ಪ್ರಶ್ನಿಸುವ ಮನೋಭಾವವಿದ್ದಾಗ ಸಾಧನೆ ಸಾಧ್ಯವಾಗುತ್ತದೆ : ನರಸಿಂಹ ಮೂರ್ತಿ

Upayuktha
0

ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯಲ್ಲಿ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಣೆ



ಪುತ್ತೂರು: ವಿದ್ಯೆ ಎಂದರೆ ಅದು ವಿಮರ್ಶಾತೀತವಲ್ಲ. ವಿದ್ಯೆಯನ್ನೂ ವಿಶ್ಲೇಷಣೆಗೆ ಒಳಪಡಿಸಬೇಕು. ಯೋಚನಾ ಶಕ್ತಿ, ವಿಮರ್ಶಿಸುವುದೇ ನಿಜವಾದ ವಿದ್ಯೆ. ಯಾರಲ್ಲಿ ಪ್ರಶ್ನಿಸುವ ಮನೋಭಾವವಿರುತ್ತದೆಯೋ ಅಂತಹ ವ್ಯಕ್ತಿ ಶ್ರೇಷ್ಠ ಸಾಧನೆಯನ್ನು ಮಾಡುತ್ತಾನೆ ಎಂದು ನವದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ನರಸಿಂಹಮೂರ್ತಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಿ.ಬಿ.ಎಸ್.ಇ. ವಿದ್ಯಾಲಯದಲ್ಲಿ ಬೆಂಗಳೂರಿನ ನಂಬರ್ ಎಜುಕೇಶನಲ್ ಸೊಲ್ಯೂಷನ್ ಸಂಸ್ಥೆ ಆಯೋಜಿಸಿದ ವೇದಗಣಿತ ಮತ್ತು ಅಂದ ಬರವಣಿಗೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಂಗಳವಾರ ಮಾತನಾಡಿದರು.


ವಿದ್ಯೆ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕೊಡಬೇಕು. ಸಹಬಾಳ್ವೆ, ಕೃತಜ್ಞತಾ ಮನೋಭಾವ, ಹೆತ್ತವರಿಗೆ ಗೌರವವನ್ನು ನೀಡುವುದೇ ವಿದ್ಯೆಯ ಮೂಲ ಉದ್ದೇಶವಾಗಿದೆ ಆದರೆ ವಿದ್ಯೆ ಇಂದು ಕಲಬೆರಕೆಯಾಗಿ, ಕೇವಲ ಪರೀಕ್ಷೆಗೆ ಸೀಮಿತವಾಗಿ ಇಂದು ತನ್ನ ಮೂಲ ಆಶಯವನ್ನು ಕಳೆದುಕೊಂಡಿದೆ ಎಂದು ನುಡಿದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಈಗಿನ ಶಿಕ್ಷಣ ಪದ್ಧತಿಯಲ್ಲಿ ವೇದ ಶಿಕ್ಷಣವನ್ನು ಮಕ್ಕಳಿಗೆ ಹೇಳಿಕೊಡುವುದು ಅತ್ಯಂತ ಅಗತ್ಯ. ವೇದ ಗಣಿತದಲ್ಲಿ ಅನೇಕ ಸಮಸ್ಯೆಗೆ ಸುಲಭವಾಗಿ ಪರಿಹಾರವನ್ನು ಕಂಡುಹಿಡಿಯಬಹುದು. ಅಲ್ಲದೇ ಇದರಿಂದ ಭಾರತದ ತತ್ವವನ್ನು ಬೆಳಕಿಗೆ ತಂದಂತಾಗುತ್ತದೆ. ಆದರೆ ಇಂದು ಹಲವಾರು ಶಿಕ್ಷಣ ಸಂಸ್ಥೆಗಳು ಭಾರತ ತತ್ವವನ್ನು ಉಳಿಸುವಲ್ಲಿ ಸೋತಿವೆ. ಮುಂದೊಂದು ದಿನ ವೇದಗಣಿತ, ಸಂಸ್ಕøತ, ಆಯುರ್ವೇದದಂತಹ ವಿಚಾರಗಳು  ಪ್ರಪಂಚವನ್ನು ಆಳುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.


