ಈಡಿಗ ಗುರು ಪ್ರಣವಾನಂದ ಶ್ರೀಗಳಿಂದ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ

Upayuktha
0


ಕಲಬುರಗಿ: ಜಗಜ್ಯೋತಿ ಬಸವೇಶ್ವರ 893ನೇ ಜಯಂತಿ ಪ್ರಯುಕ್ತ ಕಲಬುರಗಿಯ ಜಗತ್ತು ವೃತದಲ್ಲಿರುವ ಬಸವೇಶ್ವರರ ಮೂರ್ತಿಗೆ ಈಡಿಗ ಗುರುಗಳು ಹಾಗೂ ಚಿತ್ತಾಪುರ ತಾಲೂಕು ಕರದಾಳ ಬ್ರಹ್ಮಶ್ರೀ ನಾರಾಯಣಪುರು ಶಕ್ತಿ ಪೀಠದ ಡಾ.ಪ್ರಣವಾನಂದ ಸ್ವಾಮೀಜಿ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.


ಏಪ್ರಿಲ್ 20 ರಂದು ಡಾಕ್ಟರ್ ಪ್ರಣವಾನಂದ ಶ್ರೀಗಳು ಚಿಂಚೋಳಿ ತಾಲೂಕು ಸುಲೇಪೇಟದ ವಿಶ್ವಕರ್ಮ ಏಕದಂಡಗಿ ಮಠದ ಪೂಜ್ಯಶ್ರೀ ದೊಡ್ಡಂದ್ರ ಸ್ವಾಮಿಗಳ ಜೊತೆ ಬಸವೇಶ್ವರ ಮೂರ್ತಿಗೆ ಮಾಲಾಪಣೆ ಮಾಡಿ ಸಮ ಸಮಾಜ ಕಟ್ಟಲು ಬಯಸಿದ ಬಸವೇಶ್ವರರ ಚಿಂತನೆಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಶಾಂತಿ ಸಮೃದ್ಧಿಯ ರಾಷ್ಟ್ರಕಟ್ಟಲು ಕಂಕಣಬದ್ಧರಾಗ ಬೇಕೆಂದು ಡಾ. ಪ್ರಣವಾನಂದ ಶ್ರೀಗಳು ಸಂದೇಶ ನೀಡಿದರು.


ಈ ಸಂದರ್ಭದಲ್ಲಿ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ. ಸತೀಶ್ ಹೊಸಮನಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ, ಮಹೇಶ್ ಕಡೆಚೂರ್, ನಾಗಯ್ಯ ಗುತ್ತೇದಾರ್ ಮತ್ತಿತರರು ಜೊತೆಗಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top