ಸುದ್ದಿ ಗ್ರಹಿಸುವ ಪಥವೇ ಬದಲಾಗುತ್ತಿದೆ...

Upayuktha
0


'ಕಿರಿದಾದ ಅಂಗಡಿ, ಆ ಅಂಗಡಿಯ ಓನರ್ ನ ತಲೆಯ ನೇರಕ್ಕೂ ಅಟ್ಟಿಅಟ್ಟಿಯಾಗಿ ಇಟ್ಟುಕೊಂಡಿರುವ ಆ ದಿನದ ಬಿಸಿ ಬಿಸಿ ಸುದ್ದಿಯ ದಿನಪತ್ರಿಕೆಗಳು ದಿನದ ಅಂತ್ಯದವರೆಗೂ ಆತನ ಉಪಸ್ಥಿತಿಯನ್ನೇ ಕಾಣದಾಗಿಸಿದೆ.'


ಇದು ನಮ್ಮ ಪ್ರಸ್ತುತ ದಿನಮಾನಗಳ ದಿನಪತ್ರಿಕೆಯ ಪರಿಸ್ಥಿತಿಯಾಗಿದ್ದು,'ತಬ್ಬಲಿಯು ನೀನಾದೆ ಮಗನೇ'ಎನ್ನುವ ಮಾತಿನ ಹಾಗೆ ತಯಾರಿಸಿಟ್ಟ ಪತ್ರಿಕೆಗಳಿಗೆ ಓದುವ ಜೊತೆಗಾರನಿರದೆ ಒಂದು ರೀತಿಯಲ್ಲಿ ತಬ್ಬಲಿಯ ಸ್ಥಿತಿಯನ್ನು ಅನುಭವಿಸುತ್ತಿರುವುದು ವಿಷಾದನೀಯವಾಗಿದೆ.


ಮುದ್ರಿತ ಪತ್ರಿಕೆಯ ಬೇಡಿಕೆಯನ್ನು ಕುಸಿಯುವಂತೆ ಮಾಡುತ್ತಿರುವ ಬಹುದೊಡ್ಡ ಅಂಶವೆಂದರೆ ಅದು ಸೋಶಿಯಲ್ ಮೀಡಿಯಾ. ಈ ಸೋಶಿಯಲ್ ಮೀಡಿಯಾ ಈಗಿನ ದಿನಮಾನಗಳಲ್ಲಿ ಇಡೀ ಜಗತ್ತನ್ನು ಆಳುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ಇಡೀ ವಿಶ್ವವನ್ನೇ ತನ್ನ ಸುಪರ್ದಿಯಲ್ಲಿರಿಸಿಕೊಂಡಿದ್ದು ಶರವೇಗದಲ್ಲಿ ಹಲವು ವಿಚಾರಗಳನ್ನು ಜನರ ಬಳಿಗೆ ತಲುಪಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ಇದಕ್ಕೆಲ್ಲ ಕಾರಣ ಮಾಹಿತಿ ಮತ್ತು ತಂತ್ರಜ್ಞಾನಗಳ ವೇಗವಾದ ಬೆಳವಣಿಗೆ, ಅಷ್ಟು ಅಲ್ಲದೆ ಮಾನವನ ಮಿತಿಮೀರಿದ ಬುದ್ಧಿವಂತಿಕೆ. ಇಂದಿನ ಈ ಬ್ಯುಝಿ ಲೈಫಲ್ಲಿ ತಮ್ಮನ್ನು ತಾವು ಗಮನಿಸಿಕೊಳ್ಳದಷ್ಟರ ಮಟ್ಟಿಗೆ ಕಾರ್ಯದಲ್ಲಿ ನಿರತರಾಗುವ ಜನರು ಬಲು ಸಂಕ್ಷಿಪ್ತ ಹಾಗೆಯೇ ತ್ವರಿತ ಮಾಹಿತಿಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಇದಕ್ಕೆ ಪೂರಕವಾಗುವ ಎಲ್ಲರ ಕೈಯಲ್ಲಿರುವ ಹಲಗೆಯಂತಹ ಒಂದಿಷ್ಟು ಉದ್ದದ ಸಾಧನವಾದ ಮೊಬೈಲ್. ಇದು ಚಪ್ಪಟೆಯಾಗಿ ತನ್ನ ಅಸ್ತಿತ್ವಕ್ಕೆ ಸಣ್ಣ ಜಾಗದ ಅವಶ್ಯಕತೆ ಇದ್ದರೂ ಇದರೊಳಗೆ ವ್ಯವಸ್ಥಿತವಾಗಿ ರೂಪುಗೊಂಡಿರುವ ಅಂಶಗಳು ಮನುಷ್ಯನ ಜ್ಞಾನವನ್ನೇ ಮೀರಿಸುವಂತಿದೆ.


