ಹಿಂದೂ ಜನಜಾಗೃತಿ ಸಮಿತಿ: ರಾಜ್ಯ ಮಟ್ಟದ ಉಚಿತ ಆನ್‌ಲೈನ್ ಎಡಿಟಿಂಗ್ ಕಾರ್ಯಾಗಾರಗಳ ಆಯೋಜನೆ

Upayuktha
0

 



ಬೆಂಗಳೂರು: ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಯುವಕರಿಗಾಗಿ ರಾಜ್ಯ ಮಟ್ಟದ ಮೂರು ವಿಭಿನ್ನ ಆನ್ಲೈನ್ ತರಬೇತಿ ಕಾರ್ಯಾಗಾರಗಳನ್ನು (Workshops) ಆಯೋಜಿಸಲಾಗಿದೆ. ಯುವಜನತೆ ತಮ್ಮಲ್ಲಿರುವ ತಾಂತ್ರಿಕ ಕೌಶಲ್ಯವನ್ನು ನಮ್ಮ ಉನ್ನತ ಸಂಸ್ಕೃತಿಯ ಪ್ರಸಾರಕ್ಕಾಗಿ ಮತ್ತು ಧರ್ಮದ ಮೇಲಾಗುವ ಆಘಾತಗಳನ್ನು ತಡೆಯಲು 'ಸೋಶಿಯಲ್ ಮೀಡಿಯಾ ವಾರಿಯರ್' ಆಗಿ ಕಾರ್ಯನಿರ್ವಹಿಸುವಂತೆ ಪ್ರೇರೇಪಿಸುವುದು ಶಿಬಿರಗಳ ಮುಖ್ಯ ಗುರಿಯಾಗಿದೆ.

 

7 ಅಕ್ಟೋಬರ್ 2002 ರಂದು ಸ್ಥಾಪನೆಯಾದ ಹಿಂದೂ ಜನಜಾಗೃತಿ ಸಮಿತಿಯು ಧರ್ಮ ಶಿಕ್ಷಣ, ಧರ್ಮ ಜಾಗೃತಿ, ಸಂಘಟನೆ, ರಾಷ್ಟ್ರ ಮತ್ತು ಧರ್ಮ ರಕ್ಷಣೆ ಎಂಬ ಪಂಚಸೂತ್ರಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ


 ಆಸಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಳಗಿನ ಶಿಬಿರಗಳಿಗೆ ನೋಂದಾಯಿಸಿಕೊಳ್ಳಬಹುದು

1. ಇಮೇಜ್ ಎಡಿಟಿಂಗ್ (Canva App ಮೂಲಕ): ಏಪ್ರಿಲ್ 25 ಮತ್ತು 26, 2026.

2. ಲ್ಯಾಪ್ಟಾಪ್ ಪೋಸ್ಟರ್ ಎಡಿಟಿಂಗ್ : ಏಪ್ರಿಲ್ 30 ಮತ್ತು ಮೇ 1, 2026.

3. ವಿಡಿಯೋ ಎಡಿಟಿಂಗ್ (VN App ಮೂಲಕ): ಮೇ 2 ಮತ್ತು 3, 2026.

 

 ನೋಂದಣಿ ಮಾಹಿತಿ :

 

ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಛಿಸುವ 18 ರಿಂದ 35 ವರ್ಷದೊಳಗಿನ ಯುವಕರು ಇಲ್ಲಿ ನೀಡಲಾದ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಗೂಗಲ್ ಫಾರ್ಮ್ ಭರ್ತಿ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 



Post a Comment

0 Comments
Post a Comment (0)
To Top