ಪ್ರಕೃತಿಯ ವೈಭವವ ಬಣ್ಣಿಸುವುದೆಂತು...

Upayuktha
0



ಎಲ್ಲಿಯದೋ ಕೈಲಾಸ, ಎಲ್ಲಿಯದೋ ಸಹ್ಯಾದ್ರಿ,

ಅಷ್ಟ ದಿಕ್ಕುಗಳಿಗೆ ಸೆರಗಾಸಿ ಕುಳಿತಿಹಳು ನಯನ ಮನೋಹರಿ.


ಮುಂಜಾವಿನ ಬಾನನು ಬೆಳಗಲು ಬಯಸಿಯನು ರವಿಯು,

ಕಾರ್ಗತ್ತಲ ಕಾರ್ಮೋಡದ ನಡುವಿನಲಿ ನಗುತಿಹನು ಶಶಿಯು.


ಶೌರ್ಯಕ್ಕೆ ಸಿಂಹ, ಕೌರ್ಯಕ್ಕೆ ವ್ಯಾಘ್ರ, ಗಾಂಭೀರ್ಯಕ್ಕೆ ಗಜನು,

ಗಾನಕ್ಕೆ ಕೋಕಿಲ, ಪ್ರೇಮಕ್ಕೆ ಹಂಸ, ನಾಟ್ಯಕ್ಕೆ ನವಿಲು.


ವರ್ಣಗಳ ಕರಗಳ ಚಾಚಿ ಮೂಡಲು ಕಾಮನ ಬಿಲ್ಲು,

ಗಿರಿ ಶಿಖರಗಳ ವೈಭವಗಳನ್ನು ವರ್ಣಿಸಿಲು ಸಾಲುತ್ತಿಲ್ಲ ಈ ಸೊಲ್ಲು.


ತಿಳಿನೀಲ ಆಕಾಶಕ್ಕೆ ಎದುರಾಳಿಯಾಗಿ ನಿಂತಿದೆ ಅನಂತಾಧಿ ಸಾಗರ,

ಸಪ್ತ ಸಾಗರಗಳೇ ಅರಿಯದ ಸಹಸ್ರಾದಿ ಜೀವಿಗಳ ಆಗರ.


ಮಳೆಗಾಲದಲ್ಲಿ ಮೈದುಂಬಿ ಮೈಗೊಡವಿ ಹರಿಯುವಳು ಶರದಿ,

ಶುಕಪಿಕಗಳು ಸಂತಸದಿ ಕೊಡುತಿಹವು ಆ ದೇವನಿಗೆ ಈ ಸೃಷ್ಟಿಯ ವರದಿ.


ವಸಂತಾದಿ ಕಾಲದಲ್ಲಿ ಅರಳಿಯುವುದು ಹಲ ಪುಷ್ಪ,

ಗ್ರೀಷ್ಮ ಋತುವಿನಲ್ಲಿ ನೆತ್ತಿಸುಡುತಿವುದು ಆ ದಿನಪನ ತಾಪ.


ಈ ಧರೆಯ ಸೃಷ್ಟಿಯಲಿರುವುದು ಕಾಣದ ದೇವನ ಕೈವಾಡ,

ಸಿರಿದೇವಿಯು ಬಿಡುವಿಲ್ಲದೆ ಪೊರೆದಿಹಳು ಈ ಶ್ರೀಗಂಧದ ಬೀಡ.




- ರಕ್ಷಾ ಪಿ. ಹೆಚ್ 

School of Education (B.Ed)

St. Aloysius Deemed to be University, Mangalore.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top