ಇವೆಲ್ಲ ಅಂಶಗಳಿಂದ ಜನರ ಸುದ್ದಿ ಗ್ರಹಿಸುವ ಪಥವೇ ಬೇರೆ ಕಡೆಗೆ ಸಾಗಿದ್ದು ಮುದ್ರಿತ ಪತ್ರಿಕೆಗಳನ್ನು ಹಿಡಿದುಕೊಳ್ಳುವ ಸ್ಥಾನವನ್ನು ಮೊಬೈಲ್ ಕಬಳಿಸಿಕೊಂಡಿದೆ.


ನಿಜವಾಗಿಯೂ ಮುದ್ರಿತ ಪತ್ರಿಕೆಗಳನ್ನು ಎರಡು ಕೈಗಳನ್ನಗಲಿಸಿ ಓದುವಾಗ ಸಿಗುವ ಖುಷಿಯು ಮೊಬೈಲ್ ಅನ್ನು ಹಿಡಿದುಕೊಂಡು, ಸೋಶಿಯಲ್ ಮೀಡಿಯಾಗಳಲ್ಲಿ ನೋಡುವ ಸುದ್ದಿಗಳಲ್ಲಿ ಸಿಗುವುದಿಲ್ಲ. ಏಕೆಂದರೆ ಪತ್ರಿಕೆಯು ಕೇವಲ ಸುದ್ದಿಯನ್ನು ಪಸರಿಸುವ ಕೆಲಸವಲ್ಲದೆ ಭಾವನೆಗಳನ್ನು ತುಂಬಿ ಕೊಡುವಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಾಗದದಲ್ಲಿ ಅಚ್ಚಳಿಯದ ಬರವಣಿಗೆಗಳು ಎಂದೆಂದಿಗೂ ನಮ್ಮಿಂದ ದೂರವಾಗುವುದಿಲ್ಲ. ಆದರೆ ಅದೇ ಬರವಣಿಗೆಗಳು ಮೊಬೈಲ್‌ಗಳಲ್ಲಿ ಉಳಿಯಲು ಸಾಧ್ಯವಿಲ್ಲ. ಏನಾದರೂ ಒಂದು ವೇಳೆ ಅದು ಕೆಟ್ಟು ಹೋದರೆ ಅದರ ಜೊತೆ ಮಾಹಿತಿಗಳೂ ಹೊರಟು ಹೋಗಿಬಿಡುತ್ತದೆ. 


ಯಾವತ್ತೂ ಕ್ಷಣಮಾತ್ರದಲ್ಲಿ ಸಿಕ್ಕ ಅತಿ ವೇಗದಲ್ಲಿ ಕಣ್ಮರೆಯಾಗುವ ವಿಚಾರಗಳ ಬದಲು, ಸ್ವಲ್ಪ ತಡವಾಗಿ ದೊರೆತರೂ ಎಂದೆಂದಿಗೂ ಕಣ್ಮರೆಯಾಗದ, ಅತಿ ಆಳವಾಗಿ ಪರಿಣಾಮ ಬೀರುವ ವಿಷಯಗಳನ್ನು ದೊರಕಿಸಿ ಕೊಡುವ ಮಾಧ್ಯಮವೇ ಮುಖ್ಯ. ಹಾಗಾಗಿ ನಮ್ಮೆಲ್ಲರ ಓದುವಿಕೆಯ ಆಸಕ್ತಿಯ ಪಥವನ್ನು ಮುದ್ರಿತ ಪತ್ರಿಕೆಗಳತ್ತ ಸಾಗಿಸೋಣ...



-ಕೆ ಎನ್ ಧನುಷ್, ದಿಡುಪೆ 

ಪ್ರಥಮ ಪತ್ರಿಕೋದ್ಯಮ ವಿಭಾಗ 

ಎಸ್ ಡಿ ಎಂ ಕಾಲೇಜು ಉಜಿರೆ


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top