ನಿಟ್ಟೆ ಬಿಕಾನ್ಸ್ 2026 ಸಾಂಸ್ಕೃ ತಿಕ ಸ್ಪರ್ಧೆ: ಉಜಿರೆ ಎಸ್.ಡಿ.ಎಂ ಜೆ.ಎಂ.ಸಿ. ವಿದ್ಯಾರ್ಥಿಗಳು ಚಾಂಪಿಯನ್ಸ್

Upayuktha
0


ಉಜಿರೆ: ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯದ ಸಂವಹನ ವಿಭಾಗವು ಫೆಬ್ರವರಿ 20 ಮತ್ತು 21ರಂದು ಆಯೋಜಿಸಿದ್ದ ಬಿಕಾನ್ಸ್ 2026 ಸಾಂಸ್ಕøತಿಕ ಉತ್ಸವದಲ್ಲಿ ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಚಾಂಪಿಯನ್‍ಷಿಪ್ ತಮ್ಮದಾಗಿಸಿಕೊಂಡಿದ್ದಾರೆ.


ಈ ಉತ್ಸವದಲ್ಲಿ 38 ಪ್ರತಿಷ್ಠಿತ ಕಾಲೇಜುಗಳ 350 ವಿದ್ಯಾರ್ಥಿಗಳು ಭಾಗವಹಿಸಿದ್ದರು. "ವಾಟ್ಸ್ ದ ಸೀನ್?" ಎಂಬ ಥೀಮ್‍ನಡಿ ನಡೆದ ಈ ಎರಡು ದಿನಗಳ ಮಹೋತ್ಸವವು ವಿದ್ಯಾರ್ಥಿಗಳ ಕಲಾತ್ಮಕ ಅನನ್ಯತೆ ಮತ್ತು ಸಂವಹನ ಅಭಿವ್ಯಕ್ತಿ ಕೌಶಲ್ಯಗಳಿಗೆ ವೇದಿಕೆ ಒದಗಿಸಿಕೊಡುವ ವೈವಿಧ್ಯಮಯ ಸ್ಪರ್ಧೆಗಳಿಗೆ ಸಾಕ್ಷಿಯಾಯಿತು. ಶಾರ್ಟ್ ಫಿಲ್ಮ್ ಮೇಕಿಂಗ್, ರೀಲ್ ಮೇಕಿಂಗ್, ಫೆÇೀಟೋಗ್ರಫಿ, ಕ್ವಿಜ್, ಸಂಗೀತ, ಫೇಸ್ ಪೇಂಟಿಂಗ್, ಮರ್ಡರ್ ಮಿಸ್ಟರಿ, ಪೆÇೀಸ್ಟರ್ ಮೇಕಿಂಗ್, ಸ್ಟ್ರೀಟ್ ಪ್ಲೇ, ಆರ್‍ಜೆ ಹಂಟ್, ಫ್ಯಾಷನ್, ಡ್ಯಾನ್ಸ್, ಡಿಬೇಟ್, ಮ್ಯಾಡ್ ಆ್ಯಡ್, ಮಾಕ್ ಪ್ರೆಸ್ ಮತ್ತು ಕ್ರಿಯೇಟಿವ್ ರೈಟಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದವು.


ಹನುಮೇಶ್ (ಫೋಟೋಗ್ರಫಿ), ಅಂಕಿತ್ ರೈ ಮತ್ತು ಮೋಹಿತ್ (ರೀಲ್ ಮೇಕಿಂಗ್), ಅರ್ಚನಾ, ರಮಿತ, ಕೌಶಿಕ್, ಚೇತನ್, ಯಕ್ಷಿತ್,  ಕನ್ನಿಕಾ ಮತ್ತು ವಂಶಿ (ಮೂವಿ ಸ್ಪೂಫ್) ಕೌಶಿಕ್, ಅರ್ಚನಾ, ರಮಿತಾ, ಯಕ್ಷಿತ್, ಚೇತನ್, ಮೋಹಿತ್ ಮತ್ತು ಸೂರಜ್ (ಮ್ಯಾಡ್ ಆ್ಯಡ್) ಹಾಗೂ ಅರ್ಚನಾ ಮತ್ತು ಚೇತನ್ (ಕನ್ನಡ ಚರ್ಚಾಸ್ಪರ್ಧೆ) ಅಗ್ರ ಅಂಕಗಳನ್ನು ಗಳಿಸಿ ಅತ್ಯಧಿಕ ಬಹುಮಾನ ಮನ್ನಣೆಯೊಂದಿಗೆ ಸಮಗ್ರ ಚಾಂಪಿಯನ್‍ಷಿಪ್ ಪಡೆದರು.


ವಿದ್ಯಾರ್ಥಿಗಳ ಸಾಧನೆ ಪ್ರಶಂಸನೀಯ ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿಶ್ವನಾಥ ಪಿ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯ ಬಿ.ಪಿ. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top