ಕವನ: ಯುಗಾದಿ- ಹೊಸ ಆರಂಭದ ಹಾದಿ

Upayuktha
0



ಯುಗಾದಿ ಬೇವು-ಬೆಲ್ಲದೊಂದಿಗೆ…

ಹೊಸ ಆರಂಭದ ಹಾದಿ…

ಪ್ರಕೃತಿಗೇ ನವ ಚಿಗುರು,

ಬದುಕಿಗೇ ಹೊಸ ಅಧ್ಯಾಯ…


ಬೇವು ಕಹಿ ನೋವುಗಳಾದರೆ,

ಬೆಲ್ಲ ಸಿಹಿ ನೆನಪುಗಳು…

ಇವೆರಡೂ ಬದುಕಿನ ಅಂಗಗಳು ಎಂದು

ಸಾರುವುದೇ ಯುಗಾದಿಯ ಮೆರಗು…


ಹೊಸ ವರ್ಷದ ಬೆಳಕಿನಲ್ಲಿ ಹೊಳೆಯಲಿ

ನಮ್ಮೆಲ್ಲರ ಬದುಕು…

ತನ್ನೆಲ್ಲಾ ಎಲೆಗಳನ್ನು ಉದುರಿಸಿ

ಹೊಸ ಚೈತನ್ಯದೊಂದಿಗೆ ಅರಳುವ ಪ್ರಕೃತಿ—

ನಮಗೆ ನೀಡುವ ಅಮೂಲ್ಯ ಪಾಠ…


ನಮ್ಮೊಳಗಿನ ಜಗಳ,

ಮನಸ್ಥಾಪಗಳನ್ನು ಮರೆತು,

ನಾವು ನೀವು ಬೇವು-ಬೆಲ್ಲದಂತೆ ಇರೋಣ…

ಸಿಹಿ-ಕಹಿಯನ್ನು ಹಂಚಿಕೊಳ್ಳೋಣ…


ಕಷ್ಟ-ಸುಖಗಳಲ್ಲಿ ಜೊತೆಯಾಗಿ ಸಾಗೋಣ,

ಸಂತೋಷ-ಸಮೃದ್ಧಿ ತುಂಬಿ ತುಳುಕಲಿ

ಮನೆ ಮನಗಳೆಲ್ಲಾ—

ಎಂದು ಹಾರೈಸುವೆವು…


- ಅಶ್ವಿನಿ ಮಂಜುನಾಥ್ ದುಂದೂರ.

ಬಿಸಿಎ ವಿದ್ಯಾರ್ಥಿ 

ಚೇತನ್ ವಾಣಿಜ್ಯ ಬಿಬಿಎ & ಬಿಸಿಎ ಮಹಾವಿದ್ಯಾಲಯ. ಹುಬ್ಬಳ್ಳಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top