಭಟ್ ಬದನಾಜೆ, ಅಶ್ವಿಜ ಶ್ರೀಧರ್, ತ್ರಿವಿಕ್ರಮ ಹೆಬ್ಬಾರ್, ಪ್ರಕಾಶ್ ನಾರಾಯಣ್ ಹಾಗೂ ಅಖಿಲಾ ಪ್ರಕಾಶ್ ಅವರ ಗುಂಪು ಭಜನಾ ಕಾರ್ಯಕ್ರಮದೊಂದಿಗೆ ಆರಂಭವಾಯಿತು.
ಶ್ರೀ ನವೀನ್ ನೆರಿಯ ಅವರು ಅಭ್ಯಾಗತರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಸುಭಾಷಿಣಿ ಧನ್ಯವಾದಗಳನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಪ್ರಕೃತಿ ಪ್ರೇಮಿಗಳು ಭಾಗವಹಿಸಿದ್ದು, ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

