ಶಕ್ತಿ ಪಿಯು ಕಾಲೇಜು ಪಿಯುಸಿ ಫಲಿತಾಂಶ: ಮೌಲ್ಯ ಕರುಣಾಕರ ಶೆಟ್ಟಿ (ವಿಜ್ಞಾನ), ಶ್ರೀವಿಷ್ಣು (ವಾಣಿಜ್ಯ) ಕಾಲೇಜಿಗೆ ಪ್ರಥಮ

Upayuktha
0


ಮಂಗಳೂರು: ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ದ್ವಿತೀಯ ಪ.ಪೂ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದ ಪಿಸಿಎಂಬಿ ಮತ್ತು ಪಿಸಿಎಂಸಿ ವಿಭಾಗದಲ್ಲಿ ಒಟ್ಟು 65 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇವರಲ್ಲಿ 37 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.


ವಾಣಿಜ್ಯ ವಿಭಾಗದ ಇಬಿಎಸಿ ಮತ್ತು ಇಬಿಎಎಸ್‌ನಲ್ಲಿ ಒಟ್ಟು 31 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇವರಲ್ಲಿ 14 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ಪ್ರಥಮ ಶ್ರೇಣಿಯಲ್ಲಿ 13 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.


ವಿಜ್ಞಾನ ವಿಭಾಗದ ಪಿಸಿಎಂಬಿ ಯಲ್ಲಿ ಮೌಲ್ಯ ಕರುಣಾಕರ್ ಶೆಟ್ಟಿ 588, ಪಿ.ಸಿ.ಎಂ.ಸಿ ಲಿಖಿತ್ ಗೌಡ ಎಸ್ ಡಿ 587, ಪಿ.ಸಿ.ಎಂ.ಬಿ ಚಿಂತನ ಪಿ.ಆರ್ 585, ಪಿ.ಸಿ.ಎಂ.ಬಿ ಚೈತನ್ಯ ಪ್ರಕಾಶ್ ಸಿ ಎಂ 577, ಪಿ.ಸಿ.ಎಂ.ಸಿ ಭೂಮಿಕ ರಾವ್ 576, ಪಿ.ಸಿ.ಎಂ.ಸಿ ಪ್ರಣವ್ ರಾಜ್ ಆರ್ಯನ್ 575 ಅಂಕಗಳಿಸಿರುತ್ತಾರೆ.


ವಾಣಿಜ್ಯ ವಿಭಾಗದಲ್ಲಿ ಇ.ಬಿ.ಎ.ಸಿಯಲ್ಲಿ ಶ್ರೀವಿಷ್ಣು ಎ ಎಸ್ 589, ಇ.ಬಿ.ಎ.ಎಸ್ ಯಶವಂತ್ ಎ ಎಸ್ 586, ಇ.ಬಿ.ಎ.ಸಿ ಧೃತಿ ಕೋಟ್ಯಾನ್ 581, ಇ.ಬಿ.ಎ.ಸಿ ಮುಕೇಶ್ 581, ಇ.ಬಿ.ಎ.ಸಿ ದೀಪ್ತ ಎಂ.ಎಂ 579, ಇ.ಬಿ.ಎ.ಸಿ ಸುಷ್ಮ ಕೆ 578, ಇ.ಬಿ.ಎ.ಎಸ್ ಕೃತಿಕ ಕುಲಕರ್ಣಿ 575 ಅಂಕ ಗಳಿಸಿರುತ್ತಾರೆ.


ಶಕ್ತಿ ಪಪೂ ಕಾಲೇಜು ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರಿರುವುದನ್ನು ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾಯಕ್ ಅಭಿನಂದಿಸಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾಯಕ್, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪಪೂ ಕಾಲೇಜು ಪ್ರಭಾರ ಪ್ರಾಂಶುಪಾಲರಾದ ಶ್ರೀ ಮಂಜುನಾಥ ಚಾವಡಿ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top