ಗೂಗಲ್ ಡೆವಲಪರ್ ಕ್ಲಬ್ ಆನ್ ಕ್ಯಾಂಪಸ್ (GDGoC) ಟೆಕ್‌ಸ್ಪ್ರಿಂಟ್‌ನಲ್ಲಿ ವಿವೇಕಾನಂದ ಕಾಲೇಜಿಗೆ ಟಿಯರ್–1 ಸ್ಥಾನ

Upayuktha
0


ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ) ಕಾಲೇಜು ಇಲ್ಲಿನ ಬಿಸಿಎ ವಿಭಾಗವು ತಾಂತ್ರಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದಿದೆ.  ಗೂಗಲ್ ಡೆವಲಪರ್ ಕ್ಲಬ್ ಆನ್ ಕ್ಯಾಂಪಸ್ (GDGoC) ಟೆಕ್‌ಸ್ಪ್ರಿಂಟ್ (Googlethon) ಸ್ಪರ್ಧೆಯಲ್ಲಿ ಕಾಲೇಜು ಟಿಯರ್–1 ಸ್ಥಾನವನ್ನು ಪಡೆದು ಅತ್ಯುತ್ತಮ ಸಾಧನೆ ದಾಖಲಿಸಿದೆ.


ಈ ಟೆಕ್‌ಸ್ಪ್ರಿಂಟ್‌ನಲ್ಲಿ ಭಾಗವಹಿಸಿದ ಶಿಕ್ಷಣ ಸಂಸ್ಥೆಗಳನ್ನು ಅವರ ತಾಂತ್ರಿಕ ನೈಪುಣ್ಯ, ನಾವೀನ್ಯತೆ, ತಂಡ ಕಾರ್ಯಕ್ಷಮತೆ ಹಾಗೂ ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯ ಆಧಾರದ ಮೇಲೆ ಟಿಯರ್–1, ಟಿಯರ್–2 ಮತ್ತು ಟಿಯರ್–3 ಎಂದು ವರ್ಗೀಕರಿಸಲಾಗುತ್ತದೆ. ಈ ಪೈಕಿ ಟಿಯರ್–1 ಸ್ಥಾನವು ಶ್ರೇಷ್ಠ ಪ್ರದರ್ಶನ ಮತ್ತು ಉನ್ನತ ಗುಣಮಟ್ಟವನ್ನು ಸೂಚಿಸುತ್ತದೆ.


ಇದೇ ಸಂದರ್ಭದಲ್ಲಿ, ಈಗಾಗಲೇ ಪ್ರಕಟಿಸಲಾದ ಅಖಿಲ ಭಾರತ ಮಟ್ಟದ ಕ್ಲೌಡ್ ಕ್ಯಾಂಪೈನ್ – ಕೋಹರ್ಟ್–1 ತಾಂತ್ರಿಕ ಚಟುವಟಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ (Rank–1) ಗಳಿಸಿರುವುದು ಗಮನಾರ್ಹವಾಗಿದೆ.


ಈ ಎರಡೂ ಸಾಧನೆಗಳು ಕಾಲೇಜಿನ ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನ, ಪ್ರಾಯೋಗಿಕ ಕಲಿಕೆ ಹಾಗೂ ನಾವೀನ್ಯತೆಯ ಮನೋಭಾವವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ.


ಈ ಸಂಪೂರ್ಣ ತಾಂತ್ರಿಕ ಚಟುವಟಿಕೆಯ ವಿನ್ಯಾಸ ಮತ್ತು ಮಾರ್ಗದರ್ಶನವನ್ನು  GDGoC ತಂಡದ ಸಚಿನ್ ಉಪರ್ಣಾ ವಹಿಸಿದ್ದರು.


ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್, GDGoC ಸಂಯೋಜಕರಾದ ಹೇಮಾ ಸುಭಾಷಿಣಿ, ಹಾಗೂ ವಿಭಾಗದ ಎಲ್ಲಾ ಅಧ್ಯಾಪಕರ ಮಾರ್ಗದರ್ಶನ ಮಾಡಿದ್ದಾರೆ.


ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಅಧ್ಯಾಪಕ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top