ಯುವ ಪೀಳಿಗೆ ಪೋಷಕರ ಮನಗೆಲ್ಲಬೇಕು: ಶಾಸಕ ಡಾ. ಎನ್.ಟಿ ಶ್ರೀನಿವಾಸ್

Upayuktha
0


ಕೂಡ್ಲಿಗಿ (ವಿಜಯನಗರ ಜಿಲ್ಲೆ): ಯುವಪೀಳಿಗೆ ವ್ಯಸನಗಳಿಂದ ದೂರವಿದ್ದು, ಸನ್ನಡತೆ ಸ್ವಾವಲಂಭಿತೆಯಿಂದ ತಮ್ಮ ಪೋಷಕರ ಮನಗೆಲ್ಲಬೇಕಿದೆ ಎಂದು ಶಾಸಕರಾದ ಡಾ॥ ಎನ್ ಟಿ ಶ್ತೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಪಟ್ಟಣದ ಎಸ್ಎವಿಟಿ ಕಾಲೇಜ್ ನಲ್ಲಿ ಜರುಗಿದ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕಲಾ ಪ್ರತಿಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳಾ ದಿನಾಚರಣೆಗಳಲ್ಲಿ, ಮಹಿಳಾ ಸಾಧಕಿಯರನ್ನು ಗುರುತಿಸುವ ಕೆಲಸವಾಗಬೇಕು ಎಂದರು.


ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ, ಸ್ಥಳೀಯ ಮಟ್ಟದಲ್ಲಿ ಸಾಧನೆ ಮಾಡಿ ಎಲೆ ಮರೆಯ ಕಾಯಿಯಂತೆ ಉಳಿದ ಸೂಲಗಿತ್ತಿಯರ ಪಾರಂಪರಿಕ ಜ್ಞಾನ, ವೈದ್ಯ ಪದ್ಧತಿ, ಶ್ರಮ- ದುಡಿಮೆಯನ್ನು ಯುವ ತಲೆಮಾರಿಗೆ ತಿಳಿಸಿಕೊಡಬೇಕು ಎಂದರು.


ಶಾಸಕರು ಹುಟ್ಟಿ ಬಾಳಿದ ಏಳೂರುಗುಡ್ಡ ನರಸಿಂಹಗಿರಿ ಭಾಗದಲ್ಲಿನ, ಸೂಲಗಿತ್ತಿಯರ ರೋಚಕ ಸಂಗತಿಗಳನ್ನು ಹಂಚಿಕೊಂಡರು. ನಾನು ಸಹಿತ ಸೂಲಗಿತ್ತಿಯರ ಕೈಯಲ್ಲಿ ಜನ್ಮ ತಾಳಿದವನು ಎಂದು, ತಮ್ಮ ಬಾಲ್ಯದ ಸವಿನೆನಪನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಈಚಲು ಬೊಮ್ಮನಹಳ್ಳಿ ಗ್ರಾಮದ ಹಿರಿಯರಾದ, ಸೂಲಗಿತ್ತಿ ಬಸಮ್ಮ ಅವರು 3000 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೆರಿಗೆ ಮಾಡಿಸಿರುವುದರಿಂದಾಗಿ ಅವರನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕರು ಅವರನ್ನು ಅಭಿನಂದಿಸಿ ಗೌರವಿಸಿ ಸನ್ಮಾನಿಸಿದರು.


ಮಹಿಳೆಯರು ಸಾಧನೆ ಹಾದಿಯಲ್ಲಿ ಮುನ್ನಡೆಯಲು, ಸಂವಿಧಾನದ ಅಡಿಯಲ್ಲಿ ಎಲ್ಲರೂ ಮೌಲ್ಯಯುತ ಶಿಕ್ಷಣ ಪಡೆದು ದೇಶದ ಭವಿಷ್ಯತ್ತಿನ ಪ್ರಜೆಗಳಾಗಬೇಕಿದೆ. ವಿದ್ಯಾರ್ಥಿಗಳು ತಮ್ಮ ಪೋಷಕರ ಮೊದಲು ಮನೆಯ ಸರ್ವಸದಸ್ಯರ ಮನ ಗೆಲ್ಲಬೇಕು, ಹಾಗೂ ನಮ್ಮ ತಾಲ್ಲೂಕು, ಜಿಲ್ಲೆ ಮತ್ತು ದೇಶಕ್ಕೆ ಒಳ್ಳೆಯ ಹೆಸರು ತರಬೇಕು ಎಂದರು. ಆ ನಿಟ್ಟಿನಲ್ಲಿ ನನಗೆ ಜೀವನದ ಒಳ್ಳೆಯ ಸಂಗಾತಿ ಸಿಕ್ಕಿರುವುದರಿಂದ, ನಾನು ಈ ಸ್ಥಾನ ಮಾನ ಕ್ಕೆ ಬರಲು ಸಾಧ್ಯವಾಯಿತು ಎಂದು ಹೆಮ್ಮಯಿಂದ ತಮ್ಮ ಮಡದಿ ಪುಷ್ಪರವರನ್ನು ಪ್ರಶಂಸಿದರು.


ಮುಂದಿನ ದಿನಗಳಲ್ಲಿ ನಮ್ಮ ಕ್ಷೇತ್ರದಲ್ಲಿ, ಮಹಿಳಾ ಕಾಲೇಜು ಸ್ಥಾಪಿಸಲಾಗುವುದೆಂದು ಭರವಸೆಯನ್ನಿತ್ತರು. ವಿವಿದ ಗಣ್ಯರು ಮಾತನಾಡಿದರು.

ವೇದಿಕೆಯಲ್ಲಿ ತಹಶೀಲ್ದಾರರಾದ ಕು. ನೇತ್ರಾವತಿ, ಕೂಡ್ಲಿಗಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರಾದ ಶ್ರೀ ಕಾವಲಿ ಶಿವಪ್ಪನಾಯಕ, ಭೂದಾನಿಗಳು ಅಂಗಡಿ ವೀರೇಶ್, ಪ್ರಾಂಶುಪಾಲರಾದ ಡಾ. ಷಣ್ಮುಖ ಗೌಡ, ಸೂಲಗಿತ್ತಿ ಈಚಲು ಬೊಮ್ಮನಹಳ್ಳಿ ಬಸಮ್ಮ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top