ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ವಿದ್ಯಾರ್ಥಿ ಪ್ರಜ್ವಲ್ ಎಂ ರಾಷ್ಟ್ರಮಟ್ಟಕ್ಕೆ ಆಯ್ಕೆ

Upayuktha
0


ಪುತ್ತೂರು: ಕರ್ನಾಟಕ ಆರ್ಮ್ ರೆಸ್ಟ್ಲಿಂಗ್ ಅಸೋಸಿಯೇಷನ್ ವತಿಯಿಂದ ಪಿ. ಎ. ಎಫ್. ಐ., ಏಷ್ಯಾನ್ ಆರ್ಮ್ ರೆಸ್ಟ್ಲಿಂಗ್ ಫೆಡರೇಶನ್ ಮತ್ತು ವರ್ಲ್ಡ್ ಆರ್ಮ್ ರೆಸ್ಟ್ಲಿಂಗ್ ಫೆಡರೇಶನ್ ಇವುಗಳ ಜಂಟಿ ಆಶ್ರಯದಲ್ಲಿ ಏಪ್ರಿಲ್ 11 ಮತ್ತು 12ರಂದು ಕುದ್ಮಲ್ ರಂಗರಾವ್ ಹಾಲ್, ಮಂಗಳೂರು ಇಲ್ಲಿ ನಡೆದ 3ನೇ ಕರ್ನಾಟಕ ರಾಜ್ಯ ಆರ್ಮ್ ರೆಸ್ಟ್ಲಿಂಗ್ ಚಾಂಪಿಯನ್ಶಿಪ್ 2025-26 ರಲ್ಲಿ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿ ಭಾಗವಹಿಸಿ ಪದಕಗಳಿಸಿದ್ದಾರೆ. ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ಪ್ರಜ್ವಲ್ ಎಂ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಲೆಫ್ಟ್ ಆರ್ಮ್ ರೆಸ್ಟ್ಲಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಆರ್ಮ್ ರೆಸ್ಟ್ಲಿಂಗ್ನಲ್ಲಿ ತೃತೀಯ ಸ್ಥಾನವನ್ನು ಗಳಿಸುವ ಮೂಲಕ ಬಹುಮಾನಕ್ಕೆ ಭಾಜನರಾಗಿದ್ದಾರೆ. ಇವರು ದಿನಾಂಕ ಮೆ. 29ರಿಂದ 2 ಜೂನ್ 2026 ರವರೆಗೆ ರಾಷ್ಟೀಯ ರಕ್ಷಾ ಯೂನಿವರ್ಸಿಟಿ ಲವದ್ ಕ್ಯಾಂಪಸ್ , ದಹೇಗಂ ಗಾಂಧಿನಗರ, ಗುಜರಾತ್,ಇಲ್ಲಿ ನಡೆಯಲಿರುವ 4ನೇ ಪಿ. ಎ. ಎಫ್. ಐ ನ್ಯಾಷನಲ್ ಆರ್ಮ್ ರೆಸ್ಟ್ಲಿಂಗ್ ಚಾಂಪಿನ್ಶಿಪ್ 2026ಕ್ಕೆ ಆಯ್ಕೆಯಾಗಿದ್ದಾರೆ. 


ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಆಡಳಿತ ಮಂಡಳಿಯವರು ವಿದ್ಯಾರ್ಥಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top