ವೇದಗಣಿತ ಸ್ಪರ್ಧೆಯಲ್ಲಿ  ನಾಲ್ಕನೇ ತರಗತಿಯಲ್ಲಿ  ಎಂ.ಅಂಶ್  ಕಾಮತ್ ಪ್ರಥಮ, ಅಕ್ಷರ ಎಚ್. ಪಿ ದ್ವಿತೀಯ, ಪ್ರಚೇತ್ ಭಟ್ ತೃತೀಯ ಸ್ಥಾನ ಪಡೆದರೆ 5ನೇ ತರಗತಿಯಲ್ಲಿ ಪರೀಕ್ಷಿತ್ ಎಸ್. ಪಿ ಪ್ರಥಮ, ಶ್ರೀಯಾಂ ಕೆ.ಎಸ್ ದ್ವಿತೀಯ, ಶ್ರೀಹಾನ್ ಗೌಡ ಕೆ.ಜೆ. ತೃತೀಯ ಸ್ಥಾನ ಪಡೆದುಕೊಂಡರು. ಆರನೇ ತರಗತಿಯಲ್ಲಿ ಸ್ಪಂದನ ಭಟ್ ಪ್ರಥಮ, ಶೌರ್ಯ ಕೆ.ಆರ್ ದ್ವಿತೀಯ, ಶಿವಾನಿ ಪಿ. ವಿ ತೃತೀಯ ಮತ್ತು ಏಳನೇ ತರಗತಿಯಲ್ಲಿ ಕೆ.ಎಂ. ಶಮಿತಾ ಭಟ್ ಪ್ರಥಮ, ಅನನ್ಯ ಪಿ. ದ್ವಿತೀಯ ಹಾಗೂ ಸುಧನ್ವ  ತೃತೀಯ ಸ್ಥಾನ ಪಡೆದುಕೊಂಡರು. ಎಂಟನೇ ತರಗತಿಯಲ್ಲಿ ಸೌಪರ್ಣಿಕ ಎಸ್ ದಾನೆಗೊಂಡರ್ ಪ್ರಥಮ, ಅನ್ವಿತಾ.ಎಸ್ ದ್ವಿತೀಯ, ಬಿಂದಿಯಾ ಎನ್. ತೃತೀಯ ಸ್ಥಾನ ಗಳಿಸಿದರು. 9ನೇ ತರಗತಿಯಲ್ಲಿ ಐಶಿನಿ ರೈ ಪ್ರಥಮ, ಶಾರ್ವಿ ಎಸ್. ರಾವ್ ದ್ವಿತೀಯ, ಕುವಿರ ಕೆ.ವಿ ತೃತೀಯ ಸ್ಥಾನ ಪಡೆದುಕೊಂಡರು.


