ಅಕ್ಷರಸಂತ ಜೆ.ಬಿ ತಮ್ಮಣ್ಣಗೌಡರಿಗೆ ವಿಶ್ವಮಾನವ ಪ್ರಶಸ್ತಿ

Upayuktha
0



ಹಾಸನ: ನಮ್ಮ ಶಾಲೆ ಮತ್ತು ನಮ್ಮೂರ ಶಾಲೆ ಎಂಬ ಪರಿಕಲ್ಪನೆಗಳ ಮೂಲಕ ಪ್ರತೀ ವರ್ಷವೂ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ವ್ಯಾಸಂಗಕ್ಕೆ ಅಳಿಲು ಸೇವೆಯನ್ನು ಸಲ್ಲಿಸುತ್ತಿರುವ ಅಕ್ಷರಸಂತ ಜೆ. ಬಿ. ತಮ್ಮಣ್ಣ ಗೌಡರಿಗೆ ಸಂದ ಮತ್ತೊಂದು ಗೌರವದ ಗರಿ ಎಂದರೆ ವಿಶ್ವಮಾನವ ಪ್ರಶಸ್ತಿ.


ತಮಿಳುನಾಡಿನ ಏಸಿಯಾ ಇಂಟರ್ ನ್ಯಾಷನಲ್ ಕಲ್ಚರ್ ರೀಸರ್ಚ್ ಅಕಾಡೆಮಿ ಹೊಸೂರು ಇವರು ಟಿ.ಜಿ.ಐ. ಗ್ರ್ಯಾಂಡ್ ಫಾರ್ಚೂನಾ ಹಾಲ್ ನಲ್ಲಿ ಏರ್ಪಡಿಸಿದ್ದ ಪ್ರಶಸ್ತಿ  ಸಮಾರಂಭದಲ್ಲಿ ಜೆ.ಬಿ. ತಮ್ಮಣ್ಣ ಗೌಡರಿಗೆ ವಿಶ್ವಮಾನವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.


ಅಕಾಡೆಮಿಯು ಜೆ. ಬಿ. ಟಿ. ಯವರ ಅನನ್ಯ ಕಾರ್ಯವನ್ನು ಗುರುತಿಸಿ, ಶ್ಲಾಘಿಸಿದೆ. ಸಂಸ್ಥೆಯ ಗೌರವಾಧ್ಯಕ್ಷ ಪ್ರಣವ ಸ್ವರೂಪ ಮುನಿ ನಿರಂಜನ ಪೂಜ್ಯ ಶ್ರೀ ಶ್ರೀ ಡಾ. ಕೃಷ್ಣಮೂರ್ತಿ ಮಹಾಸ್ವಾಮೀಜಿಗಳು, ಗೌರವ ಕಾರ್ಯದರ್ಶಿ ಹಾಗೂ ಉದ್ಯಮಿ ಡಾ. ಶ್ರೀಧರ್, ರಕ್ಷಣಾ ಕ್ಷೇತ್ರದ ಹಿರಿಯ ವಿಜ್ಞಾನಿ ಹಾಗೂ ಗೌರವ ಕಾರ್ಯದರ್ಶಿ ಡಾ. ಸುಬ್ರಮಣ್ಯ ಕೆ.ಎಸ್., ಹಾಗೂ ಬೆಂಗಳೂರಿನ ಪೀಣ್ಯದ ಸ್ವಾಮಿ ವಿವೇಕಾನಂದ ಶಾಲೆಯ ನಿರ್ದೇಶಕ ಡಾ. ಬಿ.ಎಂ. ಬಲ್ಲಾರಿಯವರು ಜೊತೆಗೂಡಿ ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ವಿದ್ಯಾರ್ಥಿ ವೃಂದ, ಮಿತ್ರ ವೃಂದ, ಅಭಿಮಾನಿ ವೃಂದದವರು ಹೃದಯ ತುಂಬಿ ಅಭಿನಂದಿಸಿರುತ್ತಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top