'ಅವಕಾಶಗಳು ಸಿಗದೇ ಇರುವುದು ಸೋಲಲ್ಲ , ಬದಲಾಗಿ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳದೇ ಇರುವುದೇ ನಿಜವಾದ ಸೋಲು ' ಈ ಮಾತುಗಳು ಎಷ್ಟು ಸತ್ಯ ಎಂದು ಅ ಅವಕಾಶಗಳನ್ನು ದೂರಕ್ಕೆ ತಲ್ಲಿದವನಿಗೆ ಮಾತ್ರ ಗೊತ್ತಿರೋಕೆ ಸಾಧ್ಯ. ಅವಕಾಶ ಮತ್ತು ಸಮಯ ಎಂಬುದು ಒಂದೇ ನಾಣ್ಯದ ಎರಡು ಮುಖಗಳಿದಂತೆ. ಏಕೆಂದರೆ ಇವೆರಡು ಜೀವನಕ್ಕೆ ಆಗಮಿಸುವುದು ಒಂದೇ ಸಲ. ಮತ್ತೇ ಅದನ್ನು ಬಾ ಎಂದರು ಬರಮಾಡಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲಾ. ದೊರೆತಗಲೇ ಇವೆರಡನ್ನು ಬಾಚಿಕೊಳ್ಳಬೇಕು ಅಷ್ಟೇ.
ಜೀವನವೆಂಬುದು ಪುಸ್ತಕದ ಪುಟಗಳಿದಂತೆ. ಪುಸ್ತಕದ ಮೊದಲ ಪುಟವು ಆ ದೇವರಿಗೆ ಸಮ. ಅದರಂತೆ ಜೀವನದ ಮೊದಲ ಪುಟವು ತಂದೆ ತಾಯಿಗೆ ಸಮ. ಪ್ರತೀ ಹೊಸ ಪುಟವನ್ನು ತೆರೆದಾಗ ಹೊಸತನದ ಅಧ್ಯಾಯವು ಬದುಕಿಗೆ ನೂರೊಂದು ಪಾಠವನ್ನು ಕಲಿಸುತ್ತಾ ಭಾವನೆಗಳಿಗೆ ಮೆರಗು ಚೆಲ್ಲುತ್ತ ಸಾವಿರಾರು ಆಸೆಗಳತ್ತ ಮನವನ್ನು ಆಕರ್ಷಿಸುತ್ತದೆ. ಅ ಆಸೆಗಳಿಗೆ ನಿಜವಾದ ವೇದಿಕೆ ಸಿಕ್ಕಾಗಲೇ ನಮ್ಮ ಆಸೆಗಳಿಗೆ ಪರಿಪೂರ್ಣ ಅರ್ಥ ಕೊಡಲು ಸಾಧ್ಯ.
ಪರಿಪೂರ್ಣ ಎಂಬ ಪದ ಸೇರಬೇಕಾದರೆ ಅದರ ಹಿಂದೆ ಪರಿ ಎಂಬ ಪದ ಸೇರಿದರೆ ಮಾತ್ರ ಅದು ಪರಿಪೂರ್ಣವಾಗಬಲ್ಲದು. ಅದರಂತೆ ಅವಕಾಶ ಎಲ್ಲಿದೆಯೋ ಅಲ್ಲಿ 'ಸೋಲು ಗೆಲುವು 'ಎಂಬ ವಿರುದ್ಧ ಪದಗಳು ಸೇರಿದರೆ ಮಾತ್ರ ಅಲ್ಲಿ ಸಿಕ್ಕ ಅವಕಾಶಕ್ಕೆ ನಿಜವಾದ ಬೆಲೆ ಇರಲು ಸಾಧ್ಯ. ಸೋಲು ಎಂಬುದು ಜೀವನದ ಅಂತ್ಯ ಅಲ್ಲಾವೇ ಅಲ್ಲಾ. ಬದಲಾಗಿ ಅದೊಂದು ಗೆಲುವಿನ ಆರಂಭ ಅಷ್ಟೇ. ಆ ಚಿಕ್ಕ ಆರಂಭವೇ ಮುಂದೆ ಜೀವನದ ದೊಡ್ಡ ಗೆಲುವಾಗಿ ಪರಿವರ್ತನೆ ಆಗಬಹುದು. ಗೆಲುವು ಎದುರಾಗುವುದು ಅವಕಾಶಗಳನ್ನು ನಮ್ಮತ್ತ ಒಳಿಸಿಕೊಳ್ಳುವಾಗಲೇ. ಆದರೆ ಸೋಲು ಎದುರಾಗುವುದು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದೆ ಇರುವಾಗ. ಆದ್ದರಿಂದ ಸಿಕ್ಕ ಅವಕಾಶಗಳು ಸಣ್ಣದಾದರೂ ಅದಕ್ಕೇನೆ ಸುಂದರವಾದ ಬಣ್ಣ ಬಳಿದು ಇನ್ನಷ್ಟು ರಂಗಾಗಿಸಿ. ಆ ಬಣ್ಣವೇ ಆ ಅವಕಾಶಕ್ಕೆ ಇನ್ನಷ್ಟು ಹೊಳೆಯಲು ಕಾರಣ ವಾಗುತ್ತದೆ.