ಸುಂದರ ಬರವಣಿಗೆಯಲ್ಲಿ ಎರಡನೇ ತರಗತಿಯ ವಿದ್ಯಾರ್ಥಿಗಳಾದ ಸಾದ್ವಿಕ್ ಎ. ಎಸ್ ಪ್ರಥಮ, ಹರ್ಷಿಲ್ ಬಂಗೇರ ದ್ವಿತೀಯ, ಭುವಿ ಅವಿμÁ್ಕ ತೃತೀಯ ಸ್ಥಾನವನ್ನು ಪಡೆದುಕೊಂಡರೆ, ಮೂರನೇ ತರಗತಿಯಲ್ಲಿ ವಿದ್ಯಾರ್ಥಿಗಳಾದ ಧನ್ವಿ ಬಿ. ವಿ ಪ್ರಥಮ, ಬೆನಿಶಾ ಲೋಬೊ ದ್ವಿತೀಯ ಹಾಗೂ ಸ್ನೇಹಿತ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ನಾಲ್ಕನೇ ತರಗತಿಯಲ್ಲಿ ವಿದ್ಯಾರ್ಥಿಗಳಾದ ಪ್ರಸ್ತುತಿ ಪ್ರಥಮ, ಆದ್ಯ ಜೆ.ಎನ್ ದ್ವಿತೀಯ, ಆಂಶ್ ಕಾಮತ್ ತೃತೀಯ ಸ್ಥಾನವನ್ನು ಪಡೆದುಕೊಂಡರೆ 5ನೇ ತರಗತಿಯ ವಿದ್ಯಾರ್ಥಿಗಳಾದ ನೈಮಿಷ ಪಿ.ವಿ ಪ್ರಥಮ ಸ್ಥಾನ, ಹಾರ್ದಿಕ ದ್ವಿತೀಯ ಸ್ಥಾನ, ಅನಿμÁ್ಕ ಪಿ ನಾಯಕ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ. 6ನೇ ತರಗತಿಯಲ್ಲಿ ಪ್ರಥಮ ಸ್ಥಾನವನ್ನು ಸ್ಪಂದನ ಎಂ, ದ್ವಿತೀಯ ಸ್ಥಾನವನ್ನು ಜೀವಿಕಾ ಪಿ. ಭಟ್, ಅಂತೆಯೇ ತೃತೀಯ ಸ್ಥಾನವನ್ನು ಯಶಿಕಾ. ಎಂ ಪಡೆದುಕೊಂಡಿದ್ದಾರೆ. ಏಳನೇ ತರಗತಿಯ ವಿದ್ಯಾರ್ಥಿಗಳಾದ ಶಿತಿಜ್ ಪ್ರಥಮ ಸ್ಥಾನವನ್ನು, ಆಯುಷ್‌ ರಾವ್ ದ್ವಿತೀಯ ಸ್ಥಾನವನ್ನು, ಶ್ರೀವತ್ಸ ವಿಠಲ ಭಟ್ಟ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಅನ್ವಿತಾ. ಎಸ್ ಪ್ರಥಮ ಸ್ಥಾನ, ಅಶ್ನಿತ್ ರಂಜನ್ ದ್ವಿತೀಯ ಸ್ಥಾನ, ತೃತೀಯ ಸ್ಥಾನವನ್ನು ಆದ್ಯ  ಶೆಣೈ ಪಡೆದುಕೊಂಡರೆ 9ನೇ ತರಗತಿಯ ವಿದ್ಯಾರ್ಥಿಗಳಾದ ಪ್ರಥಮ ಸ್ಥಾನವನ್ನು ಸಾನ್ವಿ ಪ್ರಥಮ ಸ್ಥಾನ, ಸೋನಾ ಪೃಥ್ವಿ ದ್ವಿತೀಯ ಸ್ಥಾನ ಹಾಗೂ ವಂಶಿಕ ಬಿ. ರೈ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.


ವೇದಿಕೆಯಲ್ಲಿ ನಂಬರ್ ಎಜುಕೇಶನಲ್ ಸೊಲ್ಯೂಷನ್ ಸಂಸ್ಥೆಯ ಸ್ಥಾಪಕ ಹಾಗೂ ವೇದ ಗಣಿತದ ಸಂಪನ್ಮೂಲ ವ್ಯಕ್ತಿ ನವೀನ್ ಮತ್ತು ಶಾಲಾ ಪ್ರಾಂಶುಪಾಲೆ ಮಾಲತಿ ಡಿ ಉಪಸ್ಥಿತರಿದ್ದರು. ನಂಬರ್ ಎಜುಕೇಶನಲ್ ಸೊಲ್ಯೂಷನ್ ಸಂಸ್ಥೆಯ ಸಹ ಸಂಸ್ಥಾಪಕ ಭರತ್ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳ ಹೆಸರಿನ ಪಟ್ಟಿಯನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ನಂಬರ್ ಎಜುಕೇಶನಲ್ ಸೊಲ್ಯೂಷನ್ ಸಂಸ್ಥೆಯಸದಸ್ಯರು ಸುಬ್ರಮಣ್ಯ ಹಾಜರಿದ್ದರು. ಶಿಕ್ಷಕಿಯರಾದ ಕೃತಿಕಾ ಸ್ವಾಗತಿಸಿ, ಸುಷ್ಮಾ ವಂದಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top