ಮುಜುಂಗಾವು: ಮುಜುಂಗಾವು ಶ್ರೀ ಭಾರತಿ ವಿದ್ಯಾಪೀಠದಲ್ಲಿ ಈ ಶೈಕ್ಷಣಿಕ ವರ್ಷದ ಸಮಾರೋಪ ಹಾಗೂ ಪ್ರತಿಭಾ ಭಾರತಿ ಕಾರ್ಯಕ್ರಮ ಮಂಗಳವಾರ ಮಾರ್ಚ್ 31 ರಂದು ನಡೆಯಿತು.
ಅತಿಥಿಗಳಾಗಿ ಆಗಮಿಸಿದ ಶ್ರೀ ದಯಾನಂದ ಕೆ, ನಿವೃತ್ತ ಎಸ್.ಸಿ ಡೆವಲಪ್ಮೆಂಟ್ ಅಧಿಕಾರಿಗಳು ಮಾತನಾಡುತ್ತಾ ವಿದ್ಯಾಪೀಠದ ವಿದ್ಯಾರ್ಥಿಗಳು ಸಂಸ್ಕಾರ ಮತ್ತು ಸಂಸ್ಕೃತಿಗಳ ಬಗ್ಗೆ ಅರಿವಿರುವವರು ಎಂದರಲ್ಲದೇ ಇಪ್ಪತ್ತೈದು ವರ್ಷಗಳ ಮೆಲುಕನ್ನು ಹಾಕಿದರು. ಅಭ್ಯಾಗತರಾಗಿ ಆಗಮಿಸಿದ ಇನ್ನೋರ್ವ ಅತಿಥಿ, ಶ್ರೀ ಗಣೇಶ್ ಭಟ್ ದೊಡ್ಡಮಾಣಿ, ಬೆಂಗಳೂರು, ಸರ್ವೆ ಆಫ್ ಇಂಡಿಯಾ, ಇವರು ಮಾತನಾಡಿ, ಸಂಸ್ಕಾರ ಮತ್ತು ಸಂಸ್ಕೃತಿಗಳು ಭಾರತೀಯರ ಜೀವಾಳವಾಗಬೇಕೆಂದು ಅಪೇಕ್ಷೆ ಪಟ್ಟರು.
ಎಲ್.ಕೆ.ಜಿ ಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು. 2025-26 ನೇ ಶೈಕ್ಷಣಿಕ ವರ್ಷದಲ್ಲಿ ಪೂರ್ಣ ಹಾಜರಾತಿಯನ್ನು ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಯಿತು.
ಶಾಲಾ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ಎಡನಾಡು ಕೋ- ಆಪರೇಟಿವ್ ಬ್ಯಾಂಕಿನ ಆಡಳಿತ ಸಮಿತಿ ಅಧ್ಯಕ್ಷರಾದ ಶ್ರೀ ಶ್ಯಾಮರಾಜ ದೊಡ್ಡಮಾಣಿ, ಆಡಳಿತ ಸಮಿತಿಯ ಕಾರ್ಯದರ್ಶಿಗಳಾದ ಎಚ್.ಎಸ್ ಪ್ರಸಾದ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಶ್ಯಾಮ್ ಭಟ್ ದರ್ಬೆಮಾರ್ಗ ಹಾಗೂ ಸಹ ಮುಖ್ಯ ಶಿಕ್ಷಕಿ ಶ್ರೀಮತಿ ಚಿತ್ರಾಸರಸ್ವತಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು.ಶ್ರೀನಂದ ಬೇಕಲ್ ಸ್ವಾಗತಿಸಿ ಕು.ಯುಕ್ತಿ ವಂದಿಸಿದಳು. ವಿದ್ಯಾರ್ಥಿಗಳಾದ ಸಮರ್ಥ್ ಕೃಷ್ಣ ಶೆಟ್ಟಿ ಹಾಗೂ ಚಂದನ್ ಬಲ್ಲಾಳ್ ಕಾರ್ಯಕ್ರಮವನ್ನು ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


