ಭಾರತದ ವಿರುದ್ಧ ಅಮೇರಿಕಾ ಪಿತೂರಿ...!

Upayuktha
0



- ಟಿ. ದೇವಿದಾಸ್

ಚೀನಾ ಅಭಿವೃದ್ಧಿ ಮಾಡಿದಂತೆ ಭಾರತ ಅಭಿವೃದ್ಧಿ ಹೊಂದಲು ತಾನು ಎಂದಿಗೂ ಬಿಡುವುದಿಲ್ಲ ಎಂದು ಅಮೆರಿಕ ಹೇಳಿದ. ಅದಕ್ಕಾಗಿಯೇ ಇಂದು ಇರಾನ್-ಅಮೆರಿಕ ಯುದ್ಧವು ಭಾರತದ ಆರ್ಥಿಕತೆಯ ಮೇಲೆ ತೀವ್ರತರವಾದ ಪರಿಣಾಮ ಬೀರುತ್ತಿದೆ. ಅಷ್ಟಕ್ಕೂ ಅಮೆರಿಕ ಈ ಯುದ್ಧದಿಂದ ಸಾಧಿಸುವುದಾದರೂ ಏನು ಎಂಬುದು ಈಗಾಗಲೇ ಗೊತ್ತಾಗಿದೆ. ಅದು ಕಳೆದುಕೊಂಡಿದ್ದಕ್ಕೆ ಲೆಕ್ಕ ತಪ್ಪಿದೆ. ಲಾಭವನ್ನು ಪಡೆದುಕೊಂಡಿದೆ. ಇರಾನ್ ವಿಶ್ವದ ದೊಡ್ಡ ಶಕ್ತಿಯಾಗಿ ಬೆಳೆಯಬಾರದು, ಹಾರ್ಮುಜ್ ಜಲಸಂಧಿಯ ಮೇಲಿನ ಸಂಪೂರ್ಣ ನಿಯಂತ್ರಣವನ್ನು ತನ್ನ ಸುಪರ್ದಿಗೆ ಪಡೆಯುವ ದುಃಸ್ಸಾಹಸ ಅಮೆರಿಕದ್ದು. 


ಸಂಘರ್ಷ ನಡೆದ ವಾರದಲ್ಲೇ LPG ಸಿಲಿಂಡರ್ ಪೂರೈಕೆಯಲ್ಲಿ ಅಡಚಣೆಗಳು ಉಂಟಾಗಿದೆ. ತಮಿಳುನಾಡು, ಬೆಂಗಳೂರಿನಂಥ ಸ್ಥಳಗಳಲ್ಲಿ ಹೊಟೆಲ್ ಮತ್ತು ಪಿಜಿ ಸೌಕರ್ಯಗಳು ಕಾರ್ಯಾಚರಣೆಯನ್ನು ನಿಲ್ಲಿಸಿವೆ. ಇದು ಕೇವಲ ಆರಂಭವಷ್ಟೆ. ಭಾರತವು ತನ್ನ LPG ಆವಶ್ಯಕತೆಗಳಲ್ಲಿ ಸುಮಾರು ೬೦% ಅನ್ನು ಹಾರ್ಮುಜ್ ಜಲಸಂಧಿಯ ಮೂಲಕವೇ ಆಮದು ಮಾಡಿಕೊಳ್ಳುತ್ತದೆ. 


LPG ಕೊರತೆಯಿಂದ ಕೆಲಸವಿಲ್ಲದೆ ಜನರ ಆದಾಯ ಕಡಿಮೆಯಾಗುತ್ತದೆ. ಪ್ರವಾಸೋದ್ಯಮವೂ ಕ್ಷೀಣಿಸುತ್ತದೆ. ಬೆಲೆಯೇರಿಕೆಯಾಗುತ್ತದೆ. ಭಾರತದಲ್ಲಿ ಒಮ್ಮೆ ಬೆಲೆಯೇರಿದರೆ ಅವು ಸುಲಭವಾಗಿ ಇಳಿಯುವುದು ತೀರಾ ಕಡಿಮೆ. 


