ಲೇಖಾ ಲೋಕ-68: ಸಂಗೀತ ನಿರ್ದೇಶಕ ಎಂ ರಂಗರಾವ್

Upayuktha
0

 



ಎಂ. ರಂಗರಾವ್ ಅವರು 26-04-1932 ರಂದು ಆಂಧ್ರಪ್ರದೇಶದಲ್ಲಿ ಜನಿಸಿದರು. ಅವರು ಕನ್ನಡ ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿ ಬಹು ಪ್ರಸಿದ್ಧ ಹಾಗೂ ಮಧುರ ಸಂಗೀತ ನಿರ್ದೇಶಕರಾಗಿ ಹೆಸರಾಗಿದ್ದರು. ಶಾಸ್ತ್ರೀಯ ಸಂಗೀತದ ಸೂಕ್ಷ್ಮತೆಯನ್ನು ಆಳವಾಗಿ ಅರ್ಥಮಾಡಿಕೊಂಡು, ಅದನ್ನು ಕನ್ನಡ ಚಲನಚಿತ್ರ ಸಂಗೀತದಲ್ಲಿ ಸುಂದರವಾಗಿ ರಾಗಸಂಯೋಜನೆ ಮಾಡಿದರು.


ಅವರ ಸಂಗೀತ ನೀಡಿದ ಅನೇಕ ಚಿತ್ರಗಳು ಜಯಭೇರಿ ಬಾರಿಸಿದವು. ಹಣ್ಣೆಲೆ ಚಿಗುರಿದಾಗ, ಕರುಳಿನ ಕರೆ, ಸಾಕ್ಷಾತ್ಕಾರ, ಮಾರ್ಗದರ್ಶಿ, ಗೃಹಲಕ್ಷ್ಮೀ, ಸುಖ ಸಂಸಾರ, ಜನ್ಮರಹಸ್ಯ, ಎಡಕಲ್ಲು ಗುಡ್ಡದ ಮೇಲೆ, ಬಹದ್ದೂರ್ ಗಂಡು, ಧನಲಕ್ಷ್ಮಿ, ಶ್ರೀ ರಾಘವೇಂದ್ರ ಕರುಣೆ, ವಸಂತಗೀತಾ, ಕವಿರತ್ನ ಕಾಳಿದಾಸ, ಕ್ರಾಂತಿ ಯೋಗಿ ಬಸವಣ್ಣ, ಮುದುಡಿದ ತಾವರೆ ಅರಳಿತು ಮುಂತಾದ ಚಿತ್ರಗಳ ಗೀತೆಗಳು ಇಂದಿಗೂ ಮಧುರವಾಗಿ ಕೇಳಿಸಿಕೊಳ್ಳುತ್ತವೆ.

ಆಂಧ್ರಪ್ರದೇಶದ ಒಂದು ಸಣ್ಣ ಗ್ರಾಮದಲ್ಲಿ ಜನಿಸಿದ ರಂಗರಾವ್ ಅವರು ಬಾಲ್ಯದಲ್ಲಿಯೇ ತಾಯಿ ರಂಗಮ್ಮ ಅವರ ಪ್ರೇರಣೆಯಿಂದ ವೀಣೆ ವಾದನ ಕಲಿತರು. ಅವರು ಮೆಕಾನಿಕಲ್ ಡಿಪ್ಲೊಮಾ ಪದವಿ ಪಡೆದಿದ್ದರು. ಶಾಮಲಾದೇವಿ ಅವರನ್ನು ವಿವಾಹವಾಗಿ ನಾಲ್ಕು ಮಕ್ಕಳಿಗೆ ತಂದೆಯಾಗಿದರು.


ತಮ್ಮ ಕಲಾ ಜೀವನದ ಆರಂಭದಲ್ಲಿ ಸ್ವರ್ಗ ಸೀಮಾ ಮತ್ತು ಯೋಗಿ ವೇಮನ ಚಿತ್ರಗಳಲ್ಲಿ ಬಾಲನಟರಾಗಿ ಅಭಿನಯಿಸಿದರು. ನಂತರ ತೆಲುಗು ತ್ಯಾಗಯ್ಯ ಚಿತ್ರದಲ್ಲಿ ವೀಣಾವಾದಕರಾಗಿ ಕೆಲಸ ಮಾಡಿದರು. 1967ರಲ್ಲಿ ನಕ್ಕರೆ ಅದೇ ಸ್ವರ್ಗ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪೂರ್ಣ ಪ್ರಮಾಣದ ಸಂಗೀತ ನಿರ್ದೇಶಕರಾಗಿ ಪ್ರವೇಶಿಸಿದರು.


ಅವರು ಪ್ರಸಿದ್ಧ ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಬೆಂಗಳೂರು ಲತಾ ಅವರೊಂದಿಗೆ ದೀರ್ಘಕಾಲ ಕೆಲಸ ಮಾಡಿದರು. ಕನ್ನಡ ಚಿತ್ರರಂಗಕ್ಕೆ ಸುಶೀಲಾ ಮತ್ತು ಬಾಲಸುಬ್ರಹ್ಮಣ್ಯಂ ಅವರ ಯುಗಲಗೀತೆಗಳನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸೇರಿದೆ.


ಕನ್ನಡದ ಜೊತೆಗೆ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಿಗೂ ಅವರು ಸಂಗೀತ ನೀಡಿದರು. 1984ರಲ್ಲಿ ಬಂಧನ ಚಿತ್ರದ ಸಂಗೀತಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಹೊಸಬೆಳಕು ಮತ್ತು ಹಣ್ಣೆಲೆ ಚಿಗುರಿದಾಗ ಚಿತ್ರದ ಗೀತೆಗಳು ಜನಮನದಲ್ಲಿ ಅಚ್ಚಳಿಯದಂತೆ ಉಳಿದಿವೆ.


ಎಂ. ರಂಗರಾವ್ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಾ, 02-08-1990 ರಂದು ಬೆಂಗಳೂರಿನಲ್ಲಿ ನಿಧನರಾದರು. ಅವರ ಸಂಗೀತ ಇಂದಿಗೂ ಕನ್ನಡಿಗರ ಹೃದಯಗಳಲ್ಲಿ ಜೀವಂತವಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top