ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜಿಗೆ ಮತ್ತೊಮ್ಮೆ ಶ್ರೇಷ್ಠತೆ ಸಾಬೀತು

Upayuktha
0


ಉಜಿರೆ: ವಿಶ್ವವಿದ್ಯಾಲಯ ಮಟ್ಟದಲ್ಲಿ ಮೆರಗು ಮೂಡಿಸಿದ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜು. ಶೈಕ್ಷಣಿಕ ಸಾಧನೆ, ಶಿಸ್ತು ಮತ್ತು ಪರಿಶ್ರಮದ ಸಮನ್ವಯಕ್ಕೆ ಪ್ರತೀಕವಾಗಿರುವ ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜು, ಈ ಸಾಲಿನ ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿಯೂ ಅತ್ಯುತ್ತಮ ಸಾಧನೆ ದಾಖಲಿಸಿ ಮತ್ತೊಮ್ಮೆ ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸಿದೆ. ಸ್ನಾತಕೋತ್ತರ ಹಾಗೂ ಪದವಿ ವಿಭಾಗಗಳ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಉನ್ನತ ರ‍್ಯಾಂಕ್‌ಗಳನ್ನು ಪಡೆದು ಕಾಲೇಜಿನ ಗೌರವವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ್ದಾರೆ.


ಎಂ.ಡಿ ಯೋಗ ವಿಭಾಗದಲ್ಲಿ, ಡಾ. ಆವಣಿ ವೇಣುಗೋಪಾಲ್ ಮತ್ತು ಡಾ. ಹರಿಣಿ ಆರ್ ತಲಾ 1ನೇ ರ‍್ಯಾಂಕ್ ಗಳಿಸಿದ್ದಾರೆ. ಡಾ. ಮಹೇಂದ್ರ ಕೆ.ಎಂ 2ನೇ ರ‍್ಯಾಂಕ್, ಡಾ. ಹೇಮ ಚೈತನ್ಯ ಲತಾ ರೆಡ್ಡಿ ಮತ್ತು ಡಾ. ಲೈಮುಜಾಮ್ ಪ್ರೀತಿ ದೇವಿ ತಲಾ 3ನೇ ರ‍್ಯಾಂಕ್, ಡಾ. ದಿಶಾ 4ನೇ ರ‍್ಯಾಂಕ್, ಡಾ. ಶಿಲ್ಪಾ ಎನ್ ಎಮ್  6ನೇ, ಡಾ. ಮೆರುನ ಇ 7ನೇ ರ‍್ಯಾಂಕ್, ಡಾ. ಲೈಶ್ರಮ್ ನುಂಗ್ಶಿತೊಯಿ ಚಾನು 8ನೇ ರ‍್ಯಾಂಕ್, ಮತ್ತು ಡಾ.ವಡ್ಡೆ ವೆಂಕಟ ಕಾರ್ತಿಕ್ 9ನೇ ರ‍್ಯಾಂಕ್‌ ಪಡೆದಿದ್ದಾರೆ.



ಎಂ.ಡಿ ನ್ಯಾಚುರೋಪಥಿ ವಿಭಾಗದಲ್ಲಿ, ಡಾ. ಆದಿತಿ ಗಿರಿಧರನ್ 1ನೇ ರ‍್ಯಾಂಕ್ , ಡಾ. ಮಿಥುನ್ ಎ.ಸಿ 3ನೇ ರ‍್ಯಾಂಕ್, ಡಾ. ಅವಿಶೀ ಸಿನ್ಹಾ ಮತ್ತು ಡಾ. ಪಾಟೀಲ ಸಂದೇಶ್ ನಿತಿನ್ ತಲಾ 4ನೇ ರ‍್ಯಾಂಕ್, ಡಾ. ಕೊ ಟ್ರೇಶ್ ಹಿರೇಮಠ್ 5ನೇ ರ‍್ಯಾಂಕ್, ಡಾ. ನಾಗಚೈತನ್ಯ ಎಸ್ 6ನೇ ರ‍್ಯಾಂಕ್, ಡಾ. ಕನೀಸ್ ಆಯಿಷಾ 7ನೇ ರ‍್ಯಾಂಕ್, ಡಾ. ನವೀನ್ ಕುಮಾರ್ ಡಿ 8ನೇ ರ‍್ಯಾಂಕ್, ಮತ್ತು ಡಾ. ಪುಟ್ಟ ಇಂದಿರಾ ಲಕ್ಷ್ಮೀ 10ನೇ  ರ‍್ಯಾಂಕ್‌ ಪಡೆದಿದ್ದಾರೆ. 


ಎಂ.ಡಿ ಡಯಟ್ ಮತ್ತು ನ್ಯೂಟ್ರಿಷನ್ ವಿಭಾಗದಲ್ಲಿ, ಡಾ. ಅಭಯ್ ಸಾಯಿ 1ನೇ ರ‍್ಯಾಂಕ್ ಡಾ. ಮೇದಿನಿ ಎಸ್ ಶಿರ್ಸಾಟ್ 2ನೇ ರ‍್ಯಾಂಕ್, ಡಾ. ರೋಷ್ನಿ ಮೊಯಿರಾಂಗ್ತೇಮ್ 3ನೇ ರ‍್ಯಾಂಕ್, ಡಾ. ರೂಪಾ ಎಂ.ಜಿ 4ನೇ ರ‍್ಯಾಂಕ್ ಮತ್ತು ಡಾ. ದೀಪಾ ಸನಾಸಮ್ 5ನೇ ರ‍್ಯಾಂಕ್ ಗಳಿಸಿದ್ದಾರೆ.




ಎಂ.ಡಿ ನ್ಯಾಚುರೋಪಥಿ ವಿಭಾಗದಲ್ಲಿ, ಡಾ. ಆದಿತಿ ಗಿರಿಧರನ್ ಹಾಗೂ ಎಂ.ಡಿ ಯೋಗ ವಿಭಾಗದಲ್ಲಿ, ಡಾ. ಆವಣಿ ವೇಣುಗೋಪಾಲ್ ಮತ್ತು ಡಾ. ಹರಿಣಿ ಇವರುಗಳು ಪ್ರತಿಷ್ಠಿತ ಸೀತಾರಾಮ್ ಜಿಂದಾಲ್ ಗೋಲ್ಡ್ ಮೆಡಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ


ವಿದ್ಯಾರ್ಥಿಗಳ ಈ ಅದ್ವಿತೀಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಧ್ಯಾಪಕ ವೃಂದ ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಈ ಮೆರುಗುಮಯ ಸಾಧನೆ, ಸಂಸ್ಥೆಯ ಶೈಕ್ಷಣಿಕ ಶ್ರೇಷ್ಠತೆ, ಗುಣಮಟ್ಟದ ಬೋಧನೆ ಮತ್ತು ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆಯ ಪ್ರತಿಬಿಂಬವಾಗಿದ್ದು, ಕಾಲೇಜಿನ ಗೌರವವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top