ಪುತ್ತೂರು: 2024–25ನೇ ಶೈಕ್ಷಣಿಕ ವರ್ಷದ ಮಂಗಳೂರು ವಿವಿ ಪದವಿ ಪರೀಕ್ಷೆಗಳಲ್ಲಿ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ಪುತ್ತೂರು, ಇಲ್ಲಿನ ವಿದ್ಯಾರ್ಥಿಗಳು ನಾಲ್ಕು ರ್‍ಯಾಂಕ್‌ಗಳನ್ನು ಪಡೆಯುವುದರ ಮೂಲಕ ವಿವಿ ಮಟ್ಟದಲ್ಲಿ ಅತ್ಯುತ್ತಮ ಸಾಧನೆಯನ್ನು ಮೆರೆದಿದ್ದಾರೆ.
ಬಿಎಸ್ಸಿ ವಿಭಾಗದಲ್ಲಿ ಕುಮಾರಿ ಶ್ರೀದೇವಿ ಎನ್, ನಾರಾಯಣ ಎ.ಕೆ ಹಾಗೂ ಶೈಲಾಶ್ರೀ ಅಜಿರಂಗಲ ದಂಪತಿ ಪುತ್ರಿ.ಇವರು 4065 ಅಂಕಗಳೊಂದಿಗೆ 9.89 ಸಿಜಿಪಿಎ, 97.95 ಶೇಕಡಾ ಪಡೆದು ಮಂಗಳೂರು ವಿವಿ ಪದವಿ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ.
ಬಿಎಸ್ಸಿ ವಿಭಾಗದಲ್ಲಿ ಕುಮಾರಿ ಆಯಿಷತ್ ಶಮಾ ಎ, ಅಬ್ದುಲ್ ರಹಿಮಾನ ಎ. ಹಾಗೂ ಜೈನಬಿ ಬಡಕೋಡಿ ದಂಪತಿ ಪುತ್ರಿ.ಇವರು 4036 ಅಂಕಗಳೊಂದಿಗೆ , 9.87 ಸಿಜಿಪಿಎ ಹಾಗೂ 97.35 ಶೇಕಡಾ ಪಡೆದು ನಾಲ್ಕನೇ ರ್‍ಯಾಂಕ್ ಪಡೆದಿದ್ದಾರೆ.
ಬಿ.ಎ ವಿಭಾಗದಲ್ಲಿ ಮಾದ್ರಿ ಅರ್ಚನಾ, ಇವರು 4186 ಅಂಕಗಳು, 9.49 ಸಿಜಿಪಿಎ ಹಾಗೂ 92 ಶೇಕಡಾ ಗಳಿಸಿ ಎಂಟನೇ ರ್‍ಯಾಂಕ್ ಪಡೆದಿದ್ದಾರೆ.
ಬಿ.ಬಿ.ಎ ವಿಭಾಗದಲ್ಲಿ ಕುಮಾರಿ ಶೈರಿನ್ ಬಾನು, ದಿ. ಸಬ್ಜಾನ್ ಸಾಹೇಬ್ ಹಾಗೂ ಶಹಿದಾ ನೆಲ್ಲಿಕಟ್ಟೆ ದಂಪತಿ ಪುತ್ರಿ. ಇವರು 3855 ಅಂಕಗಳು, 9.56 ಸಿಜಿಪಿಎ, 92.89 ಶೇಕಡಾ ಗಳಿಸಿ 10ನೇ ರ್‍ಯಾಂಕ್ ಪಡೆದಿದ್ದಾರೆ.
ಸಾಧಕರಿಗೆ ಅಭಿನಂದನೆ ಸಲ್ಲಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೋ ಅವರು, “ವಿದ್ಯಾರ್ಥಿಗಳ ಪರಿಶ್ರಮ, ಶಿಸ್ತು ಮತ್ತು ಉಪನ್ಯಾಸಕರ ಮಾರ್ಗದರ್ಶನದ ಫಲವಾಗಿ ಈ ಮಹತ್ವದ ಸಾಧನೆ ಸಾಧ್ಯವಾಗಿದೆ. ನಾಲ್ಕು ವಿಶ್ವವಿದ್ಯಾನಿಲಯ ರ್ಯಾಂಕ್‌ಗಳನ್ನು ಗಳಿಸಿರುವುದು ನಮ್ಮ ಸಂಸ್ಥೆಗೆ ಅಪಾರ ಹೆಮ್ಮೆಯ ವಿಷಯ. ಶೈಕ್ಷಣಿಕ ಮೇಲುಗೈ ಜೊತೆಗೆ ವ್ಯಕ್ತಿತ್ವ ನಿರ್ಮಾಣವೂ ನಮ್ಮ ಶಿಕ್ಷಣ ಸಂಸ್ಥೆಯ ಧ್ಯೇಯವಾಗಿದ್ದು, ಮುಂದೆಯೂ ಇದೇ ರೀತಿಯ ಸಾಧನೆಗಳು ಮುಂದುವರಿಯಲಿ” ಎಂದು ಹಾರೈಸಿದರು.
ಕ್ಯಾಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ವಂದನೀಯ ಪ್ರವೀಣ್ ಲಸ್ರಾದೋ, ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಕಾಲೇಜಿನ ಸಂಚಾಲಕರೂ ಆದ ಅತಿ ವಂ. ಲಾರೆನ್ಸ್ ಮಸ್ಕರೇನಸ್, ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ಸಾಧಕರಿಗೆ ಅಭಿನಂದನೆ ಸಲ್ಲಿಸಿ, ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು ಶುಭ ಹಾರೈಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


