ಒಂದು ಕೈಯಲ್ಲಿ ನಮಸ್ಕಾರ ಪದ್ಧತಿ ಸರ್ವಥಾ ಸಲ್ಲದು: ಶ್ರೀ ವಿದ್ಯೇಶತೀರ್ಥ ಶ್ರೀಪಾದರು

Upayuktha
0

 ಹೊಂಬೇಗೌಡ ನಗರದಲ್ಲಿ ಹಿಂದು ಸಂಗಮ 





ಬೆಂಗಳೂರು: ಶ್ರೀ ಭಾಗವತ ಪುರಾಣದಲ್ಲಿ ವರಾಹಾವತಾರದ ಕಥೆಯಲ್ಲಿ ಅಸುರನಾದ ಹಿರಣ್ಯಾಕ್ಷನು ಯುದ್ದಕ್ಕೆಂದು ಸಮುದ್ರದ ಆಳಕ್ಕೆ ಹೋಗುವಾಗ ಸಮುದ್ರರಾಜ ಎದುರಾಗ್ತಾನೆ.‌ ಆಗ ಆತನನ್ನು ಅಪಹಾಸ್ಯ ಮಾಡುವ ಸಲುವಾಗಿಯೇ ಹಿರಣ್ಯಾಕ್ಷ ಒಂದು ಕೈಯಲ್ಲಿ ನಮಸ್ಕಾರ ಮಾಡಿದ ಎಂಬ ಸಂಗತಿಯನ್ನು ಪೂಜ್ಯರಾದ ಶ್ರೀ ವೇದವ್ಯಾಸರು ತಿಳಿಸಿದ್ದಾರೆ. ಆದ್ದರಿಂದ ನಾವು ದೇವರಿಗೆ, ಧ್ವಜಗಳಿಗೆ ಭಾರತಮಾತೆಗೆ ಒಂದು ಕೈಯಲ್ಲಿ ನಮಸ್ಕರಿಸುವ ಪದ್ಧತಿ ನಮ್ಮ ಸಂಸ್ಕೃತಿ, ಸದಾಚಾರ ಅಲ್ಲವೇ ಅಲ್ಲ. ಅದು ಆಸುರೀ ವಿಕೃತಿಯಾಗಿದೆ. ನಮಸ್ಕಾರವು ಸಮರ್ಪಕವಾದಾಗ ಮಾತ್ರ ಸತ್ಫಲ ಸಾಧ್ಯ. ಆದ್ದರಿಂದ ಎಲ್ಲರೂ ಎರಡು ಕೈಯಲ್ಲಿಯೇ ನಮಸ್ಕರಿಸುವ ಪದ್ಧತಿಯನ್ನು ಅವಶ್ಯ ರೂಢಿಸಿಕೊಳ್ಳಬೇಕು ಎಂದು ಉಡುಪಿಯ ಶ್ರೀ ಭಂಡಾರಕೇರಿ ಮಠದ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ. 


ರಾ.ಸ್ವ. ಸಂಘದ ಶತಾಬ್ದಿ ಪ್ರಯುಕ್ತ ಬೆಂಗಳೂರು ವಿಲ್ಸನ್ ಗಾರ್ಡನ್ ಸಮೀಪದ ಹೊಂಬೇಗೌಡ ನಗರದಲ್ಲಿ ಶನಿವಾರ ನಡೆದ ಹಿಂದು ಸಂಗಮದಲ್ಲಿ ಪಾಲ್ಗೊಂಡು ಶ್ರೀಗಳು ಸಂದೇಶ ನೀಡಿದರು. 


ಹಿಂದು ಸಮಾಜ ಸಿಂಧುವಾದಾಗ ನಮ್ಮ ಶಕ್ತಿ ಏಕೀಕೃತವಾಗುತ್ತದೆ. ಅಂಥ ಶಕ್ತಿಯಿದ್ದಾಗ ಮಾತ್ರ ನಮ್ಮ‌ದೇಶ ಸಶಕ್ತ ಹಿಂದು ರಾಷ್ಟ್ರವಾಗ್ತದೆ.‌ ಕೇವಲ ದೈಹಿಕ ಮಾತ್ರವಲ್ಲ; ಮಾನಸಿಕವಾಗಿಯೂ ಸಮಾಜದ ಎಲ್ಲ ವರ್ಗ ಸಂಘಟಿತರಾಗಿ ಹೆಜ್ಜೆ ಇಟ್ಟಾಗ ಮಾತ್ರ ಅಧಿಕಾರಸ್ಥರೂ ಹಿಂದುತ್ವದ ಹಿತಕ್ಕೆ ಕೆಲಸಮಾಡಲು ಬದ್ಧರಾಗುತ್ತಾರೆ. ಆ ರೀತಿಯ ಅನುಶಾಸನವಾದಾಗ ಹಿಂದು ನೆಲದಲ್ಲಿ ಶಾಂತಿ ಸುಭಿಕ್ಷೆಗಳು ನೆಲೆಯಾಗುತ್ತವೆ ಎಂದು ಶ್ರೀಗಳು ವಿವರಿಸಿದರು. 


ವೇದಿಕೆಯಲ್ಲಿ ಶ್ರೀ ಬೇಲಿ ಮಠದ ಸ್ವಾಮೀಜಿಯವರೂ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top