ಸರ್ಕಾರಿ ಶಾಲಾ ಮಕ್ಕಳಿಗಾಗಿ ಮನಃಸ್ಫೂರ್ತಿ ಬೇಸಿಗೆ ಶಿಬಿರ

Upayuktha
0


ಶಿವಮೊಗ್ಗ: ಮಾನಸಾಧಾರ ಟ್ರಸ್ಟ್(ರಿ), ಮನಃಸ್ಫೂರ್ತಿ ವಿಶೇಷ ಶಾಲೆ(ರಿ) ಮತ್ತು ಕಲಿಕಾ ಕೇಂದ್ರ ಹಾಗೂ ನಮ್ಮ ಹಳ್ಳಿ ಥಿಯೇಟರ್(ರಿ) ರವರ ಸಹಯೋಗದೊಂದಿಗೆ 6 ರಿಂದ 9 ನೇ ತರಗತಿಯ ಸರ್ಕಾರಿ ಶಾಲೆ ಮಕ್ಕಳಿಗಾಗಿ "ಮನಃಸ್ಫೂರ್ತಿ ಶಿಬಿರ- 2026" ಅನ್ನು ಆಯೋಜಿಸಲಾಗಿದ್ದು, ಈ ಶಿಬಿರವು ದಿನಾಂಕ: 13/04/2026 ರಿಂದ 25/04/2026 ರವರೆಗೆ ಪ್ರತಿ ದಿನ ಬೆಳಿಗ್ಗೆ 9:30 ರಿಂದ ಸಂಜೆ 4:00 ರವರೆಗೆ ಇರುತ್ತದೆ.


ಶಿಬಿರದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಮೌಲ್ಯಯುತ ಶಿಕ್ಷಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಡುಗಾರಿಕೆ, ಹಾಸ್ಯ ಕಥೆ, ನಾಟಕ, ಚಿತ್ರಕಲೆ, ನೃತ್ಯ, ಜಾದು, ಮೇಕಪ್, ಯೋಗ, ಧ್ಯಾನ, ಅರಿವು, ಸಿನಿಮಾ ವೀಕ್ಷಣೆ, ಕ್ಲೇ ಮಾಡೆಲ್, ಪ್ರವಾಸ, ತೊಗಲು ಗೊಂಬೆ, ಯಕ್ಷಗಾನ, ಓರಿಗಾಮಿ, ಚಿತ್ರಕಲೆ, ಮೂಕಾಭಿನಯ, ಆರೋಗ್ಯ, ಸಾಮಾನ್ಯ ಜ್ಞಾನ ಮತ್ತು ಮಕ್ಕಳ ಹಕ್ಕುಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಗುವುದು.


ಶಿಬಿರವು ಸಂಪೂರ್ಣವಾಗಿ ಉಚಿತವಾಗಿದ್ದು, 6 ರಿಂದ 9 ನೇ ತರಗತಿಯ 60 ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಅವಕಾಶವಿರುತ್ತದೆ. ಆಸಕ್ತ ಮಕ್ಕಳ ಪೋಷಕರು ಏಪ್ರಿಲ್ 4 ರೊಳಗೆ ಶಿವಮೊಗ್ಗದ ಜೆ ಪಿ ಎನ್ ರಸ್ತೆಯ ಮಾನಸ ನರ್ಸಿಂಗ್ ಹೋಂ ಬಳಿಯ ಮನಃಸ್ಫೂರ್ತಿ ಕಲಿಕಾ ಕೇಂದ್ರದಲ್ಲಿ ಹೆಸರು ನೋಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ  ಮನಃಸ್ಫೂರ್ತಿ ಕಛೇರಿ 8867540973 / ಶಿಬಿರದ ಸಂಚಾಲಕರಾದ ಶ್ರೀ ಯುತ ಮಂಜುನಾಥ್ ಸ್ವಾಮಿ 9845014229 / ಶ್ರೀಮತಿ ರಂಗನಾಯಕಿ 9663645373 ಇವರನ್ನು ಸಂಪರ್ಕಿಸಬೇಕಾಗಿ ಮನಃಸ್ಫೂರ್ತಿಯ ಶೈಕ್ಷಣಿಕ ನಿರ್ದೇಶಕರಾದ ಡಾ. ಪ್ರೀತಿ.ವಿ. ಶಾನುಭಾಗ್ ಪ್ರಕಟಣೆಯಲ್ಲಿ ಕೋರಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top