ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು: ಆರು ದಿನಗಳ ಅಟಲ್ ಪ್ರಾಯೋಜಿತ ಎಫ್‍ಡಿಪಿ ಕಾರ್ಯಕ್ರಮ

Upayuktha
0

 


ಮೂಡುಬಿದಿರೆ: ಆಳ್ವಾಸ್ ತಾಂತ್ರಿಕ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ವತಿಯಿಂದ ಅಟಲ್ ಪ್ರಾಯೋಜಿತ ‘ಡಿಜಿಟಲ್ ಫಾರೆನ್ಸಿಕ್ಸ್ ಇನ್ ಸೈಬರ್ ಸೆಕ್ಯುರಿಟಿ” ವಿಷಯದಡಿ ಆರು ದಿನಗಳ ಆನ್‍ಲೈನ್ ಬೋಧಕ ವರ್ಗದ ಕೌಶಲ್ಯಾಭಿವೃದ್ಧಿ ಶಿಬಿರ ನಡೆಯಿತು.  


ಡೆಲ್ಟಾ ಎಕ್ಸಚೇಂಜ್ ಸಂಸ್ಥೆಯ ವೆಂಕಟೇಶ್ ಎಲ್. ಶರ್ಮಾ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸೈಬರ್ ಭದ್ರತಾ ತಜ್ಞ ಡಾ. ಮನೋಜ್ ವಿ.ಎನ್, ಅಗಮ್ಯ ಸೈಬರ್ ಟೆಕ್‍ನ  ಮಹೇಶ್ ವಸ್ತ್ರಾದ್  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 


ಕಾರ್ಯಕ್ರಮದಲ್ಲಿ ಡಿಜಿಟಲ್ ಫಾರೆನ್ಸಿಕ್ಸ್, ಸೈಬರ್ ಅಪರಾಧ ತನಿಖೆ, ಡೇಟಾ ಮರುಪಡೆಯುವ ತಂತ್ರಜ್ಞಾನ, ಸೈಬರ್ ಕಾನೂನು, ಎಥಿಕಲ್ ಹ್ಯಾಕಿಂಗ್ ಮತ್ತು ಸೈಬರ್ ಭದ್ರತಾ ವಿಧಾನಗಳ ಕುರಿತು  ತಾಂತ್ರಿಕ ಅಧಿವೇಶನಗಳು ನಡೆದವು. 


ರಿಇನ್ಫೋಸೆಕ್‍ನ ಸಮರ್ಥ್ ಬಿ. ಭಟ್, ಭಾರತ್ ಕುಮಾರ್ ಎನ್., ವೆಂಕಟೇಶ್ ಎಲ್. ಶರ್ಮಾ,  ಸೈಸೆಕ್‍ನ ಶಿವಲಿಂಗ ಸಾಲಕ್ಕಿ,  ಮಹೇಶ್ ವಸ್ತ್ರಾದ್,  ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ  ಕೌಶಿಕ್ ಜಿ.ಎನ್, ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಕೊಠಾರಿ  ಹಾಗೂ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಸ್ಲಂ ಬಿ. ನಂದ್ಯಾಲ್ ಸೆಷನ್‍ಗಳನ್ನು ನಡೆಸಿಕೊಟ್ಟರು.  ಸಮಾರೋಪ ಸಮಾರಂಭದಲ್ಲಿ ನಿಟ್ಟೆಯ ಪ್ರೊಫೆಸರ್ ಡಾ. ವಾಸುದೇವ ಆಚಾರ್ ಹಾಗೂ ಗೌರವ ಅತಿಥಿಯಾಗಿ  ಸಮರ್ಥ್ ಭಟ್ ಭಾಗವಹಿಸಿದರು.


ದೇಶದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಿಂದ ಒಟ್ಟು 246  ಉಪನ್ಯಾಸಕರು ಪಾಲ್ಗೊಂಡರು.  



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top