ಎಸ್‌.ಆರ್ ಹೆಗ್ಡೆ ಟ್ರಸ್ಟ್‌ನಿಂದ ಶಾಲೆಗಳಲ್ಲಿ ಜಾನಪದ ಅರಿವು ಕಾರ್ಯಕ್ರಮ

Upayuktha
0


ಸುರತ್ಕಲ್‌: ವಿದ್ಯಾರ್ಥಿಗಳಿಗೆ ಜಾನಪದ ಕಥೆ, ಗೀತೆ, ಪಾಡ್ದನಗಳ ಅರಿವು ಮತ್ತು ಮಹತ್ವ ತಿಳುವಳಿಕೆ ಮೂಡಲು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಜಾನಪದ ಅರಿವು ಕಾರ್ಯಕ್ರಮ ಆಯೋಜಿಸಲು ಎಸ್. ಆರ್. ಹೆಗ್ಡೆ ಟ್ರಸ್ಟ್ ನಿರ್ಧರಿಸಿದೆ.


ಎಸ್. ಆರ್. ಹೆಗ್ಡೆ ಟ್ರಸ್ಟ್ ನ ಚಿಂತನ ಸಭೆಯಲ್ಲಿ ಎಸ್. ಆರ್. ಹೆಗ್ಡೆ ಟ್ರಸ್ಟ್‌ನ ಅಧ್ಯಕ್ಷೆ ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಡೆ ನುಡಿದರು. ಹಳೆಯ ಮಹತ್ವದ ಸಂಶೋಧನ ಹಾಗೂ ಸಾಹಿತ್ಯ ಕೃತಿಗಳ ಮರು ಪ್ರಕಟಣೆ, ಸಂಶೋಧನ ಕಮ್ಮಟಗಳು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ನಿರ್ಧರಿಸಲಾಯಿತು.


ಈ ಸಂದರ್ಭದಲ್ಲಿ ಡಾ. ಇಂದಿರಾ ಹೆಗ್ಗಡೆ ಯವರು ತಮಗೆ ಲಭಿಸಿದ ಪ್ರಶಸ್ತಿಗಳ ಗೌರವ ಧನವನ್ನು ಟ್ರಸ್ಟ್‌ಗೆ ಕೊಡುಗೆಯಾಗಿ ನೀಡಿದರು.


ಡಾ. ಇಂದಿರಾ ಹೆಗ್ಗಡೆ ಮತ್ತು ಸಂಶೋಧಕ ಬೆನೆಟ್ ಅಮ್ಮನ್ನ ರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಕಾರ್ಯದರ್ಶಿ ಕೃಷ್ಣಮೂರ್ತಿ ಅಭಿನಂದಿಸಿದರು. ಕೋಶಾಧಿಕಾರಿ ಡಾ. ಜ್ಯೋತಿ ಚೇಲೈರು ಸ್ವಾಗತಿಸಿದರು. ಸುಜಾತ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top