ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರಾ ಮಹೋತ್ಸವ: ಸಾಂಸ್ಕೃತಿಕ ವೈವಿಧ್ಯ

Upayuktha
0


ಕಾಸರಗೋಡು: ವಿಟ್ಲದ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಸಿದ್ಧ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ವತಿಯಿಂದ 165 ನೇ ವೈವಿಧ್ಯಮಯ ನಿತ್ಯ ನೂತನ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ಬಹಳ ವೈಭವದಿಂದ ಜರಗಿತು.


ಸಾರ್ವಿಸ್ಕಂದ ಅವರ ವಿಶೇಷವಾದ ಯಕ್ಷಗಾನ ನೃತ್ಯವು ನೃತ್ಯವೇದಿಕೆಯನ್ನು ರಂಗೇರಿಸಿತು. ಪ್ರಥಮ್ಯ ಅವರ ರಿಂಗ್ ಡಾನ್ಸ್ ಎಲ್ಲರ ಆಕರ್ಷಸಿತು. ಮನಮೋಹಕವಾದ ನಾಟ್ಯವನ್ನು ಕುಮಾರಿ ದೀಪ್ತಿ ಸನ್ನಿಧಿ, ಪ್ರಿಯದರ್ಶಿನಿ ತಂಡ ಪ್ರದರ್ಶಿಸಿ ಪ್ರೇಕ್ಷಕರ ಮನಸೂರೆಗೊಂಡರು. ಹಾಡುಗಾರ ದಿವಾಕರ ಅವರ ಹಾಡುಗಳು ಮನರಂಜಿಸಿದವು. 


ಗುಂಪು ನೃತ್ಯ ನೀಡಿ ಸನ್ನಿಧಿ, ಸ್ಮಯ ಸ್ಕಂದ ಭಾಗ್ಯಲಕ್ಷ್ಮಿ, ಅಮಿತ, ವಿನೀತ, ರೇಷ್ಮ, ಶ್ರೀಜ ಮತ್ತು ಕಾರ್ತಿಕ ಅವರು ಸಭಾಂಗಣವನ್ನು ಮಂತ್ರಮುಗ್ಧಗೊಳಿಸಿದರು. ಡಾ. ವಾಣಿಶ್ರೀ ಅವರ ಕನ್ನಡಾಂಬೆಯ ಸಾಹಿತ್ಯ ಭರ್ಜರಿ ಚಪ್ಪಾಳೆ ಪಡೆಯಿತು.


ಕಲಾವಿದರೆಲ್ಲರಿಗೆ ಸೂಕ್ತವಾದ ಗೌರವ ಧನ ಬಹುಮಾನವನ್ನು ನೀಡಲಾಯಿತು. ಜಾತ್ರಾಮಹೋತ್ಸವದ ಸಂಘಟಕರ ವತಿಯಿಂದ ಡಾ. ವಾಣಿಶ್ರೀ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸಂಗೀತ ವಿದ್ವಾನ್ ವೇಳ್ಳಿಕ್ಕೋತ್ ವಿಷ್ಣುಭಟ್, ರಾಜೇಶ್ ವಿಟ್ಲ, ಶಶಿಕಲಾ, ಅಚ್ಯುತ ಭಟ್, ಲೋಕೇಶ್ ಕಶೆಕೋಡಿ ಮುಂತಾದ ಗಣ್ಯರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top