ದಿನ ಬೆಳಗಾದರೆ ನೂರಾರು ಅವಕಾಶಗಳು ನಮ್ಮ ಕಣ್ಮುಂದೆ ಬಂದು ಹಾಗೆಯೇ ಮರೆಯಾಗುತ್ತದೆ. ಮರೆಯಾಗಳು ಕಾರಣ ಯಾರೆಂದರೇ ಬೇರೆ ಯಾರು ಅಲ್ಲಾ, ನಾವುಗಳೇ. ನಮ್ಮಲ್ಲಿ ಯಾವುದಕ್ಕೂ ಆಸಕ್ತಿ ಇಲ್ಲಾ. ನಮಗೆ ನಾವಾಯಿತು ನಮ್ಮ ಪಡಾಯಿತು ಎಂದು ಉಳಿದುಬಿಡುವ ಸೋಮಾರಿತನ ಜೀವನ ನಮ್ಮದ್ದು. ಅ ಸೋಮಾರಿತನವೇ ನಮ್ಮೆಲ್ಲರ ಬದುಕಿನ ಮೊದಲ ವೈರಿ. ಅ ವೈರಿಯನ್ನು ಮೊದಲು ದೂರ ಮಾಡಿದರೆ ಮಾತ್ರ ಎಲ್ಲವೂ ಸುಗಮವಾಗಿ ಸಾಗಿ ಬಾಳಿಗೊಂದು ನಿಜವಾದ ಅರ್ಥ ಬರಲು ಸಾಧ್ಯ.
ನಾವು ಕಂಡ ಕನಸುಗಳು ಕೇವಲ ರಾತ್ರಿಗೆ ಮಾತ್ರ ಸೀಮಿತವಾಗಿರಬಾರದು. ಬದಲಾಗಿ ಆ ಕನಸುಗಳಿಗೆ ವಿಭಿನ್ನ ರೀತಿಯ ರೆಕ್ಕೆ ಕಟ್ಟಿ , ನೋವಿನಲ್ಲೂ ನಲಿವಾಗಿ ನಿಂತು ಆ ಕನುಸುಗಳನ್ನು ನನಸಾಗಿಸಬೇಕು. ಬಾಳಿಗೊಂದು ಮೂಡಿದ ಈ ಒಂದು ಕನಸನ್ನು ನಿಜವಾಗಿಸಲು ನೂರೊಂದು ಅವಕಾಶಗಳನ್ನು ನಾವೇ ಸೃಷ್ಟಿಸಿ ಮುನ್ನಡೆದರೆ ಆ ಕನಸಿಗೂ ಹೆಮ್ಮೆಯಿಂದ ಬಿಗುವ ಹೊಸ ಕಾಲವು ಬರಬಹುದು. ಆದ್ದರಿಂದ ಸಿಕ್ಕ ಅವಕಾಶಗಳನ್ನು ಒಂದೊಳ್ಳೆ ರೀತಿಯಿಂದ ಉಪಯೋಗಿಸಿಕೊಂಡು ಮುನ್ನಡೆದರೆ ಬದುಕಿಗೂ ಬಂಗಾರಗು ವ್ಯತ್ಯಾಸ ಇಲ್ಲದಂತೆ.
-ಶಿಲ್ಪಾ ದಿಡುಪೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



