ಸುದಾನ ಶಾಲೆಯಲ್ಲಿ ಟಿಂಕರ್ ಫೆಸ್ಟ್

Upayuktha
0


ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಫೆಬ್ರವರಿ 13ರಂದು 2025-26ನೇ ವರ್ಷದ ಟಿಂಕರ್ ಫೆಸ್ಟ್‍ನ್ನು ಆಯೋಜಿಸಲಾಗಿತ್ತು. ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗರಾಜ್ “ವಿಜ್ಞಾನ – ತಂತ್ರಜ್ಞಾನಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು, ಇದಕ್ಕೆ ಟಿಂಕರ್ ಲ್ಯಾಬ್ ನಂತಹ ವ್ಯವಸ್ಥೆಯು ಸಹಕಾರಿ” ಎಂದು ಶುಭ ಹಾರೈಸಿದರು. 


ವೇದಿಕೆಯಲ್ಲಿ ಸುದಾನ ಟಿಂಕರ್ ಲ್ಯಾಬ್ ನ ಶಿಕ್ಷಕರಾದ ಶ್ರೀಯುತ ನಿದಿ, ಚೇತನ್,  ಚಿರಾಗ್, ಕೀರ್ತನ್, ಶ್ರೀಗುರು ಮತ್ತು ಸಂಯೋಜಕಿ ಶ್ರೀಮತಿ. ಪ್ರತಿಮಾ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಶ್ರೀಮತಿ. ಶ್ಯಾಮಲಾ ಬಂಗೇರ ಕಾರ್ಯಕ್ರಮವನ್ನು ನಿರೂಪಿಸಿದರು. 24 ಹೊಸ ವೈಜ್ಞಾನಿಕ ತಂತ್ರಜ್ಞಾನದ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಸಹಶಿಕ್ಷಕಿ ಶ್ರೀಮತಿ. ರಂಜಿತಾ, ಶ್ರೀಮತಿ. ರೇಖಾಮಣಿ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ಶ್ರೀ. ರಂಜಿತ್ ಮಥಾಯಿಸ್ ಸಹಕರಿಸಿದರು. ಈ ಕಾರ್ಯಕ್ರಮವನ್ನು ಶಾಲೆಯ ವಿಜ್ಞಾನ ಸಂಘ ಅವನಿಯು ಆಯೋಜಿಸಿತ್ತು. 

  

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top