ಸುದಾನ ಶಾಲೆಯಲ್ಲಿ ಎರಡು ದಿನಗಳ ಸ್ಕೌಟ್ಸ್-ಗೈಡ್ಸ್ "ಉತ್ಕರ್ಷ" ಶಿಬಿರ

Upayuktha
0

ಪುತ್ತೂರು: ಪುತ್ತೂರಿನ‌ ಸುದಾನ ವಸತಿ ಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು‌ ಗೈಡ್ಸ್ ಸಂಸ್ಥೆಯ ಸಹಯೋಗದೊಂದಿಗೆ ಸುದಾನ ಶಾಲೆಯು 2025-26ನೇ ಸಾಲಿನ ಶಾಲಾ ಮಟ್ಟದ ಎರಡು ದಿನಗಳ ವಾರ್ಷಿಕ ಶಿಬಿರ "ಉತ್ಕರ್ಷ" ವನ್ನು ಆಯೋಜಿಸಿತ್ತು.


ಶಾಲೆಯ ಬನ್ನೀಸ್, ಕಬ್ಸ್-ಬುಲ್‌ಬುಲ್ಸ್‌, ಸ್ಕೌಟ್-ಗೈಡ್ಸ್ ವಿಭಾಗಗಳಲ್ಲಿರುವ ಸುಮಾರು 300 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು.


ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ದ.ಕ ಜಿಲ್ಲಾ ಭಾರತ್-ಸ್ಕೌಟ್ಸ್ ಗೈಡ್ಸ್ ನ ಸಂಘಟನಾ ಕಾರ್ಯದರ್ಶಿ ಭರತ್‌ರಾಜ್ ಕೆ ಅವರು "ವಿದ್ಯಾರ್ಥಿಗಳನ್ನು ಕ್ರಿಯಾಶೀಲರಾಗಿ ಮತ್ತು ಜವಾಬ್ದಾರಿಯುತ ಪ್ರಜೆಯಾಗಿ ಬೆಳೆಯಲು‌ ಸ್ಕೌಟ್ಸ್  ಮತ್ತು ಗೈಡ್ಸ್ ಶಿಕ್ಷಣವು ಅತ್ತುಪಯುಕ್ತ" ಎಂದು ಅಭಿಪ್ರಾಯ ಪಟ್ಟರು.


ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅವರು ಮಾತನಾಡುತ್ತಾ 'ವಿದ್ಯಾರ್ಥಿಗಳಲ್ಲಿ ಅವಿತಿರುವ ಸುಪ್ತ ಪ್ರತಿಭೆಯನ್ನು ಸ್ಕೌಟ್ಸ್ -ಗೈಡ್ಸ್ ಶಿಬಿರವು ಅನಾವರಣಗೊಳಿಸುತ್ತದೆ. ಜೊತೆಗೆ ಸಮುದಾಯ ಸೇವಾಮನೋಭಾವ, ತಂಡ ಸ್ಪೂರ್ತಿಯಿಂದ ಕಾರ್ಯೋನ್ಮುಖರಾಗುವ ರೀತಿ, ಪ್ರತಿಕೂಲ ಸಂದರ್ಭವನ್ನು ನಿಭಾಯಿಸುವ ಕೌಶಲ್ಯ, ಬದುಕಿನಲ್ಲಿ ಸ್ವಾವಲಂಬಿಯಾಗಿರುವುದು ಹೇಗೆ ಎನ್ನುವುದನ್ನು ಮಕ್ಕಳು ಇಂಥ ಬೇಸಿಗೆ ಶಿಬಿರದಿಂದ ಕಲಿಯುತ್ತಾರೆ. ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆಯಬೇಕು' ಎಂದು ಕರೆನೀಡಿದರು.


ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕರಾದ ರೆ.ವಿಜಯಹಾರ್ವಿನ್ ನಡೆಯಲಿರುವ ಆಟೋಟ/ ಕರಕುಶಲ , ಕಲಾ ಚಟುವಟಿಕೆಗಳ ಶಿಬಿರ 1 ಉದ್ಘಾಟನೆ ನಡೆಸಿ ಮಾತನಾಡುತ್ತಾ "ಸ್ಕೌಟ್ಸ್ ಗೈಡ್ಸ್ ಶಿಬಿರಗಳು ಮಕ್ಕಳನ್ನು ಇದ್ದಂತೆಯೇ ಇರಲು ಬಿಡುವುದಿಲ್ಲ. ಅವರೊಳಗಿನ ಶಕ್ತಿಯನ್ನು ಸಮಾಜಮುಖಿಯಾಗಿ ಬೆಳೆಸುತ್ತದೆ. ಈ ಉತ್ಕರ್ಷ ಶಿಬಿರದ ಧ್ಯೇಯ ವಾಕ್ಯವಾದ ಮಿತಿಗಳನ್ನು ಮೀರಿ ವಿಸ್ತರಿಸಿ (rise beyond limits) ಎನ್ನುವಂತೆಯೇ ಮಕ್ಕಳು ಬೆಳೆಯಲಿ" ಎಂದು ಶುಭಹಾರೈಸಿದರು. ಶಾಲಾ ಮುಖ್ಯ ಶಿಕ್ಷಕಿ ಶೋಭಾನಾಗರಾಜ್ ಅವರು ಶುಭಾಶಂಸನೆ ಗೈದರು. ಇದೇ ಸಂದರ್ಭದಲ್ಲಿ ದ.ಕ ಸ್ಕೌಟ್ಸ್ -ಗೈಡ್ಸ್ ಸಂಘಟನಾ ಕಾರ್ಯದರ್ಶಿಗಳಾದ ಭರತ್ ರಾಜ್ ಅವರನ್ನು ಗೌರವಿಸಲಾಯಿತು.


ಶಾಲಾ ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ವಿನಿತಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಗೀತಾ ಆಚಾರ್ಯ ಸ್ವಾಗತಿಸಿ, ಶಿಬಿರ ನಾಯಕ ರಂಜಿತ್ ಮಥಾಯಿಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶೈನಿ ಅತಿಥಿಗಳನ್ನು ಪರಿಚಯಸಿ, ನವೀನ್ ವಂದಿಸಿದರು. ಸದಾಶಿವ ಭಟ್ ಹಾಗೂ ಜೀವಿತಾ ರೈ ನಿರೂಪಿಸಿದರು.


ಶಾಲೆಯ ಸ್ಕೌಟ್ಸ್-ಗೈಡ್ಸ್ ಶಿಕ್ಷಕಿಯರು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗಾಗಿ‌ ಅಗ್ನಿ ಶಾಮಕ ದಳದವರಿಂದ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿತ್ತು.


ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಪ್ರಾಥಮಿಕ ಚಿಕಿತ್ಸೆ ಮತ್ತು ಋತುಸ್ರಾವ ನೈರ್ಮಾಲ್ಯ ದ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನೂ ನೀಡಲಾಯಿತು. ಎಲ್ಲಾ ವಿದ್ಯಾರ್ಥಿಗಳೂ ಸಾಹಸಿ ಕ್ರೀಡೆ, ರಾತ್ರಿ ಯ ಶಿಬಿರಾಗ್ನಿ(ಕ್ಯಾಂಪ್ ಫಯರ್)ಗಳಲ್ಲಿ ಭಾಗವಹಿಸಿದರು. ಶಿಬಿರದ ಎರಡನೇ ದಿನ ಕೋರ್ಟ್ ಭೇಟಿ, ಬಿಂದು ಮಿನರಲ್ಸ್ ಫ್ಯಾಕ್ಟರಿ ಭೇಟಿ ಮತ್ತು ನಿಸರ್ಗದತ್ತ ನಡಿಗೆ ಯಲ್ಲಿ ಎರ್ಮಾಯಿ ಜಲಪಾತಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗುತ್ತದೆ. ಈ ಶಿಬಿರವನ್ನು ಸುದಾನ ಶಾಲೆಯ ಸ್ಕೌಟ್ಸ್ -ಗೈಡ್ಸ್ ತಂಡವು ಆಯೋಜಿಸಿತ್ತು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top