ಮಂಗಳೂರು: ನಗರದ ಸಂಗೀತ ಭಾರತಿ ಫೌಂಡೇಶನ್ ಆಶ್ರಯದಲ್ಲಿ ಉರ್ವ ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಸ್ತ್ರೀ ವಿಶಿಷ್ಟ ಪರಿಕಲ್ಪನೆಯ ಸಂಗೀತ ಕಾರ್ಯಕ್ರಮವನ್ನು ಗುರುಗಳಾದ ಶ್ರೀಮತಿ ಬಸ್ತಿ ಕವಿತಾ ಶೆಣೈ, ಶ್ರೀಮತಿ ವಿಭಾ ನಾಯಕ್, ಶ್ರೀಮತಿ ಶ್ರೀಲತಾ ಪ್ರಭು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಸಂಗೀತ ಭಾರತಿ ಫೌಂಡೇಶನ್ ಅಧ್ಯಕ್ಷರಾದ ಉಸ್ತಾದ್ ರಫೀಕ್ ಖಾನ್, ಉಪಾಧ್ಯಕ್ಷರಾದ ಶ್ರೀ ನರೇಂದ್ರ ಎಲ್ ನಾಯಕ್, ಕಾರ್ಯದರ್ಶಿ ಡಾ ಉಷಾಪ್ರಭಾ ಎನ್ ನಾಯಕ್, ಟ್ರಸ್ಟಿ ರಮೇಶ್ ಕೆಜಿ, ಖಚಾಂಚಿ ಕರುಣಾಕರ ಬಳ್ಕೂರು, ಸದಸ್ಯೆ ಸೌಮ್ಯ ಕಾಮತ್ ಉಪಸ್ಥಿತರಿದ್ಧರು.
ಪೂರ್ವಾರ್ಧಸಲ್ಲಿ ವಿಭಾ ಹೆಗ್ಡೆ ಮತ್ತು ಶಿವಾನಿ ಮಿರಾಜ್ ಕರ್ ಇವರಿಂದ ಶಾಸ್ತ್ರೀಯ ಜುಗಲ್ ಬಂಧಿ ಖಾರ್ಯಕ್ರಮ ನಡೆಯಿತು. ಇವರಿಗೆ ಹಾರ್ಮೋನಿಯಂ ನಲ್ಲಿ ಮೇಧಾ ಭಟ್, ತಬ್ಲದಲ್ಲಿ ವಿಜೇತಾ ಹೆಗ್ಡೆ, ತಂಬೂರದಲ್ಲಿ ಪ್ರತೀಕ್ಷ ಪ್ರಭು, ಶಾವರಿ ಸಾಥ್ ನೀಡಿದರು. ಉತ್ತರಾರ್ಧದಲ್ಲಿ ವಯೋಲಿನ್ ಟ್ರಯೋ ಕಾರ್ಯಕ್ರಮವನ್ನು ಸಂಗೀತಾ ಶಂಕರ್ ಮತ್ತು ನಂದಿನಿ ಶಂಕರ್, ರಾಗಿಣಿ ಶಂಕರ್ ನಡೆಸಿಕೊಟ್ಟರು. ಇವರಿಗೆ ತಬ್ಲದಲ್ಲಿ ಅನುರಾಧ ಪಾಲ್ ಸಾಥ್ ನೀಡಿದರು. ಈ ಕಾರ್ಯಕ್ರಮಕ್ಕೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಪ್ರವಾಸೋದ್ಯಮ ಇಲಾಖೆ, ಕೆನರಾ ಬ್ಯಾಂಕ್, ಡಾ ದಯಾನಂದ ಪೈ, ಕರ್ಣಾಟಕ ಬ್ಯಾಂಕ್, ಮುದ್ರಾ ಪ್ರಿಂರ್ಟಸ್ ಸಹ ಪ್ರಾಯೋಜಕತ್ವ ನೀಡಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