ನೇರವಾಗಿ ಹೇಳುವುದಾದರೆ, ಹಣದುಬ್ಬರವಾಗುತ್ತದೆ. ಆದರೆ, ಇನ್ನೂ ಮೋದಿಯವರು ಮೌನವಾಗಿದ್ದಾರೆ. LPG ಪೂರೈಕೆಯ ಬಿಕ್ಕಟ್ಟು ಸೃಷ್ಟಿಯ ಹಿಂದೆ ಅಮೇರಿಕಾದ ಪಿತೂರಿಯಿದೆಯೇ? ಆದರೂ ಹಾರ್ಮುಜ್ ಜಲಸಂಧಿಯಿಂದ ಭಾರತದ ಬಾವುಟವನ್ನು ಹೊತ್ತು ಕಚ್ಚಾತೈಲ ತುಂಬಿದ ಹಡಗುಗಳು ಭಾರತಕ್ಕೆ ಬರುತ್ತಿವೆ. 


ಇರಾನ್ ಸಂಪೂರ್ಣವಾಗಿ ಹೈರಾಣಾದರೂ ಪ್ರತಿರೋಧವನ್ನು ನಿಲ್ಲಿಸಲೇ ಇಲ್ಲ. ಅದು ಎರಡು ರಾಷ್ಟ್ರಗಳೊಂದಿಗೆ ಸೆಣೆಸಾಡುತ್ತಿದೆ. ತೈಲದ ಹರಿವನ್ನು ನಿಯಂತ್ರಿಸಿದೆ. ಹಾರ್ಮುಜ್ ಜಲಸಂಧಿಯ ಮೇಲಿನ‌ ನಿಯಂತ್ರಣವನ್ನೂ ಮುಂದುವರೆಸಿದೆ. ಗಲ್ಫ್ ರಾಷ್ಟ್ರಗಳು ಭವಿಷ್ಯದಲ್ಲಿ ಅಮೆರಿಕಾವನ್ನು ಅವಲಂಬಿಸಲು ಸಾಧ್ಯವಿಲ್ಲ‌. ತೈಲಬೆಲೆಯೇರಿಕೆಯಿಂದ ರಷ್ಯಾ ತನ್ನ ಆದಾಯವನ್ನು ಹೆಚ್ಚಿಸಿಕೊಂಡು ಯುಕ್ರೇನನ್ನು ಸಂಪೂರ್ಣವಾಗಿ ಗೆಲ್ಲುತ್ತದೆ. ತನ್ನ ಮಿಲಿಟರಿಯನ್ನು ತೈವಾನ್ ವಿರುದ್ಧ ಆಕ್ರಮಣಕಾರಿ ಸ್ಥಾನಕ್ಕೆ ಚೈನಾ ಸ್ಥಳಾಂತರಿಸುತ್ತದೆ. ಪೂರ್ವ ಏಷ್ಯಾದಲ್ಲಿ ಅಮೆರಿಕದ ಮಿಲಿಟರಿ ಬೆಂಬಲವನ್ನು ಇರಾನಿಗೆ ತಿರುಗಿಸಲಾಗಿರುವುದರಿಂದ ತೈವಾನ್ ಯಾವುದೇ ಹೋರಾಟವಿಲ್ಲದೆ ಚೈನಾವನ್ನು ಸೇರಲೊಪ್ಪುತ್ತದೆ. 


ಅಮೆರಿಕಾ ಕಂಡ ಅತ್ಯಂತ ‌ಕೆಟ್ಟ ಅಧ್ಯಕ್ಷ ಎಂದು ಅಮೆರಿಕಾದ ಇತಿಹಾಸದಲ್ಲಿ ಟ್ರಂಪ್ ಹೆಸರು ಮಾಡುತ್ತಾರೆ. 


ಮೂವರು ಮುದುಕರು ಜಗತ್ತಿನ‌ ನಿದ್ದೆ ಕೆಡಿಸುತ್ತಿದ್ದಾರೆ. ಹೋರಾಡಿ ಯುವ ಯೋಧರು ಪ್ರಾಣ ಬಿಡುತ್ತಿದ್ದಾರೆ. ಅಮಾಯಕ ಜನಸಾಮಾನ್ಯರು ಬಲಿಯಾಗುತ್ತಿದ್ದಾರೆ. ಪ್ರಾಣಹಾನಿ, ಆಸ್ತಿಹಾನಿಗೆ ಬರವಿಲ್ಲ. 


ನಮ್ಮಲ್ಲಿ,‌ ಡಿಸಿಎಂ ಡಿನ್ನರ್ ಪಾರ್ಟಿ ಕೊಟ್ಟಾಯ್ತು. ಈಗ ಸಿಎಂ ಡಿನ್ನರ್ ಪಾರ್ಟಿಯ ಸರದಿ...